Site icon Vistara News

ಕಾಬೂಲ್​ನಲ್ಲಿ ಐಸಿಸ್​ ಬಾಂಬ್​ ದಾಳಿ; 8 ಮಂದಿ ಸಾವು, 18ಕ್ಕೂ ಹೆಚ್ಚು ಜನರಿಗೆ ಗಾಯ

Taliban

ಕಾಬೂಲ್​​: ಅಫ್ಘಾನಿಸ್ತಾನದ ಕಾಬೂಲ್​​​ನಲ್ಲಿ ಶಿಯಾ ಸಮುದಾಯದವರು ವಾಸವಾಗಿದ್ದ ಸ್ಥಳದ ಇಸ್ಲಾಮಿಕ್ ಸ್ಟೇಟ್​ (IS)ಉಗ್ರ ಸಂಘಟನೆ ಬಾಂಬ್​ ದಾಳಿ ಮಾಡಿದ್ದು, ಎಂಟು ಮಂದಿ ಮೃತಪಟ್ಟಿದ್ದಾರೆ. 18ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ದಾಳಿ ನಡೆದ ತಕ್ಷಣ ಯಾವುದೇ ಉಗ್ರ ಸಂಘಟನೆಗಳೂ ಜವಾಬ್ದಾರಿ ಹೊತ್ತುಕೊಂಡಿರಲಿಲ್ಲ. ಆದರೆ ಕೆಲ ತಾಸುಗಳ ಬಳಿಕ ಇಸ್ಲಾಮಿಕ್​ ಸಂಘಟನೆ ಪ್ರಕಟಣೆ ಬಿಡುಗಡೆ ಮಾಡಿ, ಕಾಬೂಲ್​ನಲ್ಲಿ ದಾಳಿ ಮಾಡಿದ್ದು ನಾವೇ ಎಂದು ಹೇಳಿದೆ. ಅಷ್ಟೇ ಅಲ್ಲ, ಸುಮಾರು 20 ಜನರನ್ನು ಕೊಂದಿದ್ದಾಗಿಯೂ ತಿಳಿಸಿದೆ.

ಈ ಬಾರಿ ದಾಳಿ ನಡೆದಿದ್ದು ಮಹಿಳೆಯರು ಪ್ರಾರ್ಥನೆ ಸಲ್ಲಿಸುವ ಮಸೀದಿಯೊಂದರ ಮೇಲೆ. ಹೀಗಾಗಿ ಮೃತಪಟ್ಟವರಲ್ಲಿ ಹೆಚ್ಚಿನವರು ಮಹಿಳೆಯರೇ ಆಗಿದ್ದಾರೆ. ಅಫ್ಘಾನಿಸ್ತಾನದಲ್ಲಿ ಅಲ್ಪಸಂಖ್ಯಾತರಾಗಿರುವ ಹಜಾರಸ್​​ ಜನಾಂಗವನ್ನು ಟಾರ್ಗೆಟ್​ ಮಾಡಿ ದಾಳಿ ನಡೆದಿತ್ತು. ಮಸೀದಿಯ ಹೊರಭಾಗದಲ್ಲಿ, ತರಕಾರಿಗಳಿರುವ ತಳ್ಳುವ ಗಾಡಿಯಲ್ಲಿ ಬಾಂಬ್​ ಇಟ್ಟು ಸ್ಫೋಟಿಸಲಾಗಿದೆ. ಸಾವಿನ ಸಂಖ್ಯೆ ಕೂಡ ಜಾಸ್ತಿಯಾಗುವ ಸಾಧ್ಯತೆ ಇದೆ ಎಂದು ತಾಲಿಬಾನ್​ ಅಧಿಕಾರಿಗಳು ತಿಳಿಸಿದ್ದಾರೆ.

ಐಸಿಸ್​ ಎಂಬುದು ಅಫ್ಘಾನಿಸ್ತಾನಕ್ಕೆ 2014ರಿಂದಲೂ ಗಂಭೀರ ಸ್ವರೂಪದ ಬೆದರಿಕೆ ತಂದೊಡ್ಡುತ್ತಿದೆ. ಆ ದೇಶದ ಭದ್ರತೆಗೆ ಅಪಾಯವೊಡ್ಡುತ್ತಿದೆ. ಈಗಗಲ್ಲಿ ಇನ್ನೊಂದು ಉಗ್ರರ ಗುಂಪೇ ಅಧಿಕಾರಕ್ಕೆ ಬಂದಿದ್ದರೂ ತಾಲಿಬಾನ್​ ವಿರುದ್ಧ ತೀವ್ರ ಸ್ವರೂಪದ ಹೋರಾಟ ಸಾಧ್ಯವಾಗುತ್ತಿಲ್ಲ. ಹಾಗಿದ್ದಾಗ್ಯೂ ಅಫ್ಘಾನಿಸ್ತಾನದ ಪೂರ್ವದಲ್ಲಿ ತಾಲಿಬಾನ್​ ಹೋರಾಟಗಾರರು, ಐಸಿಸ್​ ಉಗ್ರರನ್ನು ಹತ್ತಿಕ್ಕಲು ಪ್ರಯತ್ನ ಮಾಡುತ್ತಿದ್ದಾರೆ.

ಇದನ್ನೂ ಓದಿ: ಹಿಂದು, ಸಿಖ್ಖರು ವಾಪಸ್‌ ಅಫ್ಘಾನ್‌ಗೆ ಬನ್ನಿ; ಭದ್ರತೆಯ ಭರವಸೆ ಕೊಡುತ್ತಿರುವ ತಾಲಿಬಾನ್‌

Exit mobile version