Site icon Vistara News

ಶಿಶುವಿಹಾರದ ಶಿಕ್ಷಕಿಯನ್ನು ಗಲ್ಲಿಗೇರಿಸಿದ ಚೀನಾ; ವರ್ಷದ ಹಿಂದೆ ಮಾಡಿದ್ದ ಅಪರಾಧಕ್ಕೆ ನೇಣು ಶಿಕ್ಷೆ

kindergarten kids Eating

ಚೀನಾದಲ್ಲಿ ಶಿಶುವಿಹಾರದ ಮಾಜಿ ಶಿಕ್ಷಕಿ (Kindergarten Teacher)ಯೊಬ್ಬರನ್ನು ಗಲ್ಲಿಗೇರಿಸಲಾಗಿದೆ. ಈಕೆ ನಾಲ್ಕು ವರ್ಷಗಳ ಹಿಂದೆ ಶಿಶುವಿಹಾರದಲ್ಲಿ ತಯಾರಾದ ಅಂಬಲಿಯಲ್ಲಿ ಸೋಡಿಯಂ ನೈಟ್ರೇಟ್​ ಬೆರೆಸಿ ಒಂದು ಮಗುವನ್ನು ಕೊಂದು, ಸುಮಾರು 24 ಮಕ್ಕಳು ಅಸ್ವಸ್ಥರಾಗುವಂತೆ ಮಾಡಿದ್ದ ಕೇಸ್​​ನಲ್ಲಿ ಶಿಕ್ಷಕಿಗೆ ಮರಣದಂಡನೆ ವಿಧಿಸಲಾಗಿದೆ. ಶಿಕ್ಷಕಿಯ ಹೆಸರು ವಾಂಗ್​ ಯನ್​ (39). ಈಕೆಯ ಅಪರಾಧ ಸಾಬೀತಾದ ಹಿನ್ನೆಲೆಯಲ್ಲಿ ಹೆನಾನ್ ಪ್ರಾಂತ್ಯದ Jiaozuo cityಯ ಜನಸಾಮಾನ್ಯರ ನ್ಯಾಯಾಲಯ 2020ರ ಸೆಪ್ಟೆಂಬರ್​​ನಲ್ಲಿ ಮರಣದಂಡನೆ ವಿಧಿಸಿತ್ತು. ಈ ಶಿಕ್ಷೆ ವಿರುದ್ಧ ಮೇಲ್ಮನವಿ ಸಲ್ಲಿಸಲು ಶಿಕ್ಷಕಿ ವಿಫಲರಾದ ಹಿನ್ನೆಲೆಯಲ್ಲಿ ಈಗ ನೇಣಿಗೆ ಏರಿಸಲಾಗಿದೆ.

2019ರ ಮಾರ್ಚ್​​ನಲ್ಲಿ ಶಿಕ್ಷಕಿ ವಾಂಗ್​ಯನ್​ ಅವರು ಈ ಕೃತ್ಯ ಮಾಡಿದ್ದರು. ಶಿಶುವಿಹಾರದಲ್ಲಿರುವ ತಮ್ಮ ಸಹೋದ್ಯೋಗಿ ಶಿಕ್ಷಕಿಯೊಂದಿಗೆ ಇವರಿಗೆ ಜಗಳ ಇತ್ತು. ಆಕೆಯ ಮೇಲಿನ ಸಿಟ್ಟಿನಲ್ಲಿ ಮಕ್ಕಳ ಆರೋಗ್ಯದೊಂದಿಗೆ ಆಟವಾಡಿದ್ದರು. ಸೋಡಿಯಂ ನೈಟ್ರೇಟ್ ಖರೀದಿ ಮಾಡಿ, ಅದನ್ನು ಶಿಶು ವಿಹಾರದಲ್ಲಿ ಕೊಡುವ ಅಂಬಲಿಯಲ್ಲಿ ಹಾಕಿದ್ದರು. ಚೀನಾದ ಅಂಗನವಾಡಿ, ಶಿಶುವಿಹಾರಗಳಲ್ಲಿ ಒಂದು ರೀತಿಯ ಸಿಹಿಯಾದ, ಅಕ್ಕಿಯಿಂದ ತಯಾರಿಸಲಾದ ಅಂಬಲಿಯನ್ನು ಮಕ್ಕಳಿಗೆ ಕೊಡುತ್ತಾರೆ. ಈ ಶಿಶುವಿಹಾರದಲ್ಲೂ ಅಂಬಲಿಯಲ್ಲೇ ಬೆರೆಸಿ ಕೊಟ್ಟಿದ್ದರು.

ಇದನ್ನೂ ಓದಿ: ಶಿಕ್ಷಕರ ಕೊರತೆ: ತಮಿಳುನಾಡಿನ 2,381 ಶಾಲೆಗಳಲ್ಲಿದ್ದ ಶಿಶು ವಿಹಾರ ಬಂದ್‌

ವಿಷ ಭರಿತ ಅಂಬಲಿ ಸೇವಿಸಿದ ಮಕ್ಕಳಿಗೆ ತಕ್ಷಣಕ್ಕೆ ಏನೂ ಆಗಿರಲಿಲ್ಲ. ಆದರೆ ಅದು ನಿಧಾನವಾಗಿ ಮೈತುಂಬ ವಿಷವೇರಿತ್ತು. 2020ರ ಜನವರಿಯಲ್ಲಿ ಒಂದು ಮಗು ಬಹು ಅಂಗಾಂಗ ವೈಫಲ್ಯದಿಂದ ಮೃತಪಟ್ಟಿತ್ತು. ಹಾಗೇ, ಹಲವು ಮಕ್ಕಳು ಅನಾರೋಗ್ಯಕ್ಕೀಡಾಗಿದ್ದರು. ತಪಾಸಣೆ ಮಾಡಿದಾಗ ಎಲ್ಲ ಮಕ್ಕಳ ದೇಹದಲ್ಲೂ ಈ ಸೋಡಿಯಂ ನೈಟ್ರೇಟ್​ ಅಂಶ ಪತ್ತೆಯಾಗಿತ್ತು. ಕೇಸ್ ಕೋರ್ಟ್ ಮೆಟ್ಟಿಲೇರಿ, ಶಿಕ್ಷಕಿಯ ಅಪರಾಧ ಸಾಬೀತಾಗಿತ್ತು.

Exit mobile version