ಮಾಲ್ಡೀವ್ಸ್: ಕೆಲವು ತಿಂಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ(PM Narendra Modi) ವಿರುದ್ಧ ಟೀಕೆ ವ್ಯಕ್ತಪಡಿಸಿ ಬಾಯ್ಕಟ್ ಸಮಸ್ಯೆ ಎದುರಿಸಿದ್ದ ಮಾಲ್ಡೀವ್ಸ್(Maldives) ಇದೀಗ ಮತ್ತೆ ಸುದ್ದಿಯಲ್ಲಿದೆ. ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮೊಯಿಝು(Mohamed Muizzu) ವಿರುದ್ಧ ಮಾಟ ಮಂತ್ರ(black magic) ಮಾಡಿದ ಆರೋಪದಲ್ಲಿ ಸಚಿವೆಯೊಬ್ಬರು ಅರೆಸ್ಟ್ ಆಗಿದ್ದಾರೆ. ಮಾಲ್ಡೀವ್ಸ್‌ನ ಪರಿಸರ, ಹವಾಮಾನ ಬದಲಾವಣೆ ಮತ್ತು ಇಂಧನ ಖಾತೆ ರಾಜ್ಯ ಸಚಿವೆ ಫತೀಮತ್ ಶಮ್ನಾಜ್ ಅಲಿ ಸಲೀಂ ಬಂಧನಕ್ಕೊಳಗಾಗದ ಸಚಿವೆ.
ಮಾಲ್ಡೀವ್ಸ್ ಸಚಿವೆ ಫಾತಿಮತ್ ಶಮ್ನಾಜ್ ಅವರು ಅಧ್ಯಕ್ಷ ಮೊಯಿಝು ವಿರುದ್ಧವೇ ಅಂದ್ರೆ ಮಾಟ ಮಂತ್ರ ಮಾಡಿಸಿದ್ದಾರೆ. ವಾಮಾಚಾರ ಮಾಡಿದ ಆರೋಪದಲ್ಲಿ ಮಾಲ್ಡೀವ್ಸ್ ಪೊಲೀಸರು ಸಚಿವರನ್ನು ಬಂಧಿಸಿ ಜೈಲಿಗೆ ಹಾಕಿದ್ದಾರೆ. ಆಕೆಯ ಜೊತೆಗೆ ಮತ್ತು ಆಕೆಯ ಇಬ್ಬರು ಸೋದರಿಯರನ್ನು ರಾಜಧಾನಿ ಮಾಲೆಯಲ್ಲಿ ಪೊಲೀಸರು ಬಂಧಿಸಿದ್ದಾರೆ. ಹೆಚ್ಚಿನ ತನಿಖೆಗಾಗಿ ಇಬ್ಬರನ್ನೂ ಒಂದು ವಾರಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಈ ಬಗ್ಗೆ ಮಾಲ್ಡೀವ್ಸ್‌ನ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಮಾಟ ಮಂತ್ರ ಮಾಡಿದ್ದೇಕೆ?
ಇನ್ನು ಶಮ್ನಾಜ್ ಈ ರೀತಿಯಾಗಿ ಅಧ್ಯಕ್ಷನ ವಿರುದ್ಧವೇ ವಾಮಾಚಾರ ಮಾಡಲು ಕಾರಣವೇನೆಂಬುದನ್ನು ಪೊಲೀಸರು ವಿಚಾರಣೆ ವಿಚಾರಣೆ ನಡೆಸಿದಾಗ ಹಲವು ವಿಚಾರಗಳು ಬಯಲಾಗಿವೆ. ಶಮ್ನಾಜ್ ಮಾಜಿ ಗಂಡ ಅದಂ ರಮೀಜ್ ಅವರು ಸಹ ಮಾಲ್ಡೀವ್ಸ್ ಅಧ್ಯಕ್ಷ ಮೊಯಿಝು ಅವರ ಜೊತೆ ಕೆಲಸ ಮಾಡುತ್ತಿದ್ದಾರೆ. ಆದರೆ ಕೆಲವೇ ತಿಂಗಳ ಹಿಂದೆ ಮೊಯಿಝು ಅವರನ್ನು ಅಮಾನತು ಮಾಡಿದ್ದರು. ಇದರ ಜೊತೆಗೆ ಫಾತಿಮತ್ ಅವರಿಗೆ ಮಾಟ ಮಂತ್ರದಲ್ಲಿ ಅಪಾರ ನಂಬಿಕೆ ಇತ್ತು. ವಾಮಾಚಾರ ಮಾಡಿಸಿದರೆ ತನಗೆ ಸದ್ಯ ಇರುವ ಕ್ಯಾಬಿನೆಟ್ ಖಾತೆಯ ಬದಲು ಇನ್ನೂ ಅತ್ಯುನ್ನತವಾದ ಖಾತೆಯೇ ಸಿಗುತ್ತದೆ ಅನ್ನೋ ನಂಬಿಕೆ ಇತ್ತು. ಈ ಎಲ್ಲಾ ಕಾರಣದಿಂದ ಮಾಲ್ಡೀವ್ಸ್ ಅಧ್ಯಕ್ಷರ ವಿರುದ್ಧವೇ ವಾಮಾಚಾರ ನಡೆಸಿ ಸಿಕ್ಕಿಬಿದ್ದಿದ್ದಾರೆ.
ಅಂದ ಹಾಗೆ ಮಾಲ್ಡೀವ್ಸ್‌ನಲ್ಲಿ ವಾಮಾಚಾರ ಮಾಡುವುದು ಸರ್ವೇ ಸಾಮಾನ್ಯ. ಮಾಲ್ಡೀವ್ಸ್‌ನ ಬಹಳಷ್ಟು ಕಡೆ ವಾಮಾಚಾರ ಮಾಡುವುದು ವ್ಯಾಪಕವಾಗಿದೆ. ಆದರೆ ಈ ಮಾಟಮಂತ್ರದಲ್ಲಿ ಸಿಕ್ಕಿಬಿದ್ದರೆ ಇಸ್ಲಾಮಿಕ್ ಕಾನೂನಿನ ಪ್ರಕಾರ 6 ತಿಂಗಳವರೆಗೂ ಜೈಲು ಶಿಕ್ಷೆ ವಿಧಿಸಲಾಗುತ್ತೆ.
ಇದನ್ನೂ ಓದಿ: Prajwal Revanna Case: ಮಾಜಿ ಶಾಸಕ ಪ್ರೀತಂ ಗೌಡಗೆ ರಿಲೀಫ್; ಬಂಧಿಸದಂತೆ ಹೈಕೋರ್ಟ್ ಆದೇಶ