Site icon Vistara News

Imran Khan | ತಮಗೆ ಸಿಕ್ಕ ಚಿನ್ನದ ಪದಕ ಮಾರಾಟ ಮಾಡಿದ್ದ ಪಾಕ್‌ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌

PM Imran Khan

ಇಸ್ಲಾಮಾಬಾದ್‌ : ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ತಮಗೆ ಕ್ರಿಕೆಟ್‌ ಆಡುವ ಕಾಲದಲ್ಲಿ ಭಾರತದಿಂದ ದೊರಕಿದ್ದ ಚಿನ್ನದ ಪದಕವನ್ನು ಮಾರಾಟ ಮಾಡಿದ್ದಾರೆ ಎಂಬುದಾಗಿ ಅಲ್ಲಿನ ರಕ್ಷಣಾ ಸಚಿವ ಖವಾಜ ಆಸಿಫ್‌ ಆರೋಪಿಸಿದ್ದಾರೆ. ಟವಿ ಶೋ ಒಂದರಲ್ಲಿ ಮಾತನಾಡಿದ ಅವರು ತಮಗೆ ದೊರಕಿದ ಪದಕವನ್ನು ಮಾರಿ ದುಡ್ಡು ಮಾಡಿಕೊಂಡಿದ್ದಾರೆ ಎಂಬುದಾಗಿ ಆರೋಪಿಸಿದ್ದಾರೆ.

೭೦ ವರ್ಷದ ಮಾಜಿ ಕ್ರಿಕೆಟಿಗ ಹಾಗೂ ರಾಜಕಾರಣಿ ಇಮ್ರಾನ್‌ ಖಾನ್‌ ಅವರು, ಭ್ರಷ್ಟಾಚಾರದ ಆರೋಪದಲ್ಲಿ ಸಿಲುಕಿದ್ದು, ಅಲ್ಲಿನ ಖಜಾನೆಯಿಂದ ದುಬಾರಿ ಬೆಲೆಯ ವಾಚ್‌ ಅನ್ನು ಕಡಿಮೆ ಬೆಲೆಗೆ ಪಡೆದುಕೊಂಡು ಬಳಿಕ ಲಾಭಕ್ಕೆ ಮಾರಾಟ ಮಾಡಿದ ಅರೋಪ ಎದುರಿಸುತ್ತಿದ್ದಾರೆ. ಅವರ ಮೇಲೆ ಇದೀಗ ಚಿನ್ನದ ಪದಕವನ್ನು ಮಾರಿದ ಆರೋಪವನ್ನು ರಕ್ಷಣಾ ಸಚಿವರು ಮಾಡಿದ್ದಾರೆ.

“ಇಮ್ರಾನ್‌ ಖಾನ್‌ ಅವರು ಕ್ರಿಕೆಟ್‌ ಆಡುವ ದಿನಗಳಲ್ಲಿ ಭಾರತದಿಂದ ಚಿನ್ನದ ಪದಕವನ್ನು ಉಡುಗೊರೆಯಾಗಿ ಪಡೆದುಕೊಂಡಿದ್ದರು. ಅದು ಸಂಗ್ರಹಾಲಯದಲ್ಲಿ ಇತ್ತು. ತಾವು ಪ್ರಧಾನಿಯಾಗಿದ್ದ ಅವಧಿಯಲ್ಲಿ ಅದನ್ನವರು ಮಾರಾಟ ಮಾಡಿದ್ದಾರೆ,” ಎಂದು ಆಸಿಫ್‌ ಆರೋಪಿಸಿದ್ದಾರೆ. ಈ ಮಾಹಿತಿಯನ್ನು ಎಕ್ಸ್‌ಪ್ರೆಸ್‌ ಟ್ರಿಬ್ಯೂನ್‌ ಪ್ರಕಟ ಮಾಡಿದೆ.

ಮಂಗಳವಾರ ಪಾಕಿಸ್ತಾನದ ನಾಣ್ಯ ಸಂಗ್ರಹಕಾರರೊಬ್ಬರು ಇಮ್ರಾನ್‌ ಖಾನ್ ಅವರ ಬಳಿಯಿದ್ದ ಚಿನ್ನದ ಪದಕವನ್ನು ತಾವು ಖರೀದಿ ಮಾಡಿರುವುದಾಗಿ ಹೇಳಿಕೊಂಡಿದ್ದಾರೆ. ಅದನ್ನು ಲಾಹೋರ್‌ ಮೂಲದ ಖಾಸಗಿ ನಾಣ್ಯ ಮಾರಾಟದ ವ್ಯಕ್ತಿಯೊಬ್ಬರಿಂದ ೩೦೦೦ ರೂಪಾಯಿ ಕಡಿಮೆ ಬೆಲೆಗೆ ಪಡೆದಿರುವುದಾಗಿ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ |Imran Khan | ಮಾಧ್ಯಮಗಳಲ್ಲಿ ಇಮ್ರಾನ್‌ ಖಾನ್‌ ಭಾಷಣ ಪ್ರಸಾರ ಮಾಡುವಂತಿಲ್ಲ, ಗುರಾಣಿ ಬಳಸಿತೇ ಸರ್ಕಾರ?

Exit mobile version