Site icon Vistara News

Kabul Blast​ | ಕಾಬೂಲ್​ ಸೇನಾ ಏರ್​ಪೋರ್ಟ್​ ಹೊರಗೆ ದೊಡ್ಡಮಟ್ಟದ ಸ್ಫೋಟ; ಹಲವರು ಮೃತಪಟ್ಟಿರುವ ಶಂಕೆ​

Kabul Blast​

ಅಫ್ಘಾನಿಸ್ತಾನದ ಕಾಬೂಲ್​​ನಲ್ಲಿರುವ ಸೇನಾ ವಿಮಾನ ನಿಲ್ದಾಣದ ಹೊರಭಾಗದಲ್ಲಿ ದೊಡ್ಡ ಮಟ್ಟದ ಸ್ಫೋಟವುಂಟಾಗಿದ್ದು, ಅನೇಕರು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಅಫ್ಘಾನಿಸ್ತಾನ ಆಂತರಿಕ ಸಚಿವಾಲಯದ ವಕ್ತಾರ ಅಬ್ದುಲ್​ ನಫಿ ಎಂಬುವರು ರಾಯಿಟರ್ಸ್​ ಸುದ್ದಿ ಮಾಧ್ಯಮಕ್ಕೆ ತಿಳಿಸಿದ್ದಾರೆ.

ಇಂದು ಬೆಳಗ್ಗೆ 8ಗಂಟೆ ಹೊತ್ತಿಗೆ ಕಾಬೂಲ್​​ನಲ್ಲಿರುವ ಸೇನಾ​ ಏರ್​ಪೋರ್ಟ್​ ಹೊರಗೆ ದೊಡ್ಡದಾದ ಶಬ್ದ ಕೇಳಿತು. ಕೂಡಲೇ ಭದ್ರತಾ ಸಿಬ್ಬಂದಿ ಅಲ್ಲಿಗೆ ಧಾವಿಸಿದರು. ಆ ಪ್ರದೇಶವನ್ನು ಸಂಪೂರ್ಣವಾಗಿ ನಿರ್ಬಂಧಿಸಿದರು. ಏರ್​ಪೋರ್ಟ್​ ಸುತ್ತಲಿನ ಎಲ್ಲ ರಸ್ತೆಗಳನ್ನೂ ಬಂದ್ ಮಾಡಲಾಗಿದೆ ಎಂದು ಅಬ್ದುಲ್​ ನಫಿ ತಿಳಿಸಿದ್ದಾರೆ. ಏರ್​ಪೋರ್ಟ್ ಸಮೀಪದ ಸ್ಪೋಟದಲ್ಲಿ ಹಲವರು ಮೃತಪಟ್ಟಿದ್ದಾಗಿ ಹೇಳಿದ್ದರೂ, ಎಷ್ಟು ಜನ ಎಂದು ನಿಖರವಾಗಿ ಮಾಹಿತಿ ನೀಡಿಲ್ಲ.

ಅಫ್ಘಾನಿಸ್ತಾನ್​​ದಲ್ಲಿ ಈ ಹಿಂದೆ ತಾಲಿಬಾನ್ ಉಗ್ರರು ಪದೇಪದೆ ದಾಳಿ ನಡೆಸುತ್ತಿದ್ದರು. ಆದರೆ ಈಗ ಅಲ್ಲಿ ಅವರದ್ದೇ ಸರ್ಕಾರ ಆಡಳಿತದಲ್ಲಿ ಇದ್ದಾಗ್ಯೂ ಸ್ಫೋಟ-ದಾಳಿ ನಿಂತಿಲ್ಲ. ಇಸ್ಲಾಮಿಕ್ ಸ್ಟೇಟ್- ಖೊರಾಸನ್ ಉಗ್ರರು ಪದೇಪದೇ ಅಫ್ಘಾನ್ ಮೇಲೆ ದಾಳಿ ನಡೆಸುತ್ತಿದ್ದಾರೆ. ಆ ದೇಶದಲ್ಲಿ ಸಾವು-ನೋವು ನಿಲ್ಲುವ ಲಕ್ಷಣಗಳೇ ಕಾಣುತ್ತಿಲ್ಲ. ಈ ಸಲದ ಸ್ಫೋಟದ ಹೊಣೆಯನ್ನು ಈಗಿನವರೆಗೆ ಯಾರೂ ಹೊತ್ತಿಕೊಂಡಿಲ್ಲ.

ಇದನ್ನೂ ಓದಿ: Kabul Hotel Attack | ಕಾಬೂಲ್‌ನಲ್ಲಿರುವ ಚೀನಾ ಹೋಟೆಲ್‌ ಮೇಲೆ ಮುಂಬೈ ಮಾದರಿ ಉಗ್ರ ದಾಳಿ, ಮೂವರ ಸಾವು

Exit mobile version