Site icon Vistara News

ಲ್ಯಾಟಿನ್​ ಅಮೆರಿಕದಲ್ಲೂ ಹಾರುತ್ತಿದೆ ಚೀನಾದ ಬೇಹುಗಾರಿಕಾ ಬಲೂನ್​​; ಅಮೆರಿಕದತ್ತ ಬರುತ್ತಿಲ್ಲ ಎಂದ ಪೆಂಟಗನ್​

China Spy Balloon Detected in Latin America

#image_title

ಅಮೆರಿಕದ ಮೊಂಟಾನಾದಲ್ಲಿರುವ ಮಾಲ್ಮ್​ಸ್ಟ್ರೋಮ್​ ಏರ್​ಫೋರ್ಸ್​​​ನಲ್ಲಿರುವ ಅಣ್ವಸ್ತ್ರ ಕ್ಷಿಪಣಿ ಉಡಾವಣಾ ನೆಲೆಯ ಮೇಲ್ಭಾಗದಲ್ಲಿ ಚೀನಾದ ಪತ್ತೆದಾರಿ ಬಲೂನ್​ವೊಂದು ಹಾರಾಡುತ್ತಿರುವ ಬಗ್ಗೆ ಅಮೆರಿಕದ ರಕ್ಷಣಾ ವಿಭಾಗ ಪೆಂಟಗನ್​ ಫೆ.2ರಂದು ಹೇಳಿತ್ತು. ಅದರ ಬೆನ್ನಲ್ಲೇ ಈಗ ಲ್ಯಾಟಿನ್​ ಅಮೆರಿಕ ಪ್ರಾಂತ್ಯದ ಆಕಾಶದಲ್ಲೂ ಚೀನಾದ ಪತ್ತೇದಾರಿ ಬಲೂನ್​ ಹಾರಾಡುತ್ತಿರುವುದು ವರದಿಯಾಗಿದೆ.

ಲ್ಯಾಟಿನ್ ಅಮೆರಿಕ ಪ್ರಾಂತ್ಯದ ಆಕಾಶದಲ್ಲಿ ಬಲೂನ್​ ಒಂದು ಸಂಚರಿಸುತ್ತಿರುವ ಬಗ್ಗೆ ಮಾಹಿತಿ ಬಂದಿದೆ. ಅದನ್ನೂ ಕೂಡ ಟ್ರ್ಯಾಕ್​ ಮಾಡಲು ಪ್ರಯತ್ನಿಸಲಾಗುತ್ತಿದೆ. ಆದರೆ ಈ ಬಲೂನ್​ ಯಾವ ದೇಶದ ಮೇಲ್ಭಾಗದಲ್ಲಿದೆ ಎಂದು ಗೊತ್ತಾಗಿಲ್ಲ ಎಂದು ಪೆಂಟಗನ್ ಪತ್ರಿಕಾ ಕಾರ್ಯದರ್ಶಿ ಬ್ರಿಗ್ ಜನರಲ್ ಪ್ಯಾಟ್ರಿಕ್ ರೈಡರ್ ತಿಳಿಸಿದ್ದಾರೆ. ಹಾಗೇ, ಲ್ಯಾಟಿನ್​ ಅಮೆರಿಕ ಆಕಾಶದಲ್ಲಿ ಕಾಣಿಸಿಕೊಂಡ ಚೀನಾ ಬಲೂನ್​, ಯುನೈಟೆಡ್​ ಸ್ಟೇಟ್ಸ್​​ನತ್ತ ಹಾರಿ ಬರುತ್ತಿಲ್ಲ ಎಂಬುದೂ ಸ್ಪಷ್ಟವಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಕಲೆಹಾಕಲಾಗುತ್ತಿದೆ ಎಂದು ಪ್ಯಾಟ್ರಿಕ್​ ರೈಡರ್​ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಬೇಹುಗಾರಿಕೆಗಾಗಿ ಅಮೆರಿಕಕ್ಕೆ ಬಲೂನ್​ ಬಿಟ್ಟ ಚೀನಾ; ಹೊಡೆದುರುಳಿಸಲು ಹಿಂದೇಟು ಹಾಕುತ್ತಿರುವ ಪೆಂಟಗನ್​!

Exit mobile version