ಬರ್ಲಿನ್: ಜರ್ಮನಿಯಲ್ಲಿ ಅಪರಿಚಿತ ದುಷ್ಕರ್ಮಿಯೊಬ್ಬ ನಡೆಸಿದ ಗುಂಡಿನ ದಾಳಿಯಲ್ಲಿ 7 ಮಂದಿ ಸತ್ತು, ಹಲವರು ಗಾಯಗೊಂಡಿದ್ದಾರೆ.
ಜರ್ಮನಿಯ ಎರಡನೇ ಅತಿ ದೊಡ್ಡ ನಗರವಾದ ಹ್ಯಾಂಬರ್ಗ್‌ನ ಜೆಹೋವಾಸ್ ವಿಟ್ನೆಸ್ ಚರ್ಚ್‌ನಲ್ಲಿ ಈ ದಾಳಿ ನಡೆದಿದೆ. ಎಷ್ಟು ಮಂದಿ ಸತ್ತಿದ್ದಾರೆ ಎಂಬುದು ಖಚಿತವಾಗಿಲ್ಲವಾದರೂ ಸ್ಥಳೀಯ ʼಬೈಲ್ಡ್ʼ ಮಾಧ್ಯಮ ಏಳು ಮಂದಿ ಸತ್ತಿದ್ದಾರೆ, ಎಂಟಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಗುಂಡಿನ ದಾಳಿ ನಡೆಸಿದಾತ ಪೊಲೀಸರ ಕಾರ್ಯಾಚರಣೆಯಲ್ಲಿ ಮೃತಪಟ್ಟಿದ್ದಾನೆ ಎಂದು ಭಾವಿಸಲಾಗಿದೆ. ದಾಳಿಕೋರನ ಉದ್ದೇಶ ಇನ್ನೂ ತಿಳಿದುಬಂದಿಲ್ಲ.
ಜರ್ಮನಿಯಲ್ಲಿ ಇತ್ತೀಚೆಗೆ ಏಕವ್ಯಕ್ತಿ ಗುಂಡಿನ ದಾಳಿಗಳು ಹೆಚ್ಚುತ್ತಿವೆ. 2020ರ ಫೆಬ್ರವರಿಯಲ್ಲಿ ನಾಜಿ ಪಂಥೀಯ ಬಂದೂಕುಧಾರಿಯೊಬ್ಬ ಟರ್ಕಿಯ ವಲಸಿಗರು ಸೇರಿ ಒಂಬತ್ತು ಮಂದಿಯನ್ನು ಗುಂಡಿಕ್ಕಿ ಕೊಂದಿದ್ದ. 2019ರಲ್ಲಿ ಸಿನಗಾಗ್ ಒಂದರಲ್ಲಿ ಇನ್ನೊಬ್ಬ ಬಂದೂಕುಧಾರಿ ಜ್ಯೂಗಳ ಪವಿತ್ರ ಹಬ್ಬವಾದ ಯಾಮ್ ಕಿಪ್ಪುರ್ ಸಂದರ್ಣದಲ್ಲಿ ದಾಳಿ ನಡೆಸಿ ಇಬ್ಬರನ್ನು ಸಾಯಿಸಿದ್ದ.
ಇದನ್ನೂ ಓದಿ: US Shootings: ಕ್ಯಾಲಿಫೋರ್ನಿಯಾದಲ್ಲಿ ಸಾಮೂಹಿಕ ಗುಂಡಿನ ದಾಳಿ: 9 ಸಾವು