Site icon Vistara News

Avatar Re Release | ಬಾಕ್ಸ್​​ ಆಫೀಸ್​​ನಲ್ಲಿ ಮತ್ತೊಮ್ಮೆ ಸಂಚಲನ ಸೃಷ್ಟಿಸಿದ ‘ಅವತಾರ್​ -1’

Avatar Re Release

ಬಾಕ್ಸ್ ಆಫೀಸ್ ಕಲೆಕ್ಷನ್​ನಲ್ಲಿ ನಂಬರ್-1 ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ‘ಅವತಾರ್‌-1’ ಮತ್ತೆ ಸೌಂಡ್ ಮಾಡುತ್ತಿದೆ. ಇನ್ನೇನು ‘ಅವತಾರ್‌-2’ ರಿಲೀಸ್​ಗೆ ಕೌಂಟ್​ಡೌನ್ ಶುರುವಾಗಿರುವ ಹೊತ್ತಿನಲ್ಲೇ ಸಂಚಲನ ಸೃಷ್ಟಿಯಾಗಿದೆ. ಏಕೆಂದರೆ ಮತ್ತೊಮ್ಮೆ ಜಗತ್ತಿನಾದ್ಯಂತ ತನ್ನದೇ ಹವಾ ಸೃಷ್ಟಿಸಲು ‘ಅವತಾರ್‌-1’ ರೀ ಎಂಟ್ರಿ ಕೊಡುತ್ತಿದೆ. ಅಂದರೆ ‘ಅವತಾರ್‌-1’ ರೀ ರಿಲೀಸ್​ಗೆ (Avatar Re Release) ಕ್ಷಣಗಣನೆ ಆರಂಭವಾಗಿದೆ.

‘ಅವತಾರ್‌’ ಟೈಟಲ್ ಕೇಳಿದರೆ ಸಾಕು ಬಾಕ್ಸ್‌ ಆಫೀಸ್ ನಡುಗುತ್ತದೆ. ಜಗತ್ತಿನ ಎಲ್ಲ ಸಿನಿಮಾಗಳಿಗೂ ಬಾಸ್ ಆಗಿರುವ ‘ಅವತಾರ್‌-1’ ಮತ್ತೆ ಅಬ್ಬರಿಸಲು ಸಜ್ಜಾಗಿದೆ. ‘ಅವತಾರ್‌’ ಸೀಕ್ವೆಲ್ ಅಂದರೆ ‘ಅವತಾರ್‌-2’ ರಿಲೀಸ್ ಆಗುತ್ತಿರುವುದು ಗೊತ್ತಿರುವ ವಿಚಾರ. ಜೊತೆಗೆ ಮತ್ತೊಂದು ಸರ್ಪ್ರೈಸ್ ಕೂಡ ‘ಅವತಾರ್‌’ ಅಭಿಮಾನಿಗಳಿಗೆ ​​ಸಿಗುತ್ತಿದೆ. ಯಾರೂ ಊಹಿಸಲಾಗದ ಪ್ಲ್ಯಾನ್ ಜೊತೆ ಈ ಬಾರಿ ‘ಅವತಾರ್‌’ ತಂಡ ಗ್ರ್ಯಾಂಡ್ ರೀ ಎಂಟ್ರಿ ಕೊಡುತ್ತಿದೆ. ಶುಕ್ರವಾರ ಅಂದರೆ ಸೆಪ್ಟೆಂಬರ್ 23ಕ್ಕೆ ರೀ ರಿಲೀಸ್ ಆಗುತ್ತಿದೆ ಅವತಾರ್‌-1.

ಬಾಕ್ಸ್ ಆಫೀಸ್​ ಲೂಟಿ
13 ವರ್ಷಗಳ ಹಿಂದೆ ಚಿತ್ರ ಮಂದಿರಗಳಿಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟು ಯಾರೂ ಊಹೆ ಮಾಡಲಾಗದಷ್ಟು ಹಣ ದೋಚಿದ್ದ ಸಿನಿಮಾ ಮತ್ತೆ ಬರುತ್ತಿದೆ. ‘ಅವತಾರ್‌’ ಟೈಟಲ್ ಮೂಲಕವೇ ಇಡೀ ಜಗತ್ತಿನ ಗಮನ ಸೆಳೆದಿತ್ತು ಈ ಸಿನಿಮಾ. ಅದರಲ್ಲೂ ಕೋಟಿ ಕೋಟಿ ಭಾರತೀಯರಿಗೆ ‘ಅವತಾರ್‌’ ಎಂಬ ಹೆಸರು ಸಾಕಷ್ಟು ಹತ್ತಿರವಾಗಿತ್ತು. ನಮ್ಮ ನೆಲದ ಹೆಸರಿನ ಸಿನಿಮಾ ಹಾಲಿವುಡ್ ಅಂಗಳದಲ್ಲಿ ಅಬ್ಬರಿಸುತ್ತೆ ಎಂಬುದೇ ಖುಷಿಯ ಸಮಾಚಾರವಾಗಿತ್ತು. ಹೀಗಿರುವಾಗಲೇ ‘ಅವತಾರ್‌’ ಬಾಕ್ಸ್ ಆಫಿಸ್​ನಲ್ಲಿ ಹೊಸ ದಾಖಲೆ ಸೃಷ್ಟಿಸಿತ್ತು. ಆಗಿನ ಕಾಲಕ್ಕೆ ₹20 ಸಾವಿರ ಕೋಟಿಗೂ ಹೆಚ್ಚು ಹಣ ಬಾಚಿತ್ತು. ಇದೇ ಸಿನಿಮಾದ ಸೀಕ್ವೆಲ್ ಅಂದ್ರೆ ‘ಅವತಾರ್‌-2’ ರಿಲೀಸ್ ಆಗುತ್ತಿದ್ದು, ಅದಕ್ಕೂ ಮೊದಲು ‘ಅವತಾರ್‌-1’ ಮತ್ತೆ ರಿಲೀಸ್ ಅಂದ್ರೆ ರೀ ರಿಲೀಸ್ ಮಾಡಲು ನಿರ್ಧರಿಸಲಾಗಿದೆ.

2009ರಲ್ಲಿ ಬಿಡುಗಡೆಯಾಗಿದ್ದ ‘ಅವತಾರ್‌-1’ ಚಿತ್ರದ ದೃಶ್ಯ.

ಇದನ್ನೂ ಓದಿ: Vishal Shaktidhama Visit | ʻಶಕ್ತಿಧಾಮʼದಲ್ಲಿ ನಟ ವಿಶಾಲ್‌: ಅಪ್ಪು ನೆನೆದು ಭಾವುಕ

ಭರ್ಜರಿ ಪ್ಲ್ಯಾನ್..!
ಹತ್ತಿರ ಹತ್ತಿರ ಒಂದೂವರೆ ದಶಕದ ಬಳಿಕ ಅವತಾರ್ ಚಿತ್ರ ಸೀಕ್ವೆಲ್ ಮೂಲಕ ಬರುತ್ತಿದೆ. ಹೀಗಾಗಿ ಬಹುತೇಕರಿಗೆ ‘ಅವತಾರ್‌-1’ನ ಪಾತ್ರ ಪರಿಚಯ ಮರೆತು ಹೋಗಿರುತ್ತೆ. ಇದು ‘ಅವತಾರ್‌-2’ ನೋಡುವಾಗ ಗೊಂದಲ ಸೃಷ್ಟಿಸುತ್ತದೆ. ಇದೇ ಕಾರಣದಿಂದ ‘ಅವತಾರ್‌-1’ನ್ನು ಈಗ ಜಗತ್ತಿನಾದ್ಯಂತ ರೀ ರಿಲೀಸ್ ಮಾಡಲು ಅವತಾರ್‌ ಟೀಂ ನಿರ್ಧರಿಸಿದೆ. ಭಾರತದಲ್ಲಿ ಸೆಪ್ಟೆಂಬರ್ 23ರ ಶುಕ್ರವಾರ ‘ಅವತಾರ್‌-1’ ರೀ ರಿಲೀಸ್ ಆಗಲಿದೆ. ಈ ಮೂಲಕ ಹೊಸ ತಲೆಮಾರಿನ ಪ್ರೇಕ್ಷಕರೂ ‘ಅವತಾರ್‌-2’ ನೋಡುವಂತೆ ಮಾಡುವುದು ಜೇಮ್ಸ್ ಕ್ಯಾಮೆರಾನ್ ಪ್ಲ್ಯಾನ್ ಆಗಿದೆ.

‘ಅವತಾರ್‌-1’ ಚಿತ್ರದ ಗ್ರಾಫಿಕ್ಸ್ 2009ರಲ್ಲಿ ಅದ್ಭುತವನ್ನೇ ಸೃಷ್ಟಿಸಿತ್ತು.

ಸಾವಿರಾರು ಸ್ಕ್ರೀನ್..!
‘ಅವತಾರ್‌’ ಹೆಸರಲ್ಲೇ ಗತ್ತಿದೆ, ‘ಅವತಾರ್‌’ ಟೈಟಲ್​ನಲ್ಲೇ ಸೆಳೆತವಿದೆ. ಹೀಗಿರುವಾಗ ‘ಅವತಾರ್‌-1’ ರೀ ರಿಲೀಸ್ ಆಗುತ್ತೆ ಅಂದ್ರೆ ಸಣ್ಣ ವಿಚಾರ ಅಲ್ಲ. ಸಾವಿರಾರು ಸ್ಕ್ರೀನ್​ಗಳಲ್ಲಿ ಅವತಾರ್‌-1 ರೀ ರಿಲೀಸ್ ಮಾಡಲು ಪ್ಲ್ಯಾನ್ ಮಾಡಲಾಗಿದೆ. ‘ಅವತಾರ್‌-1’ ರೀ ರಿಲೀಸ್​ಗೆ ₹80 ಕೋಟಿ ಖರ್ಚು ಮಾಡಲಾಗಿದೆ. ಜೇಮ್ಸ್ ಕ್ಯಾಮೆರಾನ್ ಆ್ಯಕ್ಷನ್ ಕಟ್ ಹೇಳಿದ್ದ ಚಿತ್ರ 13 ವರ್ಷದ ಹಿಂದೆ ದೊಡ್ಡ ಮಟ್ಟದಲ್ಲಿ ಯಶಸ್ಸನ್ನು ಗಳಿಸಿತ್ತು. ಈಗಲೂ ಮತ್ತೊಮ್ಮೆ ಸಾವಿರಾರು ಕೋಟಿ ಗಳಿಸುವ ನಿರೀಕ್ಷೆ ಇದೆ.

ಒಟ್ಟಿನಲ್ಲಿ ಕೊರೊನಾ ಕಂಟಕದ ಬಳಿಕ ಜಗತ್ತಿನಾದ್ಯಂತ ಚಿತ್ರರಂಗ ಮತ್ತೊಮ್ಮೆ ಮೈಕೊಡವಿ ನಿಂತಿದೆ. ಅದರ ಭಾಗವಾಗಿ ಸಾಲು ಸಾಲಾಗಿ ಚಿತ್ರಗಳು ರಿಲೀಸ್ ಆಗುತ್ತಿದ್ದು, ಈ ಪಟ್ಟಿಯಲ್ಲಿ ‘ಅವತಾರ್‌-2’ ಕೂಡ ನಿಂತಿದೆ. ‘ಅವತಾರ್‌-2’ ಬಿಡುಗಡೆಗೂ ಮೊದಲು ಸೂಪರ್ ಸರ್ಪ್ರೈಸ್ ಕೊಡೋದಕ್ಕೆ ಜೇಮ್ಸ್ ಕ್ಯಾಮೆರಾನ್ ಮಾಸ್ಟರ್ ಪ್ಲ್ಯಾನ್ ಮಾಡಿದ್ದು, ಜಗತ್ತಿನಾದ್ಯಂತ ಕೋಟ್ಯಂತರ ಅಭಿಮಾನಿಗಳು ಕಾದು ಕುಳಿತಿದ್ದಾರೆ. ‘ಅವತಾರ್‌’ ಸಿನಿಮಾ ಒಟ್ಟಾರೆ 5 ಭಾಗಗಳನ್ನು ಹೊಂದಿರಲಿದೆ. ಇದೇ ಡಿಸೆಂಬರ್ 16ಕ್ಕೆ ‘ಅವತಾರ್‌’ ಪಾರ್ಟ್-2 ರಿಲೀಸ್ ಆಗಲಿದೆ. ನಂತರ ಅಂದ್ರೆ ಅವತಾರ್-3 ಚಿತ್ರ 2024ರ ಡಿಸೆಂಬರ್ 20ಕ್ಕೆ, 2026ರ ಡಿ.18ಕ್ಕೆ ಅವತಾರ್-4 ಹಾಗೂ 2028ರ ಡಿಸೆಂಬರ್ 22ರಂದು ಅವತಾರ್-5 ರಿಲೀಸ್‌ ಆಗಲಿದೆ. ಇಲ್ಲಿಗೆ ‘ಅವತಾರ್‌’ ಸಿನಿಮಾ ಅಂತ್ಯವಾಗಲಿದೆ.

ಇದನ್ನೂ ಓದಿ: Head Bush | ನಟ ರಾಕ್ಷಸ ಡಾಲಿ ಧನಂಜಯ್ ಅಬ್ಬರ ಶುರು!

Exit mobile version