Site icon Vistara News

ಎಫ್-15 ಜೆಟ್ ಪತನದಲ್ಲಿ ಸೌದಿ ರಾಜಕುಮಾರ ಸಾವು

F-15 Jet crashed and Saudi prince Abdulaziz bin Bandar Dies

ರಿಯಾದ್: ಸೌದಿ ರಾಜಕುಮಾರ (Saudi Prince) ತಲಾಲ್ ಬಿನ್ ಅಬ್ದುಲಜೀಜ್ ಬಿನ್ ಬಂದರ್ ಬಿನ್ ಅಬ್ದುಲ್ ಅಜೀಜ್ ಅಲ್ ಸೌದ್ ಅವರು ವಿಮಾನ ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂದು ರಾಜ ಮನೆತನವು ತಿಳಿಸಿದೆ(Abdulaziz bin Bandar Dies). ಮೃತರಾದ ಅಬ್ದುಲಜೀಜ್ ಬಿನ್ ಬಂದರ್ ಅವರಿಗೆ 62 ವರ್ಷ ವಯಸ್ಸಾಗಿತ್ತು.

ರಿಯಾದ್‌ನ ಇಮಾಮ್ ತುರ್ಕಿ ಬಿನ್ ಅಬ್ದುಲ್ಲಾ ಮಸೀದಿಯಲ್ಲಿ ಮೃತ ರಾಜಕುಮಾರನಿಗಾಗಿ ಅಂತ್ಯಕ್ರಿಯೆಯ ಪ್ರಾರ್ಥನೆಯನ್ನು ನಡೆಸಲಾಗುವುದು ಎಂದು ಸೌದಿ ರಾಜಮನೆತನದ ರಾಯಲ್ ಕೋರ್ಟ್, ಅಬ್ದುಲಜೀಜ್ ಬಿನ್ ಬಂದರ್ ನಿಧನವನ್ನು ಸಂಕ್ಷಿಪ್ತ ಹೇಳಿಕೆಯಲ್ಲಿ ಪ್ರಕಟಿಸಿತು.

ರಾಜಕುಮಾರ ತಲಾಲ್ ಬಿನ್ ಅಬ್ದುಲಜೀಜ್ ಅವರು ಪ್ರಿನ್ಸ್ ಬಂದರ್ ಅವರ ಮಗ ಹಾಗೂ ಮೊದಲ ಸೌದಿ ದೊರೆ ಕಿಂಗ್ ಅಬ್ದುಲ್ ಅಜೀಜ್ ಅವರ ಮೊಮ್ಮಗರಾಗಿದ್ದಾರೆ. 1961ರಲ್ಲಿ ಜನಿಸಿದ ರಾಜಕುಮಾರ್ ಅವರು, ರಾಯಲ್ ಸೌದಿ ವಾಯುಪಡೆಯಲ್ಲಿ ಲೆಫ್ಟಿನೆಂಟ್ ಕರ್ನಲ್ ಆಗಿದ್ದರು. 2004 ರಿಂದ 2012 ರವರೆಗೆ ಸೌದಿ ಗುಪ್ತಚರ ಸಂಸ್ಥೆಯಾದ ಜಿಐಪಿನಲ್ಲಿ ಸಹಾಯಕ ಗುಪ್ತಚರ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದರು.

ರಾಜಮನೆತನವು ಪ್ರಿನ್ಸ್ ಸಾವಿಗೆ ಕಾರಣವನ್ನುತಿಳಿಸಿಲ್ಲವಾದರೂ ಲೆಬನಾನ್‌ನ ಅಲ್ ಮಾಶಾದ್ ಮಾಧ್ಯಮ ಸುದ್ದಿವಾಹಿನಿಯು, ಏರ್‌ ಫೋರ್ಸ್ ಜತೆ ಟ್ರೈನಿಂಗ್‌ನಲ್ಲಿ ಎಫ್‌-15 ತರಬೇತಿಯಲ್ಲಿ ತೊಡಗಿದ್ದಾಗ, ಅಪಘಾತಕ್ಕೀಡಾಗಿ ಅವರು ಮೃತಪಟ್ಟಿದ್ದಾರೆಂದು ವರದಿ ಮಾಡಿದೆ.

ಈ ಸುದ್ದಿಯನ್ನೂ ಓದಿ: Twitterನಲ್ಲಿ ಮುಂದುವರಿದ ಪಾಲುದಾರರ ಜಗಳ: ಎಲಾನ್‌ ಮಸ್ಕ್‌ Offer Reject ಮಾಡಿದ ಸೌದಿ ರಾಜಕುಮಾರ

Exit mobile version