ಟೆಹರಾನ್: ಇರಾನ್ 1650 ಕಿಲೋಮೀಟರ್‌ಗಳ ವ್ಯಾಪ್ತಿಯ ಹೊಸದೊಂದು ಕ್ಷಿಪಣಿಯನ್ನು ಪರೀಕ್ಷಾರ್ಥ ಉಡಾಯಿಸಿದೆ ಎಂದು ಆ ದೇಶದ ಸೈನ್ಯದ ಟಾಪ್ ಕಮಾಂಡರ್ ಮಾಹಿತಿ ನೀಡಿದ್ದಾರೆ. ಇದೇ ವೇಳೆಗೆ, ʼʼನಮ್ಮ ಉದ್ದೇಶ ಡೊನಾಲ್ಡ್ ಟ್ರಂಪ್‌ರನ್ನು ಕೊಲ್ಲುವುದುʼʼ ಎಂದಿದ್ದಾರೆ.
ಇರಾನ್‌ನ ಸೈನ್ಯದ ಮುಖ್ಯಸ್ಥ ಅಮಿರಾಲಿ ಹಾಜಿಜಾದೆ ಅವರು ಕ್ಷಿಪಣಿ ಉಡಾವಣೆ ಮಾಹಿತಿ ನೀಡಿದ್ದಾರೆ. ʼʼ1650 ಕಿಲೋಮೀಟರ್ ವ್ಯಾಪ್ತಿಯ ಕ್ಷಿಪಣಿಯನ್ನು ಇರಾನ್‌ನ ಸೈನ್ಯಕ್ಕೆ ಸೇರಿಸಲಾಗುತ್ತಿದೆʼʼ ಎಂದಿದ್ದಾರೆ. ಇದು ಅರಬ್ ಹಾಗೂ ಯುರೋಪ್ ಪ್ರಾಂತ್ಯದಲ್ಲಿ ಕಳವಳವನ್ನು ಹೆಚ್ಚಿಸುವಂಥ ನಡೆಯಾಗಿದೆ. ಅಮೆರಿಕದ ಬಗ್ಗೆ ವಿದ್ವೇಷದ ಮಾತುಗಳನ್ನು ಆಡುತ್ತ ಬಂದಿರುವ ಇರಾನ್ ನಿರ್ಮಿತ ಡ್ರೋನ್‌ಗಳನ್ನು ಇತ್ತೀಚೆಗೆ ರಷ್ಯಾದ ಸೈನ್ಯ ಕೂಡ ಬಳಸಿತ್ತು.
2020ರಲ್ಲಿ ಇರಾನ್‌ನ ಮಿಲಿಟರಿ ಕಮಾಂಡರ್ ಖಾಸಿಂ ಸುಲೇಮಾನಿ ಮೇಲೆ ಅಮೆರಿಕ ಡ್ರೋನ್ ದಾಳಿ ನಡೆಸಿ ಕೊಂದುಹಾಕಿದ ಬಳಿಕ, ಪ್ರತೀಕಾರ ತೀರಿಸಿಕೊಳ್ಳಲು ಇರಾನ್‌ನ ಸೈನ್ಯದ ಮುಖಂಡರು ಹಪಹಪಿಸುತ್ತಿದ್ದಾರೆ. ʼʼನಮ್ಮ ಉದ್ದೇಶ ಟ್ರಂಪ್ ಹಾಗೂ ಪಾಂಪೆಯೊ (ಮಾಜಿ ವಿದೇಶಾಂಗ ಕಾರ್ಯದರ್ಶಿ) ಅನ್ನು ಕೊಲ್ಲುವುದಾಗಿದೆʼʼ ಎಂದು ಅಲ್ಲಿನ ಸೇನಾ ಕಮಾಂಡರ್ ಸಂದರ್ಶನದಲ್ಲಿ ಹೇಳಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಇರಾನ್ ತನ್ನ ಅಣ್ವಸ್ತ್ರ ಹೊರಬಹುದಾದ ಬ್ಯಾಲಿಸ್ಟಿಕ್ ಕ್ಷಿಪಣಿಗಳ ವ್ಯಾಪ್ತಿಯನ್ನು ವಿಸ್ತರಿಸುತ್ತಿದೆ. ತಾನು ಹೈಪರ್‌ಸಾನಿಕ್ ಬ್ಯಾಲಿಸ್ಟಿಕ್ ಕ್ಷಿಪಣಿಯನ್ನೂ ಆವಿಷ್ಕರಿಸಿದ್ದೇನೆ ಎಂದು ಇರಾನ್ ಇತ್ತೀಚೆಗೆ ಹೇಳಿಕೊಂಡಿತ್ತು. ಆದರೆ ಇದನ್ನು ಅಮೆರಿಕ ಅಸಾಧ್ಯವೆಂದು ತಳ್ಳಿಹಾಕಿದೆ.
ಇದನ್ನೂ ಓದಿ: Viral News : ನೃತ್ಯ ಮಾಡಿದ್ದಕ್ಕೇ 10 ವರ್ಷ ಜೈಲು ಶಿಕ್ಷೆ! ಇರಾನ್‌ನ ಜೋಡಿಗೆ ಬಂತು ಸಂಕಷ್ಟ