Site icon Vistara News

Guinness World Record: ಗಿನ್ನೆಸ್‌ ರೆಕಾರ್ಡ್ ಬುಕ್‌ ಸೇರಿದ 9 ಜನರ ಪಾಕಿಸ್ತಾನ ಕುಟುಂಬ, ಏನಿದರ ವಿಶೇಷ!?

pakistan family guinnes

ಕರಾಚಿ: ಪಾಕಿಸ್ತಾನದಲ್ಲಿ ಒಂದು ವಿಶೇಷ ಫ್ಯಾಮಿಲಿಯಿದೆ. ಆ ಇಡೀ ಫ್ಯಾಮಿಲಿಯೇ ಗಿನ್ನೆಸ್‌ ದಾಖಲೆ (Guinness World Record) ಪುಸ್ತಕದಲ್ಲಿ ಸೇರಿಹೋಗಿದೆ. ಅದರ ವಿಶೇಷತೆ ಏನು ಗೊತ್ತಾ? ಇಡೀ ಕುಟುಂಬದ ಎಲ್ಲರ ಜನ್ಮದಿನಾಂಕವೂ (birth day) ಒಂದೇ ಆಗಿದೆ!

ಹೌದು, ಈ ಕುಟುಂಬದ ವಿಶೇಷತೆ ಗಿನ್ನೆಸ್‌ ಬುಕ್‌ ಆಫ್‌ ರೆಕಾರ್ಡ್ಸ್‌ (Guinness book of World Records) ಸೇರಿಹೋಗಿದೆ. ಈ ಕುಟುಂಬದಲ್ಲಿ ಒಂಬತ್ತು ಮಂದಿ ಇದ್ದಾರೆ. ಎಲ್ಲರ ಜನ್ಮದಿನಾಂಕವೂ ಆಗಸ್ಟ್‌ 1. ತಂದೆ ಅಮೀರ್‌ ಅಲಿ, ತಾಯಿ ಖುದೀಜಾ, 19ರಿಂದ 30 ವರ್ಷದೊಳಗಿನ ಏಳು ಮಕ್ಕಳಾದ ಸಿಂಧೂ, ಅವಳಿ ಸೋದರಿಯರಾದ ಸಸುಯಿ- ಸಪ್ನಾ, ಅಂಬರ್‌, ಅವಳಿ ಸೋದರರಾದ ಅಮರ್‌- ಅಹ್ಮರ್‌ ಎಲ್ಲರೂ ಹುಟ್ಟಿದ್ದು ಆಗಸ್ಟ್‌ 1ರಂದು.

ಅಮೀರ್‌ ಮತ್ತು ಖುದೀಜಾ ದಂಪತಿಗೆ ಈ ದಿನದ ಇನ್ನೊಂದು ವಿಶೇಷ ಅಂದರೆ, ಅದು ಅವರಿಬ್ಬರ ಮ್ಯಾರೇಜ್‌ ಆನಿವರ್ಸರಿಯೂ ಆಗಿದೆ! 1991ರ ಆಗಸ್ಟ್‌ 1ರಂದು ಅವರ ವಿವಾಹವಾಯಿತು. ಅವರ ಮೊದಲ ಮಗಳು ಹುಟ್ಟಿದ್ದು ಸರಿಯಾಗಿ ಒಂದನೇ ವರ್ಷದ ಮದುವೆ ವಾರ್ಷಿಕೋತ್ಸವದಂದು!

ಮೊದಲ ಮಗಳು ಅದೇ ದಿನ ಹುಟ್ಟಿದ್ದು ನೋಡಿ ಇಬ್ಬರಿಗೂ ಆಶ್ಚರ್ಯವಾಯಿತಂತೆ. ನಂತರ ಪ್ರತಿ ಮಗುವೂ ಅದೇ ದಿನ ಜನಿಸುತ್ತ ಹೋದರು. ಪ್ರತಿಸಲವೂ ಅವರಿಗೆ ಆಶ್ಚರ್ಯವೇ ಕಾದಿತ್ತು, ಅಂದ ಹಾಗೆ ಮಕ್ಕಳು ಅದೇ ದಿನ ಜನಿಸುವಂತೆ ಇವರು ಯಾವುದೇ ʼಪ್ಲಾನ್‌ʼ ಮಾಡಿಕೊಂಡಿಲ್ಲ. ʼಇದು ದೇವರ ಕೊಡುಗೆʼ ಎಂದವರು ತಿಳಿದುಕೊಂಡಿದ್ದಾರೆ. ಪ್ರತಿ ಮಗುವೂ ಸಹಜವಾಗಿಯೇ ದಿನ ತುಂಬಿ ಹುಟ್ಟಿದೆ. ಯಾವ ಮಗುವಿಗೂ ಸಿಸೇರಿಯನ್‌ ಅಥವಾ ಪ್ರಿಮೆಚ್ಯೂರ್‌ ಜನನ ಆಗಿಲ್ಲ.

ಈ ಹಿಂದೆ, ಒಂದೇ ಕುಟುಂಬದ ಹೆಚ್ಚಿನ ಸೋದರ- ಸೋದರಿಯರು ವರ್ಷದ ಒಂದೇ ದಿನ ಜನಿಸಿದ ದಾಖಲೆ ಮ್ಯಾಂಗಿ ಕುಟುಂಬ (Mangi family) ಬಳಿ ಇತ್ತು. ಅಲ್ಲಿ 7 ಮಕ್ಕಳು ಒಂದೇ ಜನ್ಮದಿನ ಹೊಂದಿದ್ದರು. ಅದಕ್ಕೂ ಮುನ್ನ ಐವರು ಒಂದೇ ಜನ್ಮದಿನಾಂಕ ಹೊಂದಿದ್ದ ಅಮೆರಿಕದ ಕಮಿನ್ಸ್‌ ಕುಟುಂಬದ ಬಳಿ ದಾಖಲೆ ಇತ್ತು.

Exit mobile version