Site icon Vistara News

Tejal Mehta: ಭಾರತ ಮೂಲದ ತೇಜಲ್‌ ಮೆಹ್ತಾ ಅಮೆರಿಕದ ಆಯೆರ್ ಜಿಲ್ಲಾ ಕೋರ್ಟ್‌ನ ಮೊದಲ ಜಡ್ಜ್‌ ಆಗಿ ಆಯ್ಕೆ

Indian-American Tejal Mehta sworn in as first justice of Ayer District Court in Massachusetts

ತೇಜಲ್‌ ಮೆಹ್ತಾ

ವಾಷಿಂಗ್ಟನ್‌: ಭಾರತ ಮೂಲದ ತೇಜಲ್‌ ಮೆಹ್ತಾ (Tejal Mehta) ಅವರು ಅಮೆರಿಕದ ಮಸಾಚುಸೆಟ್ಸ್‌ ರಾಜ್ಯದ ಆಯೆರ್‌ ಜಿಲ್ಲಾ ನ್ಯಾಯಾಲಯದ ಮೊದಲ ನ್ಯಾಯಾಧೀಶೆಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಅಸೋಸಿಯೇಟ್‌ ಜಡ್ಜ್‌ ಆಗಿದ್ದ ತೇಜಲ್‌ ಮೆಹ್ತಾ ಅವರನ್ನು ಅವಿರೋಧವಾಗಿ ನ್ಯಾಯಾಧೀಶೆಯನ್ನಾಗಿ ಆಯ್ಕೆ ಮಾಡಲಾಗಿದೆ. ಮಾರ್ಚ್‌ 2ರಂದು ಅವರು ಪ್ರಮಾಣವಚನ ಸ್ವೀಕರಿಸಿದ್ದಾರೆ.

ಪ್ರಮಾಣವಚನ ಕಾರ್ಯಕ್ರಮದಲ್ಲಿ ಮಾತನಾಡಿದ ಆಯೆರ್‌ ಜಿಲ್ಲಾ ನ್ಯಾಯಾಲಯದ ಚೀಫ್‌ ಜಸ್ಟಿಸ್‌ ಸ್ಟೇಸಿ ಫೋರ್ಟೆಸ್‌, “ತೇಜಲ್‌ ಮೆಹ್ತಾ ಅವರ ನಾಯಕತ್ವದ ಮೇಲೆ ನನಗೆ ಸಂಪೂರ್ಣ ವಿಶ್ವಾಸವಿದೆ. ಆಯೆರ್‌ ಜಿಲ್ಲಾ ನ್ಯಾಯಾಲಯದಿಂದ ಜನಪರ ತೀರ್ಪುಗಳು ಪ್ರಕಟವಾಗುವ ನಿರೀಕ್ಷೆ ಇದೆ” ಎಂದು ಹೇಳಿದರು.

ಪ್ರಮಾಣವಚನ ಸ್ವೀಕರಿಸಿದ ಬಳಿಕ ಮಾತನಾಡಿದ ತೇಜಲ್‌ ಮೆಹ್ತಾ, “ಜನರಿಗೆ ನ್ಯಾಯ ಒದಗಿಸುವ ದಿಸೆಯಲ್ಲಿ ಕಾರ್ಯನಿರ್ವಹಿಸುತ್ತೇನೆ. ಒಬ್ಬ ಲಾಯರ್‌ ಆಗಿ ಜನರ ಪರ ವಾದ ಮಂಡಿಸಬಹುದು. ಆದರೆ, ಜಡ್ಜ್‌ ಆಗಿ ನಿಜವಾಗಿ ಸಮುದಾಯದ ಪರ ಕಾರ್ಯನಿರ್ವಹಿಸಬಹುದು ಎಂಬ ನಂಬಿಕೆ ನನ್ನದು. ಅದರಂತೆ, ಕಾರ್ಯನಿರ್ವಹಿಸುತ್ತೇನೆ” ಎಂದು ಹೇಳಿದ್ದಾರೆ. ಕಾರ್ಯಕ್ರಮದಲ್ಲಿ ತೇಜಲ್‌ ಮೆಹ್ತಾ ಪುತ್ರಿ ಮೇನಾ ಶೇಠ್‌ ಕೂಡ ಭಾಗವಹಿಸಿದ್ದರು.

ಇದನ್ನೂ ಓದಿ: Meghana Pandit: ಭಾರತ ಮೂಲದ ಮೇಘನಾ ಪಂಡಿತ್‌ ಬ್ರಿಟನ್‌ ಆಕ್ಸ್‌ಫರ್ಡ್‌ ಯುನಿವರ್ಸಿಟಿ ಹಾಸ್ಪಿಟಲ್ಸ್‌ ಸಿಇಒ ಆಗಿ ಆಯ್ಕೆ

Exit mobile version