ಲಂಡನ್: ಕೊರೊನಾ ರೂಪಾಂತರಿ ಓಮಿಕ್ರಾನ್‌ಗೂ ಬ್ರಿಟನ್‌ನಲ್ಲಿ ಸೋಂಕು ನಿರೋಧಕ ಲಸಿಕೆ (Moderna Vaccine) ಅಭಿವೃದ್ಧಿಪಡಿಸಲಾಗಿದ್ದು, ಇದಕ್ಕೆ ಬ್ರಿಟನ್ ಸರಕಾರ ಅನುಮತಿ ನೀಡಿದೆ. ಹಾಗೆಯೇ, ಜಗತ್ತಿನಲ್ಲಿಯೇ ಮೊದಲ ಬಾರಿಗೆ ಓಮಿಕ್ರಾನ್ ರೂಪಾಂತರಿ ನಿರೋಧಕ ಲಸಿಕೆಗೆ ಅನುಮೋದನೆ ನೀಡಿದ ರಾಷ್ಟ್ರ ಎನಿಸಿದೆ.
ಓಮಿಕ್ರಾನ್ ರೂಪಾಂತರಿಯನ್ನೂ ನಿಗ್ರಹಿಸುವ ರೀತಿಯಲ್ಲಿ ಅಮೆರಿಕ ಮೂಲದ ಮಾಡರ್ನಾ ಕಂಪನಿಯ ಲಸಿಕೆಯನ್ನು ಪರಿಷ್ಕರಣೆಗೊಳಿಸಲಾಗಿದೆ. ಇದಕ್ಕೆ ಮೆಡಿಸಿನ್ ಅಂಡ್ ಹೆಲ್ತ್‌ಕೇರ್ ಪ್ರಾಡಕ್ಟ್ಸ್ ರೆಗ್ಯುಲೇಟರಿ ಏಜೆನ್ಸಿ (ಎಂಎಚ್‌ಆರ್‌ಎ) ಅನುಮೋದನೆ ನೀಡಿದೆ. ಇದನ್ನು ವಯಸ್ಕರಿಗೆ ಬೂಸ್ಟರ್ ಡೋಸ್ ಆಗಿ ನೀಡಲಾಗುತ್ತದೆ.
“ಸುರಕ್ಷತೆ, ಗುಣಮಟ್ಟ ಹಾಗೂ ಪರಿಣಾಮವನ್ನು ಪರಿಶೀಲನೆ ಮಾಡಿದ ಬಳಿಕ ಮಾಡರ್ನಾ ಲಸಿಕೆಗೆ ಅನುಮತಿ ನೀಡಲಾಗಿದೆ. ಮನುಷ್ಯನ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದು ಖಾತ್ರಿಯಾಗಿದ್ದು, ವಯಸ್ಕರಿಗೆ ಬೂಸ್ಟರ್ ಡೋಸ್ ಆಗಿ ನೀಡಲಾಗುತ್ತದೆ. ಇದು ಓಮಿಕ್ರಾನ್ ಜತೆಗೆ ೨೦೨೦ರಲ್ಲಿ ಪತ್ತೆಯಾದ ಮೂಲ ಸೋಂಕನ್ನೂ ನಿಯಂತ್ರಿಸುತ್ತದೆ” ಎಂದು ಎಂಎಚ್‌ಆರ್‌ಎ ತಿಳಿಸಿದೆ.
ಇದನ್ನೂ ಓದಿ | ಕೋವಿಡ್ ಲಸಿಕೆಯಿಂದ ಯುವಜನರಲ್ಲಿ ಹೃದಯ ರೋಗ ಹೆಚ್ಚಾಗಿದ್ದು ನಿಜವೇ?