Site icon Vistara News

Israel Palestine War: ಬಾಯಲ್ಲಿ ಬಿಸ್ಮಿಲ್ಲಾ, ಕೈಯಲ್ಲಿ ರೈಫಲ್‌ ಮತ್ತು ಒತ್ತೆಯಾಳು ಇಸ್ರೇಲಿ ಮಕ್ಕಳು: ಇದು ಹಮಾಸ್‌ ಉಗ್ರರ ಹೊಸ ವಿಡಿಯೋ

hamas terrorists with hostatge kids

ಟೆಲ್‌ ಅವಿವ್:‌ ಹಮಾಸ್‌ ಉಗ್ರರು (Hamas Terrorists) ತಾವು ಒತ್ತೆಯಾಳುಗಳಾಗಿ ಇರಿಸಿಕೊಂಡ ಇಸ್ರೇಲಿ ಮಕ್ಕಳ ಫೂಟೇಜ್‌ ಬಿಡುಗಡೆ ಮಾಡಿದ್ದಾರೆ. ಇದೇ ವಿಡಿಯೋವನ್ನು ಇಸ್ರೇಲ್‌ ಸೈನ್ಯ (Israel military) ಕೂಡ ಶೇರ್‌ ಮಾಡಿಕೊಂಡಿದ್ದು, ʼಇವರೇ ನಾವು ಯಾರ ವಿರುದ್ಧ ಹೋರಾಡುತ್ತಿದ್ದೇವೆಯೋ (Israel Palestine War) ಆ ಹಮಾಸ್‌ ಉಗ್ರರುʼ ಎಂದು ಹೇಳಿದೆ.

ಮೊದಲು ಈ ವಿಡಿಯೋ ಫೂಟೇಜನ್ನು ಹಮಾಸ್‌ ಉಗ್ರರು ಶೇರ್‌ ಮಾಡಿಕೊಂಡಿದ್ದಾರೆ. ಅದರಲ್ಲಿ ಕೈಯಲ್ಲಿ ಲೋಡೆಡ್‌ ರೈಫಲ್‌ ಹಿಡಿದುಕೊಂಡ ಹಮಾಸ್‌ ಉಗ್ರರು, ತಾವು ಒತ್ತೆಯಾಳುಗಳಾಗಿ ಇರಿಸಿಕೊಂಡ ಇಸ್ರೇಲಿ ಮಕ್ಕಳನ್ನು ನೋಡಿಕೊಳ್ಳುತ್ತಿರುವ ದೃಶ್ಯಗಳಿವೆ. ಕೆಲವು ಉಗ್ರರು ಮಗುವನ್ನು ತೊಟ್ಟಿಲ್ಲಿ ತೂಗುತ್ತಿದ್ದರೆ, ಇನ್ನು ಕೆಲವರು ನೀರು ಕುಡಿಸುವುದು, ಹಾಲು ಕುಡಿಸುವುದು, ಎತ್ತಿಕೊಂಡಿರುವುದನ್ನು ಕಾಣಬಹುದು. ಇನ್ನೊಬ್ಬ ಉಗ್ರ ಮಗುವಿನ ಕಾಲಿನ ಗಾಯಕ್ಕೆ ಬ್ಯಾಂಡೇಜ್‌ ಹಾಕುತ್ತಿದ್ದಾನೆ.

ಉಗ್ರನೊಬ್ಬ ಮಗುವಿಗೆ ನೀರು ಕುಡಿಸುವ ಮುನ್ನ ʼಬಿಸ್ಮಿಲ್ಲಾ ಎಂದು ಹೇಳುʼ ಎಂದು ಮಗುವಿಗೆ ಹೇಳುತ್ತಿರುವುದನ್ನೂ ಕಾಣಬಹುದಾಗಿದೆ. ಆದರೆ ವಿಡಿಯೋದಲ್ಲೆಲ್ಲೂ ಈ ಮಕ್ಕಳ ತಂದೆ ತಾಯಿ ಕಾಣಿಸುತ್ತಿಲ್ಲ. ಬಹುಶಃ ಮಕ್ಕಳನ್ನು ಅವರಿಂದ ಪ್ರತ್ಯೇಕಸಲಾಗಿದೆ ಅಥವಾ ಸಾಯಿಸಲಾಗಿದೆ ಎಂದು ಊಹಿಸಲಾಗಿದೆ.

ಇದೇ ವಿಡಿಯೋವನ್ನು ಇಸ್ರೇಲ್‌ ಡಿಫೆನ್ಸ್‌ ಫೋರ್ಸ್‌ ಕೂಡ ಶೇರ್‌ ಮಾಡಿಕೊಂಡಿದೆ. ʼʼನೀವು ಮಕ್ಕಳ ಗಾಯಗಳನ್ನು ಕಾಣಬಹುದು, ಅವರ ಅಳುವನ್ನು ಇಲ್ಲಿ ಕೇಳಬಹುದು. ಭಯದಿಂದ ನಡುಗುತ್ತಿರುವುದನ್ನು ಕಾಣಬಹುದಾಗಿದೆ. ತಮ್ಮದೇ ಮನೆಗಳಲ್ಲಿ ಈ ಮಕ್ಕಳು ಹಮಾಸ್‌ ಉಗ್ರರಿಗೆ ಒತ್ತೆಯಾಳುಗಳಾಗಿದ್ದಾರೆ. ಇವರ ತಂದೆ ತಾಯಿ ಆಚೆ ಕೋಣೆಯಲ್ಲಿ ಶವಗಳಾಗಿದ್ದಾರೆ. ಇವರೇ ನಾವು ಸೋಲಿಸಲು ಶಪಥ ತೊಟ್ಟಿರುವ ಭಯೋತ್ಪಾದಕರುʼʼ ಎಂದು ಇಸ್ರೇಲ್‌ ಮಿಲಿಟರಿ ಟ್ವೀಟ್‌ ಮಾಡಿದೆ.

ಇತ್ತೀಚೆಗೆ ಹಮಾಸ್‌ ಉಗ್ರರು 20 ಇಸ್ರೇಲಿ ಮಕ್ಕಳ ತಲೆ ಕಡಿದಿದ್ದಾರೆ ಎಂಬ ಸುದ್ದಿ ಹೊರಬಿದ್ದಿತ್ತು. ಇದಾಗಿ ಕೆಲವೇ ದಿನಗಳಲ್ಲಿ ಈ ವಿಡಿಯೋ ಹೊರಬಂದಿದೆ. ಜಗತ್ತಿನ ಸಹಾನುಭೂತಿ ಗಳಿಸಲು ಈ ವಿಡಿಯೋ ಆಚೆ ಬಿಡಲಾಗಿದೆ ಎಂದು ಊಹಿಸಲಾಗಿದೆ.

ನೂರೈವತ್ತಕ್ಕೂ ಹೆಚ್ಚು ಇಸ್ರೇಲಿ ನಾಗರಿಕರನ್ನು ಹಮಾಸ್‌ ಉಗ್ರರು ಸೆರೆಹಿಡಿದಿಟ್ಟುಕೊಂಡಿದ್ದಾರೆ ಎಂದು ಊಹಿಸಲಾಗಿದೆ. ಗಾಜಾದ ಮೇಲೆ ರಾಕೆಟ್‌ ದಾಳಿ ನಡೆಸಿದರೆ ಒಬ್ಬೊಬ್ಬರನ್ನಾಗಿ ಸಾಯಿಸುವುದಾಗಿ ಇವರು ಇಸ್ರೇಲ್‌ಗೆ ಎಚ್ಚರಿಕೆ ನೀಡಿದ್ದಾರೆ. ಆದರೆ ಇಸ್ರೇಲ್‌ ಈ ಬೆದರಿಕೆಗೆ ಮಣಿಯದೆ ಮಿಲಿಟರಿ ಆಕ್ಷನ್‌ ಆರಂಭಿಸಿದೆ. ಇಪ್ಪತ್ತನಾಲ್ಕು ಗಂಟೆಯಲ್ಲಿ ಗಾಜಾ ತೆರವು ಮಾಡುವಂತೆ ಇಸ್ರೇಲಿ ನಾಗರಿಕರಿಗೆ ಸೂಚನೆ ನೀಡಿದೆ. ಅಮೆರಿಕದ ಯುದ್ಧ ನೆರವು ಇಸ್ರೇಲನ್ನು ತಲುಪಿದ್ದು, ಯುದ್ಧ ಟ್ಯಾಂಕ್‌ಗಳು ಹಾಗೂ ಕ್ಷಿಪಣಿಗಳು ಗಾಜಾದತ್ತ ಹೊರಟಿವೆ.

ಇದನ್ನೂ ಓದಿ: Israel Palestine War: ಅವಳಿ ಮಕ್ಕಳ ಪ್ರಾಣ ಉಳಿಸಲು ತಮ್ಮ ಜೀವವನ್ನೇ ಬಲಿ ಕೊಟ್ಟ ಇಸ್ರೇಲ್‌ ದಂಪತಿ!

Exit mobile version