Site icon Vistara News

Mountains Losing Snow : ಕರಗಿ ನೀರಾಗುತ್ತಿವೆ ಹಿಮ ಪರ್ವತಗಳು! ಎಚ್ಚರಿಕೆ ನೀಡಿದ ವರದಿ

ರೋಮ್‌: ವಿಶ್ವದ ಹೆಲವೆಡೆ ಹಿಮ ಪರ್ವತಗಳಿವೆ. ಆ ರೀತಿಯ ಪ್ರದೇಶಗಳಲ್ಲಿ ಪ್ರತಿವರ್ಷ ಮಳೆಗಾಲ, ಬೇಸಿಗೆ ಕಾಲದಂತೆಯೇ ಹಿಮ ಮಳೆ ಸುರಿಯುವ ಕಾಲವಿರುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಪರ್ವತಗಳಲ್ಲಿನ ಹಿಮ ಹೆಚ್ಚಿನ ಪ್ರಮಾಣದಲ್ಲಿ ಕರಗಿ (Mountains Losing Snow) ನೀರಾಗುತ್ತಿದ್ದು, ಹಿಮ ಮಳೆಯ ಕಾಲವೂ ಕಡಿಮೆಯಾಗಿದೆ ಎನ್ನುವುದು ವರದಿಯೊಂದರಿಂದ ತಿಳಿದುಬಂದಿದೆ.

ಇದನ್ನೂ ಓದಿ: ಅಸ್ಸಾಂನಲ್ಲಿ ಮದರಸಾಗಳ ಸಂಖ್ಯೆ ಕಡಿಮೆ ಮಾಡುವುದಾಗಿ ತಿಳಿಸಿದ ಸಿಎಂ ಹಿಮಂತ್​ ಬಿಸ್ವಾ ಶರ್ಮಾ; ಸಾಮಾನ್ಯ ಶಿಕ್ಷಣ ನೀಡಲು ನಿರ್ಧಾರ

ಇಟಾಲಿಯನ್‌ ಆಲ್ಪ್ಸ್‌ ಸಂಸ್ಥೆ ಇಂಥದ್ದೊಂದು ವರದಿ ತಯಾರಿಸಿದೆ. ಅದರ ಪ್ರಕಾರ 1979ರಿಂದ 2019ರವರೆಗೆ ವಿಶ್ವಾದ್ಯಂತ ಹಿಮದ ಪ್ರಮಾಣವು ದಶಕಕ್ಕೆ ಶೇ.5.6ರಂತೆ ಕಡಿಮೆಯಾಗಿದೆ. ಈ ಅವಧಿಯಲ್ಲಿ ಹಿಮ ಮಳೆಯ ಕಾಲವು 36 ದಿನಗಳಷ್ಟು ಕಡಿಮೆಯಾಗಿದೆ. ಹಾಗೆಯೇ ಕಳೆದ 50 ವರ್ಷಗಳಲ್ಲಿ ನಿಯತಕಾಲದಲ್ಲಿ ಸುರಿಯುವ ಹಿಮದ ಆಳವು ಶೇ.8.4ರಷ್ಟು ಕಡಿಮೆಯಾಗಿದೆ. ಇದೇ ರೀತಿಯಲ್ಲಿ ಮುಂದುವರಿದರೆ ಹಿಮ ಮಳೆ ಅವಧಿ ಇನ್ನಷ್ಟು ಕಡಿಮೆಯಾಗಲಿದೆ ಎಂದು ವರದಿಯಲ್ಲಿ ಎಚ್ಚರಿಕೆ ನೀಡಲಾಗಿದೆ.

ಹಿಮ ಕರಗುತ್ತಿರುವ ಕುರಿತಾಗಿ ಎಚ್ಚರಿಕೆ ನೀಡಿರುವುದು ಇದೊಂದೇ ವರದಿಯಲ್ಲಿ. ಇದರ ಬಗ್ಗೆ ಸಾಕಷ್ಟು ವರದಿಗಳು ಈಗಾಗಲೇ ಬಿಡುಗಡೆಯಾಗಿವೆ. ಈ ಹಿಂದೆ 2020ರಲ್ಲಿ ಇಂಥದ್ದೇ ಒಂದು ವರದಿ ಹೊರಬಿದ್ದಿತ್ತು. ಅದರಲ್ಲಿ ವಿಶ್ವದಲ್ಲಿ ಶೇ.78 ಹಿಮಾವೃತ ಪರ್ವತಗಳಲ್ಲಿ ಹಿಮ ಅಧಿಕ ಪ್ರಮಾಣದಲ್ಲಿ ಕರಗಿ ನೀರಾಗುತ್ತಿರುವುದಾಗಿ ಎಚ್ಚರಿಸಲಾಗಿತ್ತು. ಹಾಗೆಯೇ ಸ್ವಿಝರ್‌ಲೆಂಡ್‌ನ ಸಂಸ್ಥೆಯೊಂದು 2022ರಲ್ಲಿ ವರದಿ ತಯಾರಿಸಿದ್ದು, ಅದರ ಪ್ರಕಾರ ಈ ಶತಮಾನ ಮುಗಿಯುವವರೆಗೆ 100 ದಿನಗಳ ಹಿಮ ಮಳೆ ಇದ್ದೇ ಇರುತ್ತದೆ. ಎಲ್ಲ ಕಡೆಯಲ್ಲಿದ್ದರೂ ಅತ್ಯಂತ ಎತ್ತರದ ಹಿಮ ಪರ್ವತಗಳಲ್ಲಿ ನಾವಿದನ್ನು ಕಾಣಬಹುದು ಎಂದು ಹೇಳಲಾಗಿತ್ತು.

ಇದನ್ನೂ ಓದಿ: Viral Video | ಹಿಮದ ಮುಂದೆ ಘೋಡೆ ಪೇ ಸವಾರ್ ಹಾಡಿಗೆ ಡ್ಯಾನ್ಸ್; ವೈರಲ್‌ ಆಯ್ತು ಈ ಜೋಡಿಯ ನೃತ್ಯ

ಹಿಮ ಪ್ರಮಾಣ ಕಡಿಮೆ ಆಗದಂತೆ ನೋಡಿಕೊಳ್ಳುವುದಕ್ಕಾಗಿ ಸರ್ಕಾರಗಳು, ವಿಜ್ಞಾನಿಗಳು ಕೂಡ ಸಾಕಷ್ಟು ಪ್ರಯತ್ನ ಮಾಡುತ್ತಿದ್ದಾರೆ. ಮಾನವ ನಿರ್ಮಿತ ಹಿಮದ ತಂತ್ರಜ್ಞಾನವನ್ನೂ ಕಂಡುಹಿಡಿಯಲಾಗಿದೆ. ಆದರೆ ಅದಕ್ಕೆ ಅತಿ ಹೆಚ್ಚಿನ ಪ್ರಮಾಣದಲ್ಲಿ ನೀರಿನ ಅವಶ್ಯಕತೆ ಇದ್ದು, ಅದನ್ನು ಹಿಮವಾಗಿ ಪರಿವರ್ತಿಸುವುದು ಅತ್ಯಂತ ಕಠಿಣ ಕೆಲಸವಾಗಿದೆ. ಹಾಗಾಗಿ ಈ ಮಾರ್ಗಗಳನ್ನು ಹೊರೆತುಪಡಿಸಿ ಬೇರೆ ಮಾರ್ಗಗಳಿಂದ ನಾವು ಹಿಮದ ರಕ್ಷಣೆ ಮಾಡಬೇಕಿದೆ ಎನ್ನುವುದು ತಜ್ಞರ ಮಾತು.

Exit mobile version