Site icon Vistara News

Corona Lockdown | ಬಪ್ಪಿ ಲಹಿರಿಯ ‘ಜಿಮಿ ಜಿಮಿ’ ಹಾಡು ಚೀನಾದ ಪ್ರತಿಭಟನಾಕಾರರ ಧ್ಯೇಯಗೀತೆ!

ಬೀಜಿಂಗ್‌: ಖ್ಯಾತಿ ಸಂಗೀತ ನಿರ್ದೇಶಕ ಹಾಗೂ ಹಾಡುಗಾರ ದಿ. ಬಪ್ಪಿ ಲಹಿರಿ ಸಂಯೋಜಿಸಿರುವ ಡಿಸ್ಕೊ ಡಾನ್ಸರ್‌ ಸಿನಿಮಾದ ಹಾಡು ಭಾರತದಲ್ಲಿ ಸಿಕ್ಕಾಪಟ್ಟೆ ಹವಾ ಎಬ್ಬಿಸಿತ್ತು. 1982ರಲ್ಲಿ ಬಿಡುಗಡೆಯಾಗಿದ್ದ ಸಿನಿಮಾದ ಹಾಡು ಈಗಲೂ ಅಷ್ಟೇ ಜನಪ್ರಿಯತೆ ಹೊಂದಿದೆ. ಭಾರತದಲ್ಲಿ ಇಷ್ಟೆಲ್ಲ ಖ್ಯಾತಿ ಪಡೆದುಕೊಂಡಿರುವ ಈ ಹಾಡು ಚೀನಾದಲ್ಲಿ ಪ್ರತಿಭಟನಾಕಾರರ ಧ್ಯೇಯಗೀತೆಯಾಗಿ ಮಾರ್ಪಟ್ಟು ಸುದ್ದಿಯಾಗಿದೆ.

೨೦೧೯ರಲ್ಲಿ ಚೀನಾದಲ್ಲಿ ಮೊದಲ ಕೊರೊನಾ ಪ್ರಕರಣ ಕಂಡು ಬಂದ ಬಳಿಕದಿಂದ ಇದುವರೆಗೆ ನಿರಂತರವಾಗಿ ಕೋವಿಡ್‌-೧೯ ಲಾಕ್‌ಡೌಡ್‌ ಹೇರಲಾಗುತ್ತಿದೆ. ಜಗತ್ತಿನ ಇತರ ಎಲ್ಲ ದೇಶಗಳು ಕೊರೊನಾ ನಿಯಮಗಳನ್ನು ಸಡಿಲಗೊಳಿಸಿದರೂ, ಚೀನಾ ಮಾತ್ರ ಅದೇ ಕಠಿಣ ಕ್ರಮಗಳನ್ನು ಜಾರಿಯಲ್ಲಿಟ್ಟಿವೆ. ಒಂದು ಪ್ರಕರಣ ಕಂಡು ಬಂದರೂ ಇಡೀ ಪ್ರಾಂತ್ಯಕ್ಕೆ ಲಾಕ್‌ಡೌನ್ ಹೇರುತ್ತಿದೆ ಅಲ್ಲಿನ ಸರಕಾರ. ಇದು ಆ ದೇಶದ ಆರ್ಥಿಕತೆಗೆ ಭರ್ಜರಿ ಪೆಟ್ಟುಕೊಟ್ಟಿದೆ. ಜನರೂ ಅಗತ್ಯ ವಸ್ತುಗಳ ಕೊರತೆಯಿಂದ ನಲುಗಿ ಹೋಗಿದ್ದಾರೆ. ಹೀಗಾಗಿ ಅಲ್ಲಿನ ಸರಕಾರ ವಿರುದ್ಧ ತಿರುಗಿ ಬೀಳಲು ಆರಂಭಿಸಿದ್ದಾರೆ.

ಕಮ್ಯುನಿಷ್ಟರ ಬಿಗಿ ಹಿಡಿತ ಹೊಂದಿರುವ ಅಲ್ಲಿನ ಸರಕಾರದ ವಿರುದ್ಧ ಪ್ರತಿಭಟನೆ ಮಾಡುವುದು ಸುಲಭದ ಮಾತಲ್ಲ. ಅದರೆ, ಹತಾಶೆ ಮಿತಿಮೀರಿದ ಕಾರಣ ಧರಣಿ ಆರಂಭಿಸಿದ್ದಾರೆ. ಈ ಧರಣಿ ನಿರತರು ಬಪ್ಪಿ ಲಹಿರಿಯ ‘ಜಿಮಿ ಜಿಮಿ’ ಹಾಡನ್ನು ಹಾಡುತ್ತಾ ಪ್ರತಿಭಟನೆ ಮಾಡುತ್ತಿದ್ದಾರೆ. ಚೈನಾ ಭಾಷೆಯಲ್ಲಿ ‘ಜಿ ಮಿ ಜಿ ಮಿ’ ಎಂದರೆ ‘ಅನ್ನ ಕೊಡು ಅನ್ನ ಕೊಡು’ ಎಂಬ ಭಾವಾರ್ಥವಿದೆ. ಹೀಗಾಗಿ ಧರಣಿ ನಿರತರು ಅನ್ನ ಕೇಳಲು ಬಪ್ಪಿ ಲಹಿರಿಯ ಹಾಡನ್ನು ಬಳಸಿಕೊಂಡಿದ್ದಾರೆ.

ಚೀನಾ ತನ್ನ ಆಂತರಿಕ ಸಮಸ್ಯೆಗಳು ಹೊರ ಜಗತ್ತಿಗೆ ಗೊತ್ತಾಗದ ಹಾಗೆ ಮಾಡಲು ಎಲ್ಲ ಕ್ರಮಗಳನ್ನು ಕೈಗೊಂಡಿದೆ. ಹೀಗಾಗಿ ಅಲ್ಲಿನ ಸಾಮಾಜಿಕ ಮಾಧ್ಯಮಗಳು ಸರಕಾರ ಸೆನ್ಸಾರ್‌ಗೆ ಒಳಪಡುತ್ತವೆ. ಆದಾಗ್ಯೂ ಅಲ್ಲಿನ ಸಾಮಾಜಿಕ ಜಾಲತಾಣವಾಗಿರುವ “ಡೊಯಿನ್‌’ನಲ್ಲಿ ಕಣ್ತಪ್ಪಿ ಪ್ರತಿಭಟನಾಕಾರರ ಜಿಮಿ ಜಿಮಿ ಹಾಡು ಪೋಸ್ಟ್‌ ಆಗಿದೆ. ಜಾಗೃತಗೊಂಡ ಸರಕಾರ ತಕ್ಷಣವೇ ವಿಡಿಯೊವನ್ನು ಡಿಲೀಟ್ ಮಾಡಿಸಿದೆ.

೧೯೫೦ರಿಂದಲೂ ಚೀನಾದಲ್ಲಿ ಬಾಲಿವುಡ್ ಸಿನಿಮಾಗಳಿಗೆ ಬಹುಬೇಡಿಕೆ ಇತ್ತು. ಸಾಕಷ್ಟು ಹಿಂದಿ ಸಿನಿಮಾಗಳು ಅಲ್ಲೂ ಬಿಡುಗಡೆ ಕಾಣುತ್ತವೆ.

ಇದನ್ನೂ ಓದಿ |iPhone 14 | ಭಾರತದಲ್ಲಿ ಐಫೋನ್ 14 ಉತ್ಪಾದನೆ, ಚೀನಾಗೆ ಭಾರೀ ಹಿನ್ನಡೆ!

Exit mobile version