ಪೋರ್ಟ್ ಮೋರ್‌ಸ್ಬಿ: ಪಪುವಾ ನ್ಯೂಗಿನಿಯಾದಲ್ಲಿ (Papua New Guinea) ಕಂಡು ಕೇಳರಿಯದ ಭೂಕುಸಿತ (Landslide) ಸಂಭವಿಸಿದ್ದು, ಸಾವಿನ ಸಂಖ್ಯೆ 2000ಕ್ಕೆ ಏರಿಕೆಯಾಗಿದೆ. ಸಾವಿರಾರು ಜನ ಗಾಯಗೊಂಡಿದ್ದು, ನೂರಾರು ಜನ ಭೂಮಿ ಅವಶೇಷಗಳ ಅಡಿಯಲ್ಲಿ ಹುದುಗಿಹೋಗಿವೆ. ಸಾವಿರಾರು ಜನರನ್ನು ಸ್ಥಳಾಂತರ ಮಾಡಲಾಗಿದೆ. ಸಾವಿನ ಸಂಖ್ಯೆ 670ಕ್ಕೆ ಏರಿಕೆಯಾಗಿದೆ ಎಂದು ವಿಶ್ವಸಂಸ್ಥೆ ಮಾಹಿತಿ ನೀಡಿದೆ. ಪಪುವಾ ನ್ಯೂಗಿನಿಯಾದಲ್ಲಿ ಇತ್ತೀಚಿನ ದಶಕಗಳಲ್ಲಿ ಸಂಭವಿಸಿದ ಭೀಕರ ದುರಂತ ಇದಾಗಿದೆ ಎಂದು ಹೇಳಲಾಗುತ್ತಿದೆ.
ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಎಲ್ಲೆಂದರಲ್ಲಿ ಭೂಕುಸಿತ, ಪ್ರವಾಹ ಸ್ಥಿತಿ ನಿರ್ಮಾಣವಾಗಿದೆ. ಗುಡ್ಡಗಾಡು ಪ್ರದೇಶವಾಗಿರುವ ಎಂಗಾ ಪ್ರದೇಶದಲ್ಲಿ ಸಂಪೂರ್ಣವಾಗಿ ಭೂಕುಸಿತಕ್ಕೆ ತುತ್ತಾಗಿದೆ. ಸಾವಿನ ಸಂಖ್ಯೆ 2000ಕ್ಕೆ ಏರಿಕೆಯಾಗಿದೆ. 150 ಮನೆಗಳು ಭೂಮಿಯಲ್ಲಿ ಹುದುಗಿಹೋಗಿವೆ. ಮಳೆಯ ನೀರು ಇನ್ನೂ ಹರಿಯುತ್ತಿರುವ ಕಾರಣ ಜನರ ರಕ್ಷಣೆಯು ಕಷ್ಟವಾಗುತ್ತಿದೆ. ಸಾವಿರಾರು ಜನರನ್ನು ಈಗಾಗಲೇ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲಾಗಿದೆ. ಇನ್ನೂ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ ಎಂದು ವಿಶ್ವಸಂಸ್ಥೆಯು ಮಾಹಿತಿ ನೀಡಿದೆ.
ಶುಕ್ರವಾರದಿಂದಲೂ ಸಾಲು ಸಾಲು ಭೂಕುಸಿತ ಸಂಭವಿಸಿವೆ. ಶುಕ್ರವಾರವೇ 100ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದರು. ಇದಾದ ಬಳಿಕ ಸಾವಿನ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿ ಭಾನುವಾರದ ಹೊತ್ತಿಗೆ ಈ ಸಂಖ್ಯೆ 650ಕ್ಕೆ ಏರಿಕೆ ಆಗಿತ್ತು. ಸಂಬಂಧಿಕರನ್ನು ಕಳೆದುಕೊಂಡವರ ದುಃಖವು ಮುಗಿಲುಮುಟ್ಟಿದೆ. ಗುಡ್ಡಗಾಡು ಪ್ರದೇಶಗಳಲ್ಲಿ ಮೃತರ ಸಂಬಂಧಿಕರು ಶವಗಳನ್ನು ಹೊರತೆಗೆಯಲು ಭೂಮಿ ಅಗೆಯುತ್ತಿದ್ದಾರೆ. ಇದರಿಂದಾಗಿ ಜನರನ್ನು ನಿಯಂತ್ರಿಸುವುದು ಕೂಡ ಸಿಬ್ಬಂದಿಗೆ ಕಷ್ಟವಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
PAPUA NEW GUINEA
— Abhay( मोदी परिवार ) (@AstuteGaba) May 25, 2024
Breaking- 1000 homes buried in Papua New Guinea landslide, 1 million residents evacuated
Hundreds feared dead in Papua New Guinea landslide
May 25, 2024
Hundreds are feared dead after a massive landslide levelled dozens of homes and buried families alive in a… pic.twitter.com/OZPMnnvEWj
ಅವಶೇಷಗಳ ಅಡಿಯಲ್ಲಿ ಯಾರಾದರೂ ಬದುಕಿದ್ದಾರೇನೋ ಎಂಬ ವಿಶ್ವಾಸದಿಂದ ಭೂಮಿಯನ್ನು ಅಗೆಯಲಾಗುತ್ತಿದೆ. ಅವಶೇಷಗಳನ್ನು ತೆರವುಗೊಳಿಸಲಾಗುತ್ತಿದೆ. ಜನರು ಕೂಡ ಇದಕ್ಕೆ ಸಾಥ್ ನೀಡುತ್ತಿದ್ದಾರೆ. ಆದರೆ, ಗಾಯಾಳುಗಳ ಬದಲು ಶವಗಳನ್ನೇ ಹೊರ ತೆಗೆಯುವಂತಾಗಿದೆ. ಗ್ರಾಮದಲ್ಲಿ ಹಾಗೂ ಸುತ್ತಮುತ್ತಲಿನಲ್ಲಿ 4 ಸಾವಿರ ಜನ ವಾಸವಿದ್ದರು. ದಿಢೀರನೆ ಭೂಕುಸಿತ ಉಂಟಾದ ಕಾರಣ ಇಡೀ ಗ್ರಾಮವೇ ನರಕಸದೃಶವಾಗಿದೆ ಎಂಬುದಾಗಿ ಮಾಧ್ಯಮಗಳ ವರದಿಗಳಿಂದ ತಿಳಿದುಬಂದಿದೆ.
ಈ ಭೀಕರ ಭೂಕುಸಿತ ಪ್ರವಾಹದೊಂದಾಗಿ ದೇಶದ ಆರ್ಥಿಕತೆ ಮೇಲೂ ಗಂಭೀರ ಪರಿಣಾಮ ಬೀರಿದ್ದು, ಆಹಾರ ಪದಾರ್ಥಗಳಿಗೂ ಜನ ಪರದಾಡುವ ಸ್ಥಿತಿ ನಿರ್ಮಾಣ ಆಗಿದೆ. ಇನ್ನು ಪೋರ್ಗೆರಾ ಮೈನಿಂಗ್ ಪ್ರದೇಶಕ್ಕೆ ಸಾಗುವ ಪ್ರಮುಖ ಹೆದ್ದಾರಿಯೂ ಸಂಪೂರ್ಣವಾಗಿ ಮುಚ್ಚಿದೆ. ಇನ್ನು ಸಂಕಷ್ಟದಲ್ಲಿರುವ ಪಪುವಾ ನ್ಯೂಗಿನಿಯಾಗೆ ಸಹಾಯ ಮಾಡುವಂತೆ ಮಿತ್ರ ರಾಷ್ಟ್ರಗಳಿಗೆ ವಿಶ್ವಸಂಸ್ಥೆ ಕರೆ ನೀಡಿದೆ.