ನವ ದೆಹಲಿ: ಅಫಘಾನಿಸ್ತಾನದ ರಾಜಧಾನಿ ಕಾಬೂಲ್‌ನಲ್ಲಿರುವ ರಷ್ಯಾ ರಾಯಭಾರ ಕಚೇರಿ ಬಳಿ ಬಾಂಬ್ ಸ್ಫೋಟ (Kabul Blast) ಸಂಭವಿಸಿದ್ದು, ಕಚೇರಿಯ ಇಬ್ಬರು ಸಿಬ್ಬಂದಿ ಸೇರಿದಂತೆ 20 ಜನರು ಸಾವಿಗೀಡಾಗಿದ್ದಾರೆ. ಮೃತಪಟ್ಟವರ ಪೈಕಿ ಆಫ್ಘನ್ ನಾಗರಿಕರೂ ಇದ್ದಾರೆ.
ಕಾಬೂಲ್‌ನ ದಾರುಲಮನ್ ರೋಡ್‌ನಲ್ಲಿರುವ ರಷ್ಯನ್ ರಾಯಭಾರ ಕಚೇರಿಯ ಪ್ರವೇಶದ್ವಾರದಲ್ಲಿ ಸೂಸೈಡ್ ಬಾಂಬರ್ ತನ್ನನ್ನು ತಾನು ಸ್ಫೋಟಿಸಿಕೊಂಡಿದ್ದಾನೆ ಎಂದು ಅಫಘಾನಿಸ್ತಾನ್ ಪೊಲೀಸರು ಈ ಮೊದಲು ಹೇಳಿದ್ದರು. ಆದರೆ, ಬಾಂಬರ್ ರಷ್ಯನ್ ರಾಯಭಾರ ಕಚೇರಿ ಪ್ರವೇಶ ದ್ವಾರಕ್ಕೆ ಹತ್ತಿರವಾಗುತ್ತಿದ್ದಂತೆ ಪೊಲೀಸರು ಆತನಿಗೆ ಗುಂಡು ಹೊಡೆದು ಕೊಂದಿದ್ದಾರೆ ಎನ್ನಲಾಗಿದೆ.
ಅಫಘಾನಿಸ್ತಾನದ ತಾಲಿಬಾನ್ ಸರ್ಕಾರವು ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿದೆ ಎಂದು ಸರ್ಕಾರದ ಡೆಪ್ಯುಟಿ ಸ್ಪೋಕ್ಸ್‌ಪರ್ಸನ್ ಬಿಲಾಲ್ ಕರಿಮಿ ಅವರು ತಿಳಿಸಿದ್ದಾರೆ. ಅಫಘಾನಿಸ್ತಾನದ ಮೇಲೆ ತಾಲಿಬಾನ್ ನಿಯಂತ್ರಣ ಸಾಧಿಸಿದ ಮೇಲೆ, ಕಾಬೂಲ್‌ನಲ್ಲಿ ರಾಯಭಾರ ಕಚೇರಿಗಳನ್ನು ತೆರೆದ ಕೆಲವೇ ರಾಷ್ಟ್ರಗಳ ಪೈಕಿ ರಷ್ಯಾ ಕೂಡ ಒಂದು. ಆದರೆ, ತಾಲಿಬಾನ್ ಸರ್ಕಾರವನ್ನು ರಷ್ಯಾ ಈವರೆಗೂ ಒಪ್ಪಿಕೊಂಡಿಲ್ಲ.
ಇದನ್ನೂ ಓದಿ | ಕಾಬೂಲ್‌ನ ಮದ್ರಸಾದಲ್ಲಿ ಸ್ಫೋಟ, 20 ಮಂದಿ ಸಾವು