Site icon Vistara News

Honoring to the Ancestors: ಈ ಸಮುದಾಯದ ಜನ ಪ್ರತಿ ವರ್ಷ ಸಮಾಧಿಯಿಂದ ಶವ ಹೊರತೆಗೆದು ಸ್ವಚ್ಛಗೊಳಿಸುತ್ತಾರೆ!

Honoring to the Ancestors

ಪ್ರತಿ ವರ್ಷ ಆಗಸ್ಟ್ ನಲ್ಲಿ ಇಂಡೋನೇಷ್ಯಾ (Indonesia) ದತೊರಾಜಾ ಸಮುದಾಯದ (Datoraja community) ಜನರು ಪ್ರತಿ ವರ್ಷ ಆಗಸ್ಟ್ ನಲ್ಲಿ ತಮ್ಮ ಕುಟುಂಬ ಸದಸ್ಯರ ಶವಗಳನ್ನು ಸಮಾಧಿಯಿಂದ ಹೊರತೆಗೆದು ಅವುಗಳನ್ನು ಸ್ವಚ್ಛಗೊಳಿಸಿ, ಬಟ್ಟೆ ಬದಲಾಯಿಸಿ ನೆಚ್ಚಿನ ವಸ್ತುಗಳೊಂದಿಗೆ ಮತ್ತೆ ಸಮಾಧಿಯಲ್ಲಿ ಇರಿಸುವ ಸಂಪ್ರದಾಯವನ್ನು ನಡೆಸಿಕೊಂಡು ಬಂದಿದ್ದು, ಇದನ್ನು ‘ಮನೆನ್’ (Honoring to the Ancestors) ಎಂದು ಕರೆಯಲಾಗುತ್ತದೆ. ಇದರಿಂದ ಅವರು ಸಮಾಧಿಯಲ್ಲಿ ನೆಮ್ಮದಿಯಾಗಿ ಇರುತ್ತಾರೆ ಎನ್ನುವುದು ನಂಬಿಕೆ.

ಇಂಡೋನೇಷಿಯಾದ ದಕ್ಷಿಣ ಸುಲವೆಸಿಯ ಟೊರಾಜಾ ಪ್ರದೇಶದಲ್ಲಿ ( Toraja region) ದತೊರಾಜಾ ಸಮುದಾಯದ ಜನರು ಮಾನೆನ್ ಎಂಬ ಅಸಾಮಾನ್ಯ ಸಂಪ್ರದಾಯವನ್ನು ಅನೇಕ ವರ್ಷಗಳಿಂದ ಪಾಲಿಸಿಕೊಂಡು ಬಂದಿದ್ದಾರೆ.

ಕುಟುಂಬಗಳು ತಮ್ಮ ಸತ್ತ ಸಂಬಂಧಿಕರ ಶವಗಳನ್ನು ಸಮಾಧಿಯಿಂದ ಹೊರತೆಗೆದು ಸ್ವಚ್ಛಗೊಳಿಸುತ್ತಾರೆ. ಪ್ರತಿ ವರ್ಷ ಅಥವಾ ಮೂರು ವರ್ಷ ಅಥವಾ ಐದು ವರ್ಷಗಳಿಗೊಮ್ಮೆ ಆಗಸ್ಟ್‌ನಲ್ಲಿ ಈ ಸಂಪ್ರದಾಯವನ್ನು ನಡೆಸಲಾಗುತ್ತದೆ.

ದತೊರಾಜಾ ಸಮುದಾಯದ ಜನರು ಅಂತ್ಯಕ್ರಿಯೆ ಮತ್ತು ಅನಂತರದ ವಿಧಿಗಳಿಗೆ ಹೆಚ್ಚಿನ ಸಮಯ ಮತ್ತು ಹಣವನ್ನು ವಿನಿಯೋಗಿಸುತ್ತಾರೆ. ಮರಣವು ಅಂತ್ಯವಲ್ಲ ಎಂಬುದಾಗಿ ನಂಬುತ್ತಾರೆ. ಪೂರ್ವಜರ ಆತ್ಮಗಳನ್ನು ಸಮಾಧಾನಪಡಿಸುವುದು ಅವರಿಗೆ ಮುಖ್ಯವಾಗಿದೆ. ಪೂರ್ವಜರು ಅಸಮಾಧಾನಗೊಂಡರೆ ಕಳಪೆ ಭತ್ತದ ಕೊಯ್ಲಿಗೆ ಕಾರಣವಾಗಬಹುದು ಎನ್ನುವುದು ಅವರ ನಂಬಿಕೆ.

ಕುಟುಂಬ ಸದಸ್ಯರು ಸತ್ತ ಬಳಿಕ ಅವರ ದೇಹಗಳನ್ನು ಸುದೀರ್ಘ ಕಾಲದವರೆಗೆ ಮನೆಯಲ್ಲಿ ಇರಿಸುತ್ತಾರೆ. ಅದ್ದೂರಿಯಾಗಿ ಅಂತ್ಯಕ್ರಿಯೆಗಳನ್ನು ನಡೆಸುತ್ತಾರೆ.


ಇದನ್ನೂ ಓದಿ: Worlds Oldest Office Worker: ನಿವೃತ್ತಿ ಬಗ್ಗೆ ಇನ್ನೂ ಯೋಚನೆಯನ್ನೇ ಮಾಡಿಲ್ಲವಂತೆ 94ರ ಈ ಅಜ್ಜಿ!

ದತೊರಾಜಾ ಸಮುದಾಯದ ಜನರು ನಿಧನರಾದ ಜನರ ಶವಗಳನ್ನು ಮನೆಯಲ್ಲಿಯೇ ಇರಿಸುತ್ತಾರೆ. ಕೆಲವೊಮ್ಮೆ ವರ್ಷಗಳವರೆಗೆ ಇಟ್ಟುಕೊಳ್ಳುತ್ತಾರೆ. ಕುಟುಂಬವು ಅಂತ್ಯಕ್ರಿಯೆಗೆ ಸಾಕಷ್ಟು ಹಣವನ್ನು ಹೊಂದಿಸುವವರೆಗೂ ಶವವನ್ನು ಇಟ್ಟುಕೊಳ್ಳುತ್ತಾರೆ. ಅಂತ್ಯಕ್ರಿಯೆಯ ಸಮಾರಂಭಗಳು 12 ದಿನಗಳವರೆಗೆ ನಡೆಯುತ್ತದೆ. ಇದರಲ್ಲಿ ನೂರಾರು ಎಮ್ಮೆ, ಹಂದಿಗಳ ಬಲಿಯನ್ನು ಕೊಡಲಾಗುತ್ತದೆ. ಇಂತಹ ಸಮಾರಂಭಗಳಿಗೆ ನೂರಾರು ಸಾವಿರ ಡಾಲರ್‌ಗಳಷ್ಟು ವೆಚ್ಚವಾಗುವುದು.

ದತೊರಾಜಾ ಸಮುದಾಯದ ಜನರು ಹೆಚ್ಚಾಗಿ ಕ್ರಿಶ್ಚಿಯನ್ನರು. ಅವರ ಅಂತ್ಯಕ್ರಿಯೆಯ ಆಚರಣೆಗಳು ಪುರಾತನವಾದದ್ದು.

Exit mobile version