Site icon Vistara News

Twenty Wives | ಸ್ವಂತ ಮಗಳು ಸೇರಿ 20ಕ್ಕೂ ಹೆಚ್ಚು ಹುಡುಗಿಯರನ್ನು ಮದ್ವೆಯಾದ ಅಮೆರಿಕದ ಈ ದೇವಮಾನವ!

Samuel Rappylee Bateman

ವಾಷಿಂಗ್ಟನ್: ತನ್ನನ್ನು ತಾನು ‘ದೇವಮಾನವ’ ಎಂದು ಹೇಳಿಕೊಳ್ಳುವ ಅಮೆರಿಕದ ವ್ಯಕ್ತಿಯೊಬ್ಬ ತನ್ನ ಮಗಳೂ ಸೇರಿದಂತೆ 20ಕ್ಕೂ ಹೆಣ್ಣುಮಕ್ಕಳನ್ನು ಮದುವೆಯಾದ (Twenty Wives) ಘಟನೆಯು ಅಮೆರಿಕವು ಬೆಚ್ಚಿ ಬೀಳುವಂತೆ ಮಾಡಿದೆ. 46 ವರ್ಷದ ಸ್ಯಾಮ್ಯುಯೆಲ್ ರಾಪ್ಪಿಲೀ ಬೇಟ್‌ಮ್ಯಾನ್ (Samuel Rappylee Bateman) ಎಂಬಾತ 15 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹೆಣ್ಣು ಮಕ್ಕಳನ್ನೇ ಮದುವೆಯಾಗಿದ್ದಾನೆ ಎಂದು ಅಮೆರಿಕದ ತನಿಖಾ ಸಂಸ್ಥೆಯಾಗಿರುವ ಎಫ್‌ಬಿಐ ದಾಖಲೆಗಳಿಂದ ತಿಳಿದು ಬಂದಿದೆ.

ಆರೋಪಿ ಬೇಟ್‌ಮ್ಯಾನ್, ಬಹುಪತ್ನಿತ್ವವನ್ನು ಪ್ರೇರೇಪಿಸುವ ಮೊರನ್ಸ್ ಎಂಬ ಸಣ್ಣ ಗುಂಪಿನ ನಾಯಕನಾಗಿದ್ದಾನೆ. 2019ರಲ್ಲಿ ಈ ಸಣ್ಣ ಗುಂಪಿನ ಅನುಯಾಯಿಗಳ ಮೇಲೆ ನಿಯಂತ್ರಣ ಸಾಧಿಸಿದ ಬಳಿಕ ಆತ ತನ್ನನ್ನು ತಾನು ದೇವಮಾನವ ಎಂದು ಹೇಳಿಕೊಳ್ಳಲಾರಂಭಿಸಿದ. ಒಂದು ಹಂತದಲ್ಲಿ ಆತ ತನ್ನ ಸ್ವಂತ ಮಗಳನ್ನೇ ಮದುವೆಯಾಗುವುದಾಗಿ ಘೋಷಿಸಿಕೊಂಡ ಎಂದು ದಾಖಲೆಗಳಲ್ಲಿ ತಿಳಿಸಲಾಗಿದೆ.

ಬೇಟ್‌ಮ್ಯಾನ್ ಮದುವೆಯಾಗಿರುವವರ ಪೈಕಿ ಬಹುತೇಕರು ಅಪ್ರಾಪ್ತರಾಗಿದ್ದಾರೆ. 15 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದಾರೆ. ಕೊಲೊರಾಡೋ ನಗರದಲ್ಲಿ ವಾಸವಾಗಿದ್ದ ಈತನ ಮನೆ ಮೇಲೆ ಎಫ್‌ಬಿಐ ದಾಳಿ ನಡೆಸಿತು. ಬಳಿಕ ಆತನನ್ನು ಬಂಧಿಸಿ, ಅರಿಝೋನಾ ಜೈಲಿನಲ್ಲಿಡಲಾಗಿದೆ. ಅಪ್ರಾಪ್ತರನ್ನು ಮದುವೆಯಾದ ಆರೋಪಕ್ಕೆ ಸಂಬಂಧಿಸಿದಂತೆ ಸಂತ್ರಸ್ತರಿಂದ ಹೇಳಿಕೆಗಳನ್ನು, ಸಾಕ್ಷ್ಯಗಳನ್ನು ಸಂಗ್ರಹಿಸುವ ಕೆಲಸವನ್ನು ಎಫ್‌ಬಿಐ ಮಾಡುತ್ತಿದೆ.

ಇದನ್ನೂ ಓದಿ | Man Marries Twin Sisters | ಪರಸ್ಪರ ಒಪ್ಪಿ ಒಬ್ಬನನ್ನೇ ಮದುವೆಯಾದ ಅವಳಿ ಸಹೋದರಿಯರು, ಏನಿದಕ್ಕೆ ಕಾರಣ?

Exit mobile version