Site icon Vistara News

Iran-Israel Conflict: “ಅಚ್ಚರಿಯ ದಾಳಿ ನಿರೀಕ್ಷಿಸಿ”- ಇಸ್ರೇಲ್‌ಗೆ ಇರಾನ್‌ನಿಂದ ವಾರ್ನಿಂಗ್‌

Iran-Israel Conflict

ಇರಾನ್‌: ಇಸ್ರೇಲ್‌-ಗಾಜಾ(Israel-Gaza) ಪಟ್ಟಣದ ನಡುವಿನ ಸಂಘರ್ಷ ಎಂಟು ತಿಂಗಳು ಕಳೆದರೂ ಬೂದಿ ಮುಚ್ಚಿದ ಕೆಂಡದಂತಿದೆ. ಇದೀಗ ಇರಾನ್‌ ಬೆಂಬಲಿತ ಸಂಘಟನೆಯಾಗಿರುವ ಹಿಜ್ಬೊಲ್ಲಾ(Hezbollah), ಇಸ್ರೇಲ್‌ಗೆ ಬಿಗ್‌ ವಾರ್ನಿಂಗ್‌ ಒಂದನ್ನು ಕೊಟ್ಟಿದೆ. ತನ್ನ ಕಡೆಯಿಂದ ಇಸ್ರೇಲ್‌ ಒಂದು ಅಚ್ಚರಿಯ ದಾಳಿಯನ್ನು ನಿರೀಕ್ಷಿಸಬಹುದು ಎಂಬ ಎಚ್ಚರಿಕೆ ಸಂದೇಶವನ್ನು ಹಿಜ್ಬೊಲ್ಲಾ ರವಾನಿಸಿದೆ. ಇರಾನ್‌ ಅಧ್ಯಕ್ಷ ಇಬ್ರಾಹಿಂ ರೈಸಿ (Ebrahim Raisi) ದುರಂತ ಸಾವಿನ ಬೆನ್ನಲ್ಲೇ ಈ ಸಂದೇಶ ಇರಾನ್‌ನಿಂದ ಇಸ್ರೇಲ್‌ಗೆ ರವಾನೆ ಆಗಿದ್ದು(Iran-Israel Conflict), ಮಹಾಯುದ್ಧದ ಮುನ್ಸೂಚನೆಯಂತೆ ಕಾಣುತ್ತಿದೆ.

ಹಿಜ್ಬುಲ್ಲಾ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಹಸನ್‌ ನಸ್ರಲ್ಲಾ ಸ್ಥಳೀಯ ಮಾಧ್ಯಮಕ್ಕೆ ನೀಡಿದ ಭಾಷಣದಲ್ಲಿ ಇಸ್ರೇಲ್‌ಗೆ ಎಚ್ಚರಿಕೆ ಸಂದೇಶ ನೀಡಿದ್ದಾರೆ. “ಪ್ಯಾಲೇಸ್ಟಿನಿಯನ್ ಹಮಾಸ್ ಗುಂಪು ಅಕ್ಟೋಬರ್ 7 ರಂದು ನಡೆಸಿದ ದಾಳಿಯ ನಂತರ ಇಸ್ರೇಲ್ ಗಾಜಾದಲ್ಲಿ ಮಿಲಿಟರಿ ಆಕ್ರಮಣವನ್ನು ನಡೆಸುತ್ತಿದ್ದು, ಸಾವಿರಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಆದರೆ ನಮ್ಮ ಗುರಿ ಇನ್ನೂ ತಲುಪಿಲ್ಲ. ಅದನ್ನು ತಲುಪಲು ಇನ್ನೂ ಐದು ವರ್ಷಗಳು ಬೇಕಾಗಬಹುದು ಎಂದು ಸ್ವತಃ ಇಸ್ರೇಲ್‌ನ ಭದ್ರತಾ ಮಂಡಳಿ ಮುಖ್ಯಸ್ಥ ಹೇಳಿದ್ದಾರೆ. ಅದೂ ಅಲ್ಲದೇ ಇಸ್ರೇಲ್ ತನ್ನ ಮಿಲಿಟರಿ ಆಕ್ರಮಣವನ್ನು ತಕ್ಷಣವೇ ನಿಲ್ಲಿಸಲು ಅಂತರಾಷ್ಟ್ರೀಯ ನ್ಯಾಯಾಲಯದ (ICJ) ಆದೇಶ ಇದ್ದರೂ ರಫಾದ ಮೇಲೆ ಹಿಂಸಾತ್ಮಕ ದಾಳಿಗಳನ್ನು ನಡೆಸುತ್ತಿದೆ ಮತ್ತು ಅಂತರರಾಷ್ಟ್ರೀಯ ನಿರ್ಣಯಗಳನ್ನು ಗೌರವಿಸುತ್ತಿಲ್ಲ ಎಂದು ನಸ್ರಲ್ಲಾ ಆರೋಪಿಸಿದರು. ಹೀಗಾಗಿ ಸದ್ಯದಲ್ಲೇ ನಮ್ಮಿಂದ ಇಸ್ರೇಲ್‌ ಒಂದು ಅಚ್ಚರಿ ದಾಳಿಯನ್ನು ನಿರೀಕ್ಷಿಸಬಹುದು ಎಂದು ಎಚ್ಚರಿಸಿದ್ದಾರೆ.

ಅಫಘಾನಿಸ್ತಾನದಲ್ಲಿ ಉಗ್ರರ ಆಡಳಿತ, ಉಕ್ರೇನ್‌ ಮೇಲೆ ರಷ್ಯಾ ಆಕ್ರಮಣ, ಹಮಾಸ್‌ ಉಗ್ರರು ಹಾಗೂ ಇಸ್ರೇಲ್‌ ನಡುವಿನ ಸಮರವು ಜಾಗತಿಕ ಅಸ್ಥಿರತೆ ಉಂಟಾಗಿರುವ ಬೆನ್ನಲ್ಲೇ ಇಸ್ರೇಲ್‌ ಮೇಲೆ ಇರಾನ್‌ ದಾಳಿ ಮಾಡಿತ್ತು ಇಸ್ರೇಲ್‌ನ ಟೆಲ್‌ಅವಿವ್‌ ಮೇಲೆ ಇರಾನ್‌ 200ಕ್ಕೂ ಅಧಿಕ ಡ್ರೋನ್‌ ಹಾಗೂ ಕ್ಷಿಪಣಿಗಳ ಮೂಲಕ ದಾಳಿ (Israel Iran War) ಮಾಡಿತ್ತು. ಸುತ್ತಲೂ ಇಸ್ಲಾಮಿಕ್‌ ದೇಶಗಳನ್ನೇ ಒಳಗೊಂಡಿರುವ, ಶತ್ರುರಾಷ್ಟ್ರಗಳ ಭೀತಿ ಇದ್ದರೂ ಪ್ರತಿದಾಳಿ ಮೂಲಕ ಸೆಟೆದು ನಿಲ್ಲುವ ಇಸ್ರೇಲ್‌ ಇರಾನ್‌ ದಾಳಿಯಿಂದ ತತ್ತರಿಸಿತ್ತು.

ಇದನ್ನೂ ಓದಿ:Narendra Modi: 10 ವರ್ಷ ಬಲಿಷ್ಠ ಪ್ರತಿಪಕ್ಷ ಇರಲಿಲ್ಲ ಎಂಬುದೇ ನೋವು ತಂದಿದೆ; ಮೋದಿ ಬೇಸರ

ಇನ್ನು ಕಳೆದ ವಾರ ಹೆಲಿಕಾಪ್ಟರ್‌ ದುರಂತದಲ್ಲಿ ಇರಾನ್‌ ಅಧ್ಯಕ್ಷ ಇಬ್ರಾಹಿಂ ರೈಸಿ ಹಾಗೂ ಅವರ ಜೊತೆಗಿದ್ದ ಎಂಟು ಮಂದಿ ದುರ್ಮರಣಕ್ಕೀಡಾಗಿದ್ದರು. ಅರಸ್‌ ನದಿಗೆ ಇರಾನ್‌ ಹಾಗೂ ಅಜರ್‌ಬೈಜಾನ್‌ ಸೇರಿ ಅಣೆಕಟ್ಟು ಕಟ್ಟಿದ್ದು, ಅದನ್ನು ಉದ್ಘಾಟಿಸಲು ಇಬ್ರಾಹಿಂ ರೈಸಿ ಮತ್ತು ಇತರ ಗಣ್ಯರು ಅಜರ್‌ಬೈಜಾನ್‌ಗೆ ತೆರಳಿದ್ದರು.
ದುರಂತ ಸಾವನ್ನಪ್ಪಿದ ಇರಾನ್‌ ಅಧ್ಯಕ್ಷ ಇಬ್ರಾಹಿಂ ರೈಸಿ ಸಾವಿನ ಬೆನ್ನಲ್ಲೇ ಇದೊಂದು ಆಕಸ್ಮಿಕ ಘಟನೆ ಅಲ್ಲ ವಿಧ್ವಂಸಕ ಕೃತ್ಯ ಎಂಬ ಶಂಕೆ ವ್ಯಕ್ತವಾಗಿತ್ತು. ಪ್ರಪಂಚಾದ್ಯಂತ ಇರಾನ್‌ನ ಬದ್ಧ ವೈರಿ ರಾಷ್ಟ್ರವಾಗಿರುವ ಇಸ್ರೇಲ್‌(Israel)ನ ಕುಕೃತ್ಯ ಎಂಬ ಅನುಮಾನವೂ ವ್ಯಕ್ತವಾಗಿತ್ತು. ಆದರೆ ಈ ಎಲ್ಲಾ ಅನುಮಾನಗಳಿಗೆ ಇಸ್ರೇಲ್‌ ತೆರೆ ಎಳೆಯುವ ಪ್ರಯತ್ನ ಮಾಡಿತ್ತು. ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಇಸ್ರೇಲ್‌ ಈ ದುರಂತಕ್ಕೂ ತನಗೂ ಯಾವುದೇ ಸಂಬಂಧ ಇಲ್ಲ ಎಂದು ಸ್ಪಷ್ಟಪಡಿಸಿತ್ತು. ರೂಟರ್ಸ್‌ಗೆ ಪ್ರತಿಕ್ರಿಯೆ ನೀಡಿರುವ ಇಸ್ರೇಲ್‌ ಅಧಿಕಾರಿಗಳು, ರೈಸಿ ಸಾವಿಗೂ ಇಸ್ರೇಲ್‌ಗೂ ಯಾವುದೇ ಸಂಬಂಧ ಇಲ್ಲ. ಹೆಲಿಕಾಪ್ಟರ್‌ ದುರಂತದಲ್ಲಿ ಇಸ್ರೇಲ್‌ ಕೈವಾಡ ಇದೆ ಎಂಬ ಆರೋಪ ನಿರಾಧಾರ. ಈ ದುರ್ಘಟನೆಗೂ ಇಸ್ರೇಲ್ಗೂ ಯಾವುದೇ ಸಂಬಂಧ ಇಲ್ಲ ಎಂದು ಹೇಳಿದೆ.

Exit mobile version