Site icon Vistara News

Israel attack: ಗಾಜಾದ ವಸತಿ ಶಾಲೆ ಮೇಲೆ ಇಸ್ರೇಲ್ ದಾಳಿ; 100ಕ್ಕೂ ಹೆಚ್ಚು ಮಂದಿ ಸಾವು

Israel Attack

ಪೂರ್ವ ಗಾಜಾದಲ್ಲಿ (eastern Gaza) ಸ್ಥಳಾಂತರಗೊಂಡ ಜನರು ವಾಸವಾಗಿರುವ ವಸತಿ ಶಾಲೆಯನ್ನು (housing school) ಗುರಿಯಾಗಿಸಿಕೊಂಡು ಇಸ್ರೇಲ್ ನಡೆಸಿದ ದಾಳಿಯಲ್ಲಿ (Israel attack) 100ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, ಹಲವಾರು ಮಂದಿ ಗಾಯಗೊಂಡಿದ್ದಾರೆ. ಹಮಾಸ್ (hamas) ನಡೆಸುತ್ತಿರುವ ಗಾಜಾ ಸರ್ಕಾರಿ ಮಾಧ್ಯಮ ಕಚೇರಿಯ ಪ್ರಕಾರ ಜನರು ಪ್ರಾರ್ಥನೆ ಸಲ್ಲಿಸುತ್ತಿದ್ದಾಗ ಈ ದಾಳಿ ಸಂಭವಿಸಿದೆ ಎನ್ನಲಾಗಿದೆ.

ವಸತಿ ಶಾಲೆಯಲ್ಲಿ ಆಶ್ರಯ ಪಡೆದಿರುವ ಜನರು ಫಜ್ರ್ ಪ್ರಾರ್ಥನೆಯನ್ನು ನಿರ್ವಹಿಸುತ್ತಿದ್ದ ಜನರನ್ನು ಗುರಿಯಾಗಿಸಿಕೊಂಡು ಇಸ್ರೇಲ್ ದಾಳಿ ನಡೆಸಿದೆ. ಇದು ಸಾವುನೋವುಗಳ ಸಂಖ್ಯೆಯಲ್ಲಿ ತ್ವರಿತ ಹೆಚ್ಚಳಕ್ಕೆ ಕಾರಣವಾಯಿತು ಎಂದು ಗಾಜಾ ಸರ್ಕಾರಿ ಮಾಧ್ಯಮ ಕಚೇರಿ ಹೇಳಿಕೆಯಲ್ಲಿ ತಿಳಿಸಿದೆ.

ಹಿಂದಿನ ವಾರದಲ್ಲಿ ಗಾಜಾದಾದ್ಯಂತ ನಾಲ್ಕು ಶಾಲೆಗಳ ಮೇಲೆ ದಾಳಿ ನಡೆಸಿದ ಅನಂತರ ಈ ದಾಳಿಗಳು ನಡೆದಿವೆ. ಆಗಸ್ಟ್ 4 ರಂದು ಗಾಜಾ ನಗರದಲ್ಲಿ ಸ್ಥಳಾಂತರಗೊಂಡ ಜನರಿಗೆ ಆಶ್ರಯವಾಗಿ ಕಾರ್ಯನಿರ್ವಹಿಸುತ್ತಿರುವ ಎರಡು ಶಾಲೆಗಳ ಮೇಲೆ ಇಸ್ರೇಲ್ ದಾಳಿ ನಡೆಸಿದೆ. 30 ಮಂದಿ ಸಾವನ್ನಪ್ಪಿದರು ಮತ್ತು ಹಲವಾರು ಮಂದಿ ಗಾಯಗೊಂಡರು. ಹಿಂದಿನ ದಿನ, ಗಾಜಾ ನಗರದ ಹಮಾಮಾ ಶಾಲೆಯ ಮೇಲೆ ಇಸ್ರೇಲ್ ದಾಳಿ ನಡೆಸಿ 17 ಜನರನ್ನು ಕೊಂದಿತ್ತು.


ಆಗಸ್ಟ್ 1ರಂದು, ದಲಾಲ್ ಅಲ್-ಮುಘ್ರಾಬಿ ಶಾಲೆಯ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ 15 ಜನರು ಸಾವನ್ನಪ್ಪಿದರು.
ಇಸ್ರೇಲ್ ಗಾಜಾದಾದ್ಯಂತ ಶಾಲೆಗಳು ಸೇರಿದಂತೆ ಕಟ್ಟಡಗಳ ಮೇಲೆ ದಾಳಿಗಳನ್ನು ನಡೆಸುತ್ತಿದೆ. ಕಳೆದ ಅಕ್ಟೋಬರ್‌ನಲ್ಲಿ ಪ್ಯಾಲೇಸ್ಟಿನಿಯನ್ ವಿರುದ್ಧ ಪೂರ್ಣ ಪ್ರಮಾಣದ ಮಿಲಿಟರಿ ದಾಳಿಯನ್ನು ಇಸ್ರೇಲ್ ಪ್ರಾರಂಭಿಸಿದ ಅನಂತರ “ಹಮಾಸ್ ಕಮಾಂಡ್ ಕಂಟ್ರೋಲ್ ಸೆಂಟರ್” ನಿಂದ ಕಾರ್ಯನಿರ್ವಹಿಸುವ ಆವರಣದಲ್ಲಿ “ಭಯೋತ್ಪಾದಕರು” ಇದ್ದಾರೆ ಎಂದು ಇಸ್ರೇಲ್ ಪ್ರತಿಪಾದಿಸುತ್ತಿದೆ.

ಇದನ್ನೂ ಓದಿ: Bangladesh Unrest: ಶೇಖ್‌ ಹಸೀನಾ ಓಡಿ ಬಂದ ಬಳಿಕ ಬಾಂಗ್ಲಾದೇಶದಲ್ಲಿ 232 ಜನರ ಕಗ್ಗೊಲೆ, ಹಿಂದೂಗಳೇ ಟಾರ್ಗೆಟ್


10 ತಿಂಗಳ ಕಾಲ ಇಸ್ರೇಲ್ ದಾಳಿಯಿಂದಾಗಿ ಗಾಜಾದಲ್ಲಿ 40,000 ಕ್ಕೂ ಹೆಚ್ಚು ಪ್ಯಾಲೆಸ್ಟೀನಿಯಾದವರು ಸಾವನ್ನಪ್ಪಿದ್ದಾರೆ. ಕಳೆದ ಅಕ್ಟೋಬರ್ 7ರಂದು ಪ್ಯಾಲೇಸ್ಟಿನಿಯನ್ ಉಗ್ರರು ಇಸ್ರೇಲ್‌‌ನೊಳಗೆ ನುಗ್ಗಿ ಸುಮಾರು 1,200 ಜನರನ್ನು ಕೊಂದು 250 ಜನರನ್ನು ಒತ್ತೆಯಾಳುಗಳಾಗಿ ಅಪಹರಿಸಿದ್ದರು.

Exit mobile version