Site icon Vistara News

Bill Gates : 67 ವರ್ಷದ ಬಿಲ್‌ ಗೇಟ್ಸ್‌ ಡೇಟಿಂಗ್‌ ಮಾಡುತ್ತಿರುವ ಪೌಲಾ ಯಾರು?

#image_title

ವಾಷಿಂಗ್ಟನ್‌: ಅಮೆರಿಕದ ಪ್ರಸಿದ್ಧ ಉದ್ಯಮಿ ಬಿಲ್‌ ಗೇಟ್ಸ್‌ ಅವರು ಮೆಲಿಂದಾ ಗೇಟ್ಸ್‌ ಅವರೊಂದಿಗಿನ 30 ವರ್ಷದ ದಾಂಪತ್ಯಕ್ಕೆ 2021ರಲ್ಲಿ ಅಂತ್ಯ ಹಾಡಿದ್ದು ನಿಮಗೆಲ್ಲರಿಗೂ ಗೊತ್ತೇ ಇದೆ. ಈಗ ಬಿಲ್‌ ಗೇಟ್ಸ್‌ ಮತ್ತೆ ಪ್ರೀತಿಯ ಬಲೆಗೆ ಬಿದ್ದಿದ್ದಾರೆ ಎನ್ನುವ ಸುದ್ದಿಗಳಿವೆ. ಪೌಲಾ ಹರ್ಡ್‌ ಅವರೊಂದಿಗೆ ಬಿಲ್‌ ಗೇಟ್ಸ್‌ (Bill Gates) ಡೇಟಿಂಗ್‌ ಮಾಡುತ್ತಿದ್ದಾರೆ ಎಂದು ವರದಿಯಿದೆ.

ಇದನ್ನೂ ಓದಿ: Bill Gates Makes Roti: ಬಿಲ್‌ ಗೇಟ್ಸ್‌ ರೊಟ್ಟಿ ಲಟ್ಟಿಸಿದ್ದಕ್ಕೆ ಮೋದಿ ಮೆಚ್ಚುಗೆ, ಸಿರಿಧಾನ್ಯದ ರೊಟ್ಟಿ ಮಾಡಿ ಎಂದೂ ಸಲಹೆ
ಇತ್ತೀಚೆಗೆ ಮೆಲ್ಬೋರ್ನ್‌ನಲ್ಲಿ ನಡೆದ ಆಸ್ಟ್ರೇಲಿಯನ್‌ ಓಪನ್‌ನಲ್ಲಿ ಬಿಲ್‌ ಗೇಟ್ಸ್‌ ಮತ್ತು ಪೌಲಾ ಹರ್ಡ್‌ ಜತೆಯಾಗಿ ಕಾಣಿಸಿಕೊಂಡಿದ್ದರು. ಅದಕ್ಕೂ ಮೊದಲು ನಗರದಲ್ಲಿ ಅವರಿಬ್ಬರೂ ಕೈ ಕೈ ಹಿಡಿದು ನಡೆದಾಡಿದ್ದಾಗಿ ಸುದ್ದಿಗಳಾಗಿದ್ದವು. ಈ ಇಬ್ಬರು ವರ್ಷದ ಕಾಲದಿಂದ ಡೇಟಿಂಗ್‌ ಮಾಡುತ್ತಿದ್ದಾರೆ ಎಂದು ಪೀಪಲ್‌ ಹೆಸರಿನ ಮಾಧ್ಯಮ ಸಂಸ್ಥೆ ವರದಿ ಮಾಡಿದೆ.

ಯಾರು ಈ ಪೌಲಾ?
ಪೌಲಾ ಹರ್ಡ್‌ ಒರಾಕಲ್‌ನ ಮಾಜಿ ಸಿಇಒ ಮಾರ್ಕ್‌ ಹರ್ಡ್‌ ಅವರ ಪತ್ನಿಯಾಗಿದ್ದವರು. 2019ರಲ್ಲಿ ಮಾರ್ಕ್‌ ನಿಧನರಾದ ನಂತರ ಪೌಲಾ ಒಬ್ಬಂಟಿಯಾಗಿ ಜೀವನ ನಡೆಸುತ್ತಿದ್ದಾರೆ. ಅವರಿಗೆ ಇಬ್ಬರು ಮಕ್ಕಳಿದ್ದಾರೆ. 60 ವರ್ಷ ವಯಸ್ಸಿನ ಪೌಲಾ ಟೆನ್ನಿಸ್‌ ಅಭಿಮಾನಿಯಾಗಿದ್ದು, ವೃತ್ತಿಯಲ್ಲಿ ಈವೆಂಟ್‌ ಮ್ಯಾನೇಜರ್‌ ಆಗಿದ್ದಾರೆ. ಈ ಹಿಂದೆ ಟೆಕ್‌ ಎಕ್ಸಿಕ್ಯೂಟಿವ್‌ ಆಗಿಯೂ ಕೆಲಸ ಮಾಡಿದ್ದಾಗಿ ಲಿಂಕಡ್‌ಇನ್‌ನಲ್ಲಿ ಹೇಳಿಕೊಂಡಿದ್ದಾರೆ.

ಆಸ್ಟಿನ್‌ನ ಟೆಕ್ಸಾಸ್‌ ವಿಶ್ವವಿದ್ಯಾಲಯದಿಂದ 1984ರಲ್ಲಿ ಬಿಸಿನೆಸ್‌ ಅಡ್ಮಿನಿಸ್ಟ್ರೇಷನ್‌ ಪದವಿ ಪಡೆದಿದ್ದಾರೆ. ಅವರು ಟೆಕ್ಸಾಸ್‌ನ ಬೇಲರ್ ವಿಶ್ವವಿದ್ಯಾಲಯದ ಆಡಳಿತ ಮಂಡಳಿಯ ಸದಸ್ಯರೂ ಕೂಡ ಹೌದು. ಅವರು ಈ ಹಿಂದೆ ಬೇಲರ್ ಬ್ಯಾಸ್ಕೆಟ್‌ಬಾಲ್ ಪೆವಿಲಿಯನ್‌ಗೆ 7 ಮಿಲಿಯನ್ ಡಾಲರ್‌ ದೇಣಿಗೆ ನೀಡಿದ್ದರು.

Exit mobile version