ಬೀಜಿಂಗ್: ದಕ್ಷಿಣ ಚೀನಾದಲ್ಲಿ ಭೀಕರ ಬಸ್ ಅಪಘಾತ (China bus crash) ನಡೆದಿದ್ದು, 27 ಮಂದಿ ಮೃತಪಟ್ಟಿದ್ದಾರೆ. ಇದು ಈ ವರ್ಷದಲ್ಲೇ ಅತ್ಯಂತ ಡೆಡ್ಲಿಯಸ್ಟ್ ಆ್ಯಕ್ಸಿಡೆಂಟ್ ಎನ್ನಿಸಿದೆ. 47 ಪ್ರಯಾಣಿಕರು ಇದ್ದ ಈ ಬಸ್ ಗುಝೌ ಪ್ರಾಂತ್ಯದ ಗ್ರಾಮೀಣ ಪ್ರದೇಶ ರಸ್ತೆಯೊಂದರಲ್ಲಿ ಸಾಗುತ್ತಿತ್ತು. ಅದೊಂದು ದುರ್ಗಮ ಸ್ಥಳವಾಗಿದ್ದು, ರಸ್ತೆಯೂ ಚೆನ್ನಾಗಿಲ್ಲ. ಬಸ್ ಪಲ್ಟಿಯಾಗಿ ದುರಂತ ನಡೆದಿದೆ ಎಂದು ಸಂದು ಕೌಂಟಿ ಪೊಲೀಸರು ತಿಳಿಸಿದ್ದರು.
ಘಟನೆಯಲ್ಲಿ 20 ಮಂದಿ ಗಾಯಗೊಂಡಿದ್ದು, ಅವರನ್ನೆಲ್ಲ ಆಸ್ಪತ್ರೆಗೆ ದಾಖಲಿಸಲಾಗಿದೆ. ಅದರಲ್ಲೂ ಕೆಲವರು ಗಂಭೀರವಾಗಿ ಗಾಯಗೊಂಡಿದ್ದು ಅವರಿಗೆಲ್ಲ ತುರ್ತುವಿಭಾಗದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಚೀನಾ ರಸ್ತೆ ಜಾಲ ಮೇಲ್ವಿಚಾರಣಾ ಸೇವೆ ತನ್ನ ಟ್ವಿಟರ್ನಲ್ಲಿ ಅಪಘಾತದ ಬಗ್ಗೆ ಮಾಹಿತಿ ಹಂಚಿಕೊಂಡಿದೆ.
ಗುಝೌ ಪ್ರಾಂತ್ಯದಲ್ಲಿ ರಾತ್ರಿ ಸಂಚಾರಕ್ಕೆ ಕೆಲವು ರಸ್ತೆಗಳನ್ನು ಮುಚ್ಚಲಾಗಿದೆ. ಹಾಗಿದ್ದಾಗ್ಯೂ ಈ ಪ್ರಯಾಣಿಕರ ಬಸ್ ತಡರಾತ್ರಿ 2.40ರ ಹೊತ್ತಿಗೆ ಆ ರಸ್ತೆಯಲ್ಲಿ ಹೋಗಿದ್ಯಾಕೆ ಎಂದು ಸೋಷಿಯಲ್ ಮೀಡಿಯಾಗಳಲ್ಲಿ ಜನರು ಪ್ರಶ್ನಿಸುತ್ತಿದ್ದಾರೆ. ಗುಝೌ ಪ್ರಾಂತ್ಯದಲ್ಲಿ ಹಲವು ದುರ್ಗಮ ಪ್ರದೇಶಗಳು ಇರುವ ಜತೆ, ಕೊವಿಡ್ 19 ಪ್ರಕರಣಗಳೂ ಅತ್ಯಂತ ಹೆಚ್ಚಾಗಿವೆ. ಪ್ರಾರಂಭದಿಂದಲೂ ಕೊರೊನಾ ಅತ್ಯಂತ ಹೆಚ್ಚಾಗಿ ಬಾಧಿಸಿದ ಸ್ಥಳಗಳಲ್ಲಿ ಇದು ಮುಖ್ಯವಾಗಿದೆ. ಆಗಿನಿಂದಲೂ ಇಲ್ಲಿನ ಸುಮಾರು 100 ಟೋಲ್ ಸ್ಟೇಶನ್ಗಳನ್ನು ಮುಚ್ಚಲಾಗಿದೆ. ದೂರದ ಊರಿನ ಪ್ರಯಾಣಿಕರಿಗೆ ರಾತ್ರಿ ಪ್ರಯಾಣಕ್ಕೆ ಅವಕಾಶವೂ ಇಲ್ಲ. ಹಾಗಿದ್ದಾಗ್ಯೂ ನಿಯಮ ಉಲ್ಲಂಘಿಸಿ ಬಸ್ ಸಂಚಾರ ಮಾಡಿದ್ದು ಯಾಕೆ ಎಂಬುದು ಜನರು ಪ್ರಶ್ನೆ ಮಾಡುತ್ತಿದ್ದಾರೆ.
ಇದನ್ನೂ ಓದಿ: Accident | ಕೊಲ್ಹಾರ ತಾಲೂಕಿನಲ್ಲಿ ಕಾರು-ಸಾರಿಗೆ ಬಸ್ ನಡುವೆ ಅಪಘಾತ; ಇಬ್ಬರ ಸಾವು