Site icon Vistara News

Israel Palestine War: 50 ಕಿ.ಮೀ ದೂರದಿಂದಲೇ ಪ್ಯಾಲೆಸ್ತಿನ್‌ ಕಮಾಂಡರ್‌ನನ್ನು ಕೊಂದ ಇಸ್ರೇಲ್‌! ವಿಡಿಯೊ ನೋಡಿ

Israel Palestine War

ಲೆಬನಾನ್‌ನಲ್ಲಿ ಇಸ್ಲಾಮಿಕ್ ಜಿಹಾದ್‌ನ ನೌಕಾ ಪಡೆಗಳ ಕಮಾಂಡರ್‌ನ ( Islamic Jihad’s Naval Forces commander) ಕಾರಿನ ಮೇಲೆ ಇಸ್ರೇಲ್ ಸೇನೆ ದಾಳಿ (Israel Palestine War) ನಡೆಸಿದ್ದ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಘಟನೆಯಲ್ಲಿ ಪ್ಯಾಲೇಸ್ಟಿನಿಯನ್ ಇಸ್ಲಾಮಿಕ್ ಜಿಹಾದ್ ನೌಕಾ ಪಡೆಗಳ ಕಮಾಂಡರ್ ಅನಾಸ್ ಮುರಾದ್ ಮೃತಪಟ್ಟಿದ್ದಾನೆ ಎನ್ನಲಾಗಿದೆ.

ಜುಲೈ 18ರಂದು ಐಡಿಎಫ್ (ಇಸ್ರೇಲ್‌ ಡಿಫೇನ್ಸ್‌ ಪೋರ್ಸ್‌) ಉಗ್ರ ಸಂಘಟನೆಯ ಕಮಾಂಡರ್‌ನನ್ನು ಗುರಿಯಾಗಿಸಿಕೊಂಡು ಲೆಬನಾನ್‌ ಮೇಲೆ 50 ಕಿ.ಮೀ ದೂರದಿಂದಲೇ ದಾಳಿ ನಡೆಸಿತ್ತು.


ಅನಾಸ್ ಮುರಾದ್ ಗಾಜಾ ನಗರದಲ್ಲಿ ಇಸ್ರೇಲ್ ವಿರೋಧಿ ಉಗ್ರ ಸಂಘಟನೆಯ ಮುಖ್ಯಸ್ಥನಾಗಿದ್ದ. ವೈರಲ್ ಆಗಿರುವ ವಿಡಿಯೋದಲ್ಲಿ ಇಸ್ರೇಲ್ ಸೇನೆಯು ಅನಾಸ್ ಕಾರಿನ ಮೇಲೆ ದಾಳಿ ನಡೆಸಿದ ದೃಶ್ಯವನ್ನು ತೋರಿಸಿದೆ.


ಇನ್ನೊಂದು ದಾಳಿಯಲ್ಲಿ ಭಯೋತ್ಪಾದಕ ಅಹ್ಮದ್ ಅಲ್-ಮಸ್ರಿಯನ್ನು ಇಸ್ರೇಲ್‌ ಸೇನೆ ಹೊಡೆದು ಉರುಳಿಸಿದೆ. ಅಕ್ಟೋಬರ್ 7ರಂದು ಇಸ್ರೇಲ್‌ ಮೇಲೆ ನಡೆದ ಭೀಕರ ಭಯೋತ್ಪಾದಕ ದಾಳಿಯಲ್ಲಿ ಇಸ್ಲಾಮಿಕ್ ಜಿಹಾದ್ ಭಯೋತ್ಪಾದಕ ಸಂಘಟನೆಯ ಮುಖಂಡನಾಗಿದ್ದ ಅಲ್‌-ಮಸ್ರಿ ಪ್ರಮುಖ ಪಾತ್ರ ವಹಿಸಿದ್ದ.

ಭಯೋತ್ಪಾದಕರು ಇಸ್ರೇಲ್‌ನೊಳಗೆ ನುಗ್ಗಿ ಹಲವಾರು ರಾಕೆಟ್‌ ದಾಳಿಗಳನ್ನು ನಡೆಸಿದ್ದರು. ಆ ಬಳಿಕ ಪ್ಯಾಲೆಸ್ತೀನ್‌ ಉಗ್ರ ಸಂಘಟನೆ ಹಮಾಸ್ ಮೇಲೆ ಪ್ರತಿ ದಾಳಿಯನ್ನು ಹೆಚ್ಚಿಸಲಾಗಿದೆ. ಕೇಂದ್ರ ಗಾಜಾದ ಮೇಲೆ ಗುರುವಾರ ನಡೆದ ಇಸ್ರೇಲ್ ದಾಳಿಯಲ್ಲಿ 12ಕ್ಕೂ ಹೆಚ್ಚು ಪ್ಯಾಲೆಸ್ತಿನಿಯನ್ನರನ್ನು ಕೊಲ್ಲಲಾಗಿದೆ. ಅನೇಕರು ಗಾಯಗೊಂಡಿದ್ದು, ಚಿಕಿತ್ಸೆಯ ಕೊರತೆಯಿಂದ ಸಾವುನೋವುಗಳು ಹೆಚ್ಚಾಗಲಿದೆ ಎನ್ನಲಾಗಿದೆ.

ಇದನ್ನೂ ಓದಿ: Oil Tanker Capsizes: ತೈಲ ತುಂಬಿದ್ದ ಹಡಗು ಮುಳುಗಡೆ; 13 ಭಾರತೀಯರು ಜಲಸಮಾಧಿ

Exit mobile version