ವಾಷಿಂಗ್ಟನ್: ಫೇಸ್‌ಬುಕ್ ಸಂಸ್ಥಾಪಕ, ಮೆಟಾ ಸಿಇಒ ಮಾರ್ಕ್ ಜುಕರ್‌ಬರ್ಗ್ (Mark Zuckerberg) ಅವರು ತಮ್ಮ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದಂತೆ ಖುಷಿಯ ವಿಚಾರವೊಂದನ್ನು ಹಂಚಿಕೊಂಡಿದ್ದಾರೆ. ಅವರು ಮೂರನೇ ಮಗುವಿಗೆ ತಂದೆಯಾಗುತ್ತಿದ್ದು, ಮುಂದಿನ ವರ್ಷ ಮಗಳ ಆಗಮನವಾಗಲಿದೆ ಎಂದು ತಿಳಿಸಿದ್ದಾರೆ.
“ಮ್ಯಾಕ್ಸ್ ಹಾಗೂ ಆಗಸ್ಟ್‌ಗೆ ಆಟವಾಡಲು ಮುಂದಿನ ವರ್ಷ ತಂಗಿ ಸಿಗಲಿದ್ದಾಳೆ ಎಂಬ ಸುದ್ದಿ ಹಂಚಿಕೊಳ್ಳಲು ಸಂತಸವಾಗುತ್ತಿದೆ” ಎಂದು ಪತ್ನಿ ಪ್ರಿಸಿಲ್ಲಾ ಚಾನ್ ಜತೆಗಿನ ಫೋಟೊವನ್ನು ಫೇಸ್‌ಬುಕ್ ಹಾಗೂ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಮಾರ್ಕ್ ಜುಕರ್‌ಬರ್ಗ್‌ಗೆ ಮ್ಯಾಕ್ಸಿಮಾ ಚಾನ್ ಹಾಗೂ ಆಗಸ್ಟ್ ಚಾನ್ ಎಂಬ ಇಬ್ಬರು ಪುತ್ರಿಯರಿದ್ದಾರೆ. ಫೇಸ್‌ಬುಕ್‌ನಲ್ಲಿ ಸುದ್ದಿ ಹಂಚಿಕೊಳ್ಳುತ್ತಲೇ ಲಕ್ಷಾಂತರ ಜನ ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ | Mark Zuckerberg | ಅಮೆರಿಕ ಮ್ಯೂಸಿಯಂನಲ್ಲಿರುವ ಬಾಲಯೇಸು ಮಾರ್ಕ್ ಜುಕರ್‌ಬರ್ಗ್ ರೀತಿ ಇರುವುದೇಕೆ?