ಸಾಗರೋತ್ತರ ವಿಶ್ವವಿದ್ಯಾಲಯದಲ್ಲಿ (foreign university) ಎಂಬಿಎ ಅಧ್ಯಯನ (MBA Course) ಮಾಡಲು ಯೋಜಿಸುತ್ತಿದ್ದರೆ ಅದಕ್ಕಾಗಿ ತಗಲುವ ಖರ್ಚು ವೆಚ್ಚಗಳು ಪರಿಗಣಿಸಬೇಕಾದ ಪ್ರಮುಖ ಅಂಶಗಳಲ್ಲಿ ಒಂದಾಗಿದೆ. ವಿದೇಶದಲ್ಲಿ ಎಂಬಿಎ ಅಧ್ಯಯನ ಮಾಡಲು ಬಯಸುವ ಭಾರತೀಯ ವಿದ್ಯಾರ್ಥಿಗಳಿಗೆ (indian student) ಮೂರು ಜನಪ್ರಿಯ ತಾಣಗಳಿವೆ. ಯುಎಸ್ ಎ (USA), ಕೆನಡಾ (canada) ಮತ್ತು ಆಸ್ಟ್ರೇಲಿಯಾ (australia).
ಎಂಬಿಎ ಅಥವಾ ಎಂಎಸ್‌ನಂತಹ ಉನ್ನತ ಅಧ್ಯಯನಕ್ಕೆ ಹೋಗಲು ಬಯಸುವ ಭಾರತೀಯ ವಿದ್ಯಾರ್ಥಿಗಳಿಗೆ ಯುಎಸ್ ಅತ್ಯಂತ ಜನಪ್ರಿಯ ತಾಣವಾಗಿದೆ ಎಂಬ ಅಂಶವನ್ನು ಅಲ್ಲಗಳೆಯುವಂತಿಲ್ಲ. ಆರ್ಥಿಕ ವೆಚ್ಚವನ್ನು ಕಡಿಮೆ ಮಾಡಲು ಬಯಸುವವರು ಕೆನಡಾ ಅಥವಾ ಆಸ್ಟ್ರೇಲಿಯಾದಂತಹ ಇತರ ಸ್ಥಳಗಳು ಪ್ರಮುಖ ಆಯ್ಕೆಯಾಗುತ್ತವೆ.
ಈ ದೇಶಗಳ ಯಾವುದೇ ಉನ್ನತ ವಿಶ್ವವಿದ್ಯಾನಿಲಯಗಳಲ್ಲಿ ಎಂಬಿಎಗಾಗಿ ಅಧ್ಯಯನ ಮಾಡುವಾಗ ಒಬ್ಬನು ಭರಿಸಬೇಕಾದ ವೆಚ್ಚದ ಕುರಿತು ಇಲ್ಲಿದೆ ಸಂಪೂರ್ಣ ಮಾಹಿತಿ.
2022 ರ ವಿದೇಶಾಂಗ ವ್ಯವಹಾರಗಳ ಸಚಿವಾಲಯದ (MEA) ಅಂಕಿಅಂಶಗಳ ಪ್ರಕಾರ, 4.65 ಲಕ್ಷಕ್ಕೂ ಹೆಚ್ಚು ಯುಎಸ್‌ನಲ್ಲಿ, 1.83 ಲಕ್ಷ ಕೆನಡಾ, ಆಸ್ಟ್ರೇಲಿಯಾದಲ್ಲಿ ಒಂದು ಲಕ್ಷಕ್ಕಿಂತ ಸ್ವಲ್ಪ ಹೆಚ್ಚು ಮತ್ತು ಯುನೈಟೆಡ್ ಕಿಂಗ್‌ಡಮ್‌ನಲ್ಲಿ (ಯುಕೆ) 55,000 ಕ್ಕಿಂತ ಹೆಚ್ಚು ಭಾರತೀಯ ವಿದ್ಯಾರ್ಥಿಗಳು ಓದುತ್ತಿದ್ದಾರೆ.
ಅಮೆರಿಕ
ಸ್ಟ್ಯಾನ್‌ಫೋರ್ಡ್, ವಾರ್ಟನ್, ಹಾರ್ವರ್ಡ್, ಎಂಐಟಿ, ಕೊಲಂಬಿಯಾ ಸೇರಿದಂತೆ ಅಮೆರಿಕದಲ್ಲಿ ಅಧ್ಯಯನಕ್ಕೆ ಸಾಕಷ್ಟು ಅವಕಾಶಗಳಿವೆ.
ಒಂದು ವರ್ಷದ ಬೋಧನಾ ಶುಲ್ಕವು ಸ್ಟ್ಯಾನ್‌ಫೋರ್ಡ್‌ನಲ್ಲಿ ಸುಮಾರು 69 ಲಕ್ಷ ರೂ. ಆಗುತ್ತದೆ ಮತ್ತು ಒಟ್ಟಾರೆ ವೆಚ್ಚವು 1.09 ಕೋಟಿ ರೂ. ಆಗಲಿದೆ. ಇದರಲ್ಲಿ ಜೀವನ ವೆಚ್ಚ 15.91 ಲಕ್ಷ,, ವಸತಿ 17.49 ಲಕ್ಷ, ವೈದ್ಯಕೀಯ ವಿಮೆ 6.38 ಲಕ್ಷ ಮತ್ತು ಆರೋಗ್ಯ ಶುಲ್ಕ 65,604 ರೂ. ಸೇರಿವೆ. ಹೀಗೆ ಎರಡು ವರ್ಷಗಳ ಎಂಬಿಎ ವೆಚ್ಚವು ಸರಿಸುಮಾರು 2.18 ಕೋಟಿ ರೂ. ಆಗಲಿದೆ.
F1 ವೀಸಾದಲ್ಲಿರುವ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳು ತರಗತಿಗಳು ನಡೆಯುತ್ತಿರುವಾಗ ವಾರಕ್ಕೆ 20 ಗಂಟೆಗಳವರೆಗೆ ಮತ್ತು ತರಗತಿಗಳು ಇಲ್ಲದೇ ಇದ್ದಾಗ ವಾರಕ್ಕೆ 40 ಗಂಟೆಗಳವರೆಗೆ ಕೆಲಸ ಮಾಡಬಹುದು. ಅಧ್ಯಯನ ಪೂರ್ಣಗೊಂಡ ಮೇಲೆ ವಿದ್ಯಾರ್ಥಿಗಳು ಒಪಿಟಿ ಐಚ್ಛಿಕ ಪ್ರಾಯೋಗಿಕ ತರಬೇತಿಯ ಅಡಿಯಲ್ಲಿ ಒಂದು ವರ್ಷದೊಳಗೆ ತಾಯ್ನಾಡಿಗೆ ಹಿಂದಿರುಗಲು ಅರ್ಹರಾಗಿರುತ್ತಾರೆ.
ಒಪಿಟಿ ತಾತ್ಕಾಲಿಕ ಉದ್ಯೋಗವಾಗಿದೆ. F1 ವಿದ್ಯಾರ್ಥಿಯ ಪ್ರಮುಖ ಅಧ್ಯಯನದ ಕ್ಷೇತ್ರಕ್ಕೆ ನೇರವಾಗಿ ಸಂಬಂಧಿಸಿದೆ. ಒಪಿಟಿಗೆ ಅರ್ಹರಾಗಿರುವ ವಿದ್ಯಾರ್ಥಿಗಳು 12 ತಿಂಗಳ ಒಪಿಟಿ ದೃಢೀಕರಣವನ್ನು ಪಡೆಯಲು ಅರ್ಜಿ ಸಲ್ಲಿಸಬಹುದು.
ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಮತ್ತು ಗಣಿತ (STEM) ಕ್ಷೇತ್ರಗಳಲ್ಲಿ ಪದವಿ ಅಧ್ಯಯನ ಮಾಡಿದ್ದರೆ ಅನಂತರ ಕೆಲವು ಷರತ್ತುಗಳನ್ನು ಪೂರೈಸುವ ಮೂಲಕ ಒಪಿಟಿ ಅಧಿಕಾರದ 24 ತಿಂಗಳ ವಿಸ್ತರಣೆಗೆ ಅರ್ಜಿ ಸಲ್ಲಿಸಬಹುದಾಗಿದೆ.
ಕೆನಡಾ
ಉತ್ತರ ಅಮೆರಿಕ ಖಂಡದಲ್ಲಿರುವ ನೆಲೆಗೊಂಡಿರುವ ನೆರೆಯ ರಾಷ್ಟ್ರ ಕೆನಡಾವು ಭಾರತೀಯ ವಿದ್ಯಾರ್ಥಿಗಳಿಗೆ ಹಾಟ್‌ಸ್ಪಾಟ್ ಆಗಿದೆ. ಕೆನಡಾದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ಕ್ವೀನ್ಸ್ ವಿಶ್ವವಿದ್ಯಾಲಯ, ಟೊರೊಂಟೊ ವಿಶ್ವವಿದ್ಯಾಲಯ, ವಾಟರ್‌ಲೂ ವಿಶ್ವವಿದ್ಯಾಲಯ, ಯಾರ್ಕ್ ವಿಶ್ವವಿದ್ಯಾಲಯ, ಮೆಕ್‌ಗಿಲ್ ವಿಶ್ವವಿದ್ಯಾಲಯಗಳು ಸೇರಿವೆ.
ಮೆಕ್‌ಗಿಲ್ ವಿಶ್ವವಿದ್ಯಾನಿಲಯದಲ್ಲಿ ಎಂಬಿಎ ಭಾರತೀಯ ವಿದ್ಯಾರ್ಥಿಗೆ ವರ್ಷಕ್ಕೆ ಸುಮಾರು ಬೋಧನಾ ಶುಲ್ಕ 85 ಲಕ್ಷ ಮತ್ತು ಅಂತಾರಾಷ್ಟ್ರೀಯ ಅಧ್ಯಯನ ಪ್ರವಾಸಕ್ಕೆ 2.51 ಲಕ್ಷ ರೂ. ವೆಚ್ಚವಾಗುತ್ತದೆ. ಜೀವನ ವೆಚ್ಚಕ್ಕೆ ಸುಮಾರು 2 ಲಕ್ಷ ರೂ. ಬೇಕಾಗಬಹುದು.
ವಿದ್ಯಾರ್ಥಿಗಳು ವಾರಕ್ಕೆ 20 ಗಂಟೆಗಳವರೆಗೆ ಕೆಲಸ ಮಾಡಲು ಅನುಮತಿಸಲಾಗಿದೆ. ಸ್ನಾತಕೋತ್ತರ ಪದವಿಯ ಉದ್ದವು ಎರಡು ವರ್ಷಗಳಿಗಿಂತ ಕಡಿಮೆಯಿದ್ದರೂ ಸಹ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳು 3 ವರ್ಷದ ಪದವಿ ಅನಂತರದ ಕೆಲಸದ ಪರವಾನಗಿಗಾಗಿ ಅರ್ಜಿ ಸಲ್ಲಿಸಬಹುದು. ಆದರೆ ಅಭ್ಯರ್ಥಿಯು ಎಲ್ಲಾ ಇತರ ಅರ್ಹತಾ ಮಾನದಂಡಗಳನ್ನು ಪೂರೈಸಬೇಕು.
ಆಸ್ಟ್ರೇಲಿಯಾ
ಅಮೆರಿಕ ಅಥವಾ ಕೆನಡಾದಲ್ಲಿ ಅಧ್ಯಯನ ಮಾಡಲು ಸಾಧ್ಯವಾಗದವರು ಆಸ್ಟ್ರೇಲಿಯಾವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಯಾಕೆಂದರೆ ಇಲ್ಲಿ ಜೀವನ ವೆಚ್ಚ, ಅಧ್ಯಯನದ ವೆಚ್ಚ ಕಡಿಮೆ ಇರುತ್ತದೆ.
ಎಂಬಿಎಗಾಗಿ ಆಸ್ಟ್ರೇಲಿಯಾದ ಉನ್ನತ ವಿಶ್ವವಿದ್ಯಾಲಯಗಳಲ್ಲಿ ಮೆಲ್ಬೋರ್ನ್ ವಿಶ್ವವಿದ್ಯಾಲಯ, ಕ್ವೀನ್ಸ್‌ಲ್ಯಾಂಡ್, ಸಿಡ್ನಿ, ಪಶ್ಚಿಮ ಆಸ್ಟ್ರೇಲಿಯಾ, ಕ್ಯಾನ್‌ಬೆರಾ, ವೊಲೊಂಗೊಂಗ್ ಮತ್ತು ವಿಕ್ಟೋರಿಯಾ ವಿಶ್ವವಿದ್ಯಾಲಯ ಸೇರಿವೆ.
ವರ್ಷಕ್ಕೆ ಸಿಡ್ನಿ ವಿಶ್ವವಿದ್ಯಾನಿಲಯದಲ್ಲಿ 46 ಲಕ್ಷ ಗಿದೆ. 1.5 ವರ್ಷದ ಎಂಬಿಎಗಾಗಿ ಒಟ್ಟು ವೆಚ್ಚವು 92 ಲಕ್ಷವಾಗಿದೆ. 1.5 ವರ್ಷಗಳ ಜೀವನ ವೆಚ್ಚ 30.16 ಲಕ್ಷ ರೂ. ಆಗುತ್ತದೆ.
ಅಂತಾರಾಷ್ಟ್ರೀಯ ವಿದ್ಯಾರ್ಥಿಗಳಿಗೆ ಪ್ರತಿ ಹದಿನೈದು ದಿನಗಳ ಕಾಲ 48 ಗಂಟೆಗಳವರೆಗೆ ಕೆಲಸ ಮಾಡಲು ಅನುಮತಿಸಲಾಗಿದೆ. ಅಂದರೆ ವಿಶ್ವವಿದ್ಯಾನಿಲಯವು ಅಧಿವೇಶನದಲ್ಲಿದ್ದಾಗ ಪ್ರತಿ ವಾರ 24 ಗಂಟೆಗಳು.
ಅಧ್ಯಯನದ ಅನಂತರ ಒಬ್ಬರು ಪೋಸ್ಟ್ ಸ್ಟಡಿ ವರ್ಕ್ ಪರ್ಮಿಟ್‌ಗೆ ಅರ್ಜಿ ಸಲ್ಲಿಸಬಹುದು.ಈ ವೀಸಾಕ್ಕಾಗಿ ಅರ್ಜಿದಾರರು ಕಳೆದ 6 ತಿಂಗಳುಗಳಲ್ಲಿ ವಿದ್ಯಾರ್ಥಿ ವೀಸಾವನ್ನು ಹೊಂದಿರಬೇಕು ಮತ್ತು 35 ವರ್ಷ ಅಥವಾ ಅದಕ್ಕಿಂತ ಕಡಿಮೆ ವಯಸ್ಸಿನವರಾಗಿರಬೇಕು.