Site icon Vistara News

Finland’s PM : ಪತಿಯೊಂದಿಗೆ ವಿಚ್ಛೇದನ ಘೋಷಿಸಿದ ಫಿನ್‌ಲ್ಯಾಂಡ್‌ ಪ್ರಧಾನಿ ಸನ್ನಾ

#image_title

ಹೆಲ್ಸಿಂಕಿ: ಪ್ರಪಂಚದ ಅತ್ಯಂತ ಕಿರಿಯ ಪ್ರಧಾನಿ ಎನ್ನುವ ಕೀರ್ತಿಗೆ ಭಾಜನರಾಗಿದ್ದ ಫಿನ್‌ಲ್ಯಾಂಡ್‌ ಪ್ರಧಾನಮಂತ್ರಿ (Finland’s PM) ಸನ್ನಾ ಮರಿನ್‌ ಅವರು ತಮ್ಮ ವೈಯಕ್ತಿಕ ಬದುಕಿನಲ್ಲಿ ಒಂಟಿಯಾಗುವ ನಿರ್ಧಾರ ತೆಗೆದುಕೊಂಡಿದ್ದಾರೆ. ಪತಿ ಮರ್ಕುಸ್‌ ರೈಕ್ಕೋನೆನ್‌ ಅವರೊಂದಿಗಿನ 19 ವರ್ಷಗಳ ದಾಂಪತ್ಯಕ್ಕೆ ಅಂತ್ಯ ಹಾಡುತ್ತಿರುವುದಾಗಿ ಅವರು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹೇಳಿಕೊಂಡಿದ್ದಾರೆ.

“ನಾವಿಬ್ಬರು ವಿಚ್ಛೇದನಕ್ಕೆ ಅರ್ಜಿ ಹಾಕಿದ್ದೇವೆ. ಒಟ್ಟಾಗಿ ಕಳೆದ 19 ವರ್ಷಗಳ ಬಗ್ಗೆ ಸಂತಸವಿದೆ. ಇನ್ನು ಮುಂದೆಯೋ ನಾವು ಬೆಸ್ಟ್‌ ಫ್ರೆಂಡ್‌ಗಳಾಗಿ ಕುಟುಂಬದ ರೀತಿಯಲ್ಲಿ ಜತೆಯಲ್ಲೇ ಇರಲಿದ್ದೇವೆ” ಎಂದು ಅವರು ತಿಳಿಸಿದ್ದಾರೆ. ಸನ್ನಾ ಮತ್ತು ಮರ್ಕುಸ್‌ ಅವರು ವಿಚ್ಛೇದನವಾದರೂ ತಮ್ಮ ಐದು ವರ್ಷದ ಮಗಳಿಗೋಸ್ಕರ ಕುಟುಂಬದ ರೀತಿಯಲ್ಲೇ ಇರುವ ನಿರ್ಧಾರ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: Viral Video : ಮೂರನೇ ಸ್ಥಾನ ಗಳಿಸಿದವಳಿಗೆ ಚಿನ್ನದ ಪದಕ! ಅಂದದ ಮಹಿಮೆಯಿದು ಎನ್ನುತ್ತಿದ್ದಾರೆ ನೆಟ್ಟಿಗರು
ಅವರ ಈ ಇನ್‌ಸ್ಟಾಗ್ರಾಂ ಸ್ಟೋರಿಯನ್ನು ಪತಿ ಮರ್ಕುಸ್‌ ಕೂಡ ಶೇರ್‌ ಮಾಡಿಕೊಂಡಿದ್ದಾರೆ.

ಸನ್ನಾ ಮರಿನ್‌ ಅವರು 2019ರಲ್ಲಿ ಚುನಾವಣೆಯಲ್ಲಿ ಅಧಿಕ ಮತ ಗಳಿಸುವ ಮೂಲಕ ಫಿನ್‌ಲ್ಯಾಂಡ್‌ ಪ್ರಧಾನಿಯಾಗಿ ಆಯ್ಕೆಯಾಗಿದ್ದರು. ಆದರೆ ಇದೀಗ ಅವರ ಸರ್ಕಾರ ಬೀಳುವ ಹಂತ ತಲುಪಿದೆ. 200 ಸೀಟಿನ ಬಲವಿರುವ ಸರ್ಕಾರದಲ್ಲಿ ಅವರ ಸೋಶಿಯಲ್‌ ಡೆಮೋಕ್ರಟ್ಸ್‌ ಪಕ್ಷದ ಬಲ ಕೇವಲ 43ಕ್ಕೆ ಇಳಿದಿದೆ. ನ್ಯಾಷನಲ್ ಕೊಅಲಯೇಷನ್‌ ಪಕ್ಷದ ಬಲ 48 ಇದ್ದರೆ ಆ್ಯಂಟಿ ಇಮ್ಮಿಗ್ರೇಷನ್‌ ಫಿನ್ಸ್‌ ಪಕ್ಷದ ಬಲ 46 ಇದೆ. ನ್ಯಾಷನಲ್‌ ಕೊಅಲಯೇಷನ್‌ ಮತ್ತು ಆ್ಯಂಟಿ ಇಮ್ಮಿಗ್ರೇಷನ್‌ ಫಿನ್ಸ್‌ ಪಕ್ಷ ಒಟ್ಟಾಗಿ ಸರ್ಕಾರ ರಚಿಸುವ ತಂತ್ರದಲ್ಲಿವೆ.

Exit mobile version