ಟೆಹ್ರಾನ್: ಇರಾನ್(Iran) ರಾಜಧಾನಿ ಟೆಹ್ರಾನ್‌ನಲ್ಲಿ ಎರಡು ದಿನಗಳ ಹಿಂದೆಯಷ್ಟೇ ಹಮಾಸ್(Hamas) ರಾಜಕೀಯ ವಿಭಾಗದ ಮುಖ್ಯಸ್ಥ ಇಸ್ಮಾಯಿಲ್ ಹನಿಯೆಹ್‌ನ (Ismail Haniyh Killing) ಹತ್ಯೆಗೆ ಒಂದು ತಿಂಗಳ ಹಿಂದೆಯೇ ಆತ ತಂಗುವ ಅತಿಥಿಗೃಹದಲ್ಲಿ ಬಾಂಬ್ ಅಳವಡಿಸಲಾಗಿತ್ತು ಎಂಬ ವಿಚಾರ ಬಯಲಾಗಿದೆ. ಇದರ ಬೆನ್ನಲ್ಲೇ ಈ ಕೃತ್ಯಕ್ಕೆ ಇಸ್ರೇಲ್‌ನ ಗುಪ್ತಚರ ಇಲಾಖೆ ಮೊಸಾದ್ ಇರಾನ್‌ನಲ್ಲಿ ಗೂಢಾಚಾರನನ್ನು ನೇಮಿಸಿತ್ತು ಎಂಬ ವಿಚಾರ ಇದೀಗ ಬಹಳ ಚರ್ಚೆಯಾಗುತ್ತಿದೆ.
ಇಂಗ್ಲೆಂಡ್ ಮೂಲದ ಪತ್ರಿಕೆ ಟೆಲಿಗ್ರಾಫ್ ವರದಿ ಮಾಡಿದ್ದು, ಆರಂಭದಲ್ಲಿ ಇಸ್ರೇಲ್, ಇಸ್ಮಾಯಿಲ್ ಹನಿಯೆಹ್ ಹತ್ಯೆಗೆ ಮೇನಲ್ಲೇ ಪ್ಲ್ಯಾನ್ ರೂಪಿಸಿತ್ತು. ಮಾಜಿ ಇರಾನಿಯನ್ ಅಧ್ಯಕ್ಷ ಇಬ್ರಾಹಿಂ ರೈಸಿ ಅಂತ್ಯಕ್ರಿಯೆಗೆ ಆಗಮಿಸಿದ್ದ ಸಂದರ್ಭದಲ್ಲಿ ಹನಿಯೆಹ್ ಹತ್ಯೆಗೆ ಸಂಚು ರೂಪಿಸಲಾಗಿತ್ತು. ಆದರೆ ಅತಿ ದೊಡ್ಡ ಪ್ರಮಾಣದ ಜನ ಕಾರ್ಯಕ್ರಮದಲ್ಲಿ ಜಮಾಯಿಸಿದ್ದ ಕಾರಣ ಆ ಯೋಜನೆಯನ್ನು ಕೈಬಿಡಲಾಗಿತ್ತು. ಇದರ ನಂತರ, ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಗೆಸ್ಟ್‌ಹೌಸ್‌ನ ಮೂರು ಕೊಠಡಿಗಳಲ್ಲಿ ಇಬ್ಬರು ಏಜೆಂಟ್‌ಗಳು ಸ್ಫೋಟಕಗಳನ್ನು ಅಳವಡಿಸಿದ್ದರು. ಮೊಸ್ಸಾದ್ ಈ ಇಬ್ಬರು ಏಜೆಂಟ್‌ಗಳನ್ನು ನೇಮಿಸಿಕೊಂಡಿದ್ದರು.
ಏಜೆಂಟ್‌ಗಳು ಹನಿಯೆಹ್ ಇದ್ದ ಗೆಸ್ಟ್ ಹೌಸ್ ಒಳಗೆ ಅವಸರವಾಗಿ ಪ್ರವೇಶಿಸುವುದು ಮತ್ತು ಹೊರಹೋಗುವುದು ಸಿಸಿಟಿವಿಯಲ್ಲಿ ಕಂಡುಬಂದಿದೆ ಎಂದು ವರದಿಯಾಗಿದೆ. ಈ ಇಬ್ಬರು ಏಜೆಂಟ್‌ಗಳು ಇರಾನ್‌ನಿಂದ ಹೊರಬಂದ ನಂತರ, ಅವರು ಸ್ಫೋಟಕಗಳನ್ನು ದೂರದಿಂದಲೇ ಸ್ಫೋಟಿಸಿ, ಹನಿಯೆಹ್‌ನನ್ನು ಹತ್ಯೆಗೈದಿದ್ದಾರೆ ಎಂದು ಪತ್ರಿಕೆಗಳು ವರದಿ ಮಾಡಿವೆ.
ಇರಾನ್ ಅಧ್ಯಕ್ಷರಾಗಿ ಆಯ್ಕೆಯಾದ ಮಸೌದ್ ಪೆಜೆಸ್ಕಿಯಾನ್ ಅವರ ಪದಗ್ರಹಣ ಕಾರ್ಯಕ್ರಮದಲ್ಲಿ ಮಂಗಳವಾರ (ಜುಲೈ 30) ಇಸ್ಮಾಯಿಲ್ ಹನಿಯೆಹ್ ಕೂಡ ಭಾಗವಹಿಸಿದ್ದ. ಇದಾದ ನಂತರ ಆತನು ತನ್ನ ನಿವಾಸದತ್ತ ತೆರಳಿದ. ಇಸ್ಮಾಯಿಲ್ ಹನಿಯೆಹ್ ಇರುವ ಕುರಿತು ನಿಖರ ಮಾಹಿತಿ ಪಡೆದ ಇಸ್ರೇಲ್ ವಾಯುಪಡೆಯ ಸಿಬ್ಬಂದಿಯು ವಾಯುದಾಳಿಯ ಮೂಲಕ ಇಸ್ಮಾಯಿಲ್ ಹನಿಯೆಹ್ ಸೇರಿ ಆತನ ಅಂಗರಕ್ಷಕನನ್ನು ಹತ್ಯೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಗುಪ್ತಚರ ಇಲಾಖೆ ನಿಖರ ಮಾಹಿತಿ, ಅತ್ಯಾಧುನಿಕ ಕ್ಷಿಪಣಿ, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನವನ್ನು ಬಳಸಿ ಹತ್ಯೆಗೈಯಲಾಗಿದೆ ಎಂದು ತಿಳಿದು ಬಂದಿದೆ.
ಹನಿಯೆಹ್ ಹತ್ಯೆಗೆ ಪ್ರತೀಕಾರ ತೆಗೆದುಕೊಳ್ಳಲು ನಪಣ ತೊಟ್ಟಿರುವ ಇರಾನ್ ಶೀಘ್ರದಲ್ಲಿ ಇಸ್ರೇಲ್ ಮೇಲೆ ಪ್ರತಿದಾಳಿ ನಡೆಸಲಿದೆ ಎಂಬ ಬಗ್ಗೆ ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ. ಬುಧವಾರ ಬೆಳಗ್ಗೆ ಅಯತೊಲ್ಲಾ ಅಲಿ ಖಮೇನಿ ಇರಾನ್‌ನ ಸುಪ್ರೀಂ ನ್ಯಾಶನಲ್ ಸೆಕ್ಯುರಿಟಿ ಕೌನ್ಸಿಲ್‌ನ ತುರ್ತು ಸಭೆಯಲ್ಲಿ ಖಮೇನಿ ಈ ಆದೇಶವನ್ನು ನೀಡಿದರು. ಇನ್ನು ಹನಿಯೆಹ್ ಹತ್ಯೆಗೆ ಇರಾನ್ ಮತ್ತು ಹಮಾಸ್ ನೇರವಾಗಿ ಇಸ್ರೇಲ್ ಅನ್ನು ಹೊಣೆಯಾಗಿಸಿದೆ. ಆದರೆ ಈ ದಾಳಿಯ ಹೊಣೆಯನ್ನು ಇದುವರೆಗೆ ಇಸ್ರೇಲ್ ಒಪ್ಪಿಕೊಂಡಿಲ್ಲ. ಅಲ್ಲದೇ ನಿರಕಾರಿಸಿಯೂ ಇಲ್ಲ.
ಇರಾನ್ ಅಧ್ಯಕ್ಷರಾಗಿ ಆಯ್ಕೆಯಾದ ಮಸೌದ್ ಪೆಜೆಸ್ಕಿಯಾನ್ ಅವರ ಪದಗ್ರಹಣ ಕಾರ್ಯಕ್ರಮದಲ್ಲಿ ಮಂಗಳವಾರ (ಜುಲೈ 30) ಇಸ್ಮಾಯಿಲ್ ಹನಿಯೆಹ್ ಕೂಡ ಭಾಗವಹಿಸಿದ್ದ. ಹಮಾಸ್ ಉಗ್ರರಿಗೆ ಇರಾನ್‌ನಲ್ಲಿ ತರಬೇತಿ, ಹಣಕಾಸು ನೆರವು ಸೇರಿ ಹಲವು ರೀತಿಯಲ್ಲಿ ಸಹಕಾರ ಸಿಗುತ್ತಿರುವ ಕಾರಣ ಇಸ್ಮಾಯಿಲ್ ಹನಿಯೆಹ್ ಇರಾನ್‌ಗೆ ತೆರಳಿದ್ದ. ಇದರ ಮಧ್ಯೆಯೇ ಆತ ಮಂಗಳವಾರ (ಜುಲೈ 30) ಸುದ್ದಿಗಾರರೊಂದಿಗೆ ಮಾತನಾಡಿದ್ದ. ಇಸ್ರೇಲ್ ದಾಳಿ, ಇರಾನ್ ಜತೆಗಿನ ಒಪ್ಪಂದ ಸೇರಿ ಹಲವು ವಿಷಯಗಳ ಕುರಿತು ಪತ್ರಕರ್ತರೊಂದಿಗೆ ಮಾತನಾಡಿದ್ದ.
ಇದನ್ನೂ ಓದಿ: Mohammed Deif: ಹಮಾಸ್ ಉಗ್ರರಿಗಿಲ್ಲ ಉಳಿಗಾಲ; ಹಮಾಸ್ ಮಿಲಿಟರಿ ಚೀಫ್‌ನನ್ನೂ ಕೊಂದ ಇಸ್ರೇಲ್!