ನ್ಯೂಯಾರ್ಕ್ : ನವೆಂಬರ್ ೯ ಹಾಗೂ ೧೦ರಂದು ನ್ಯೂಯಾರ್ಕ್ ಆಕ್ಷನ್ (ನ್ಯೂಯಾರ್ಕ್ ಹರಾಜು) ನಡೆಯಲಿದೆ. ಇದರಲ್ಲಿ ಪ್ರದರ್ಶನಕ್ಕೆ ಇಟ್ಟಿರುವ ಮೈಕ್ರೋಸಾಫ್ಟ್ ಕಂಪನಿಯ ಸಹ ಸಂಸ್ಥಾಪಕ ಪಾಲ್ ಅಲೆನ್ ಅವರು ರಚಿಸಿರುವ ಕಲಾಕೃತಿಗಳು ವಿಶ್ವ ದಾಖಲೆಯ ಮೊತ್ತಕ್ಕೆ ಹರಾಜಾಗಲಿದೆ ಎಂದು ಅಂದಾಜಿಸಲಾಗಿದೆ.
ಎಎಫ್‌ಪಿ ಈ ಕುರಿತು ವರದಿಯೊಂದನ್ನು ಪ್ರಕಟಿಸಿದ್ದು, ಅದರ ಪ್ರಕಾರ ಅಲೆನ್ ಅವರ ಸಂಗ್ರಹಗಳು ಒಟ್ಟು ೮,೧೩೬ ಕೋಟಿ ರೂಪಾಯಿಗೆ (೧ ಬಿಲಿಯನ್ ಡಾಲರ್) ಹರಾಜಾಗಲಿದೆ ಎಂದು ಹೇಳಿದೆ. ಈ ಮೂಲಕ ಇದುವರೆಗಿನ ಗರಿಷ್ಠ ದಾಖಲೆಯಾಗಿರುವ ಮ್ಯಾಕ್‌ಲೋವ್ ಸಂಗ್ರಹ ಪಡೆದಿರುವ ೭೫೦೧ ಕೋಟಿ ರೂಪಾಯಿ ಗಳಿಕೆಯ ದಾಖಲೆ ಮುರಿಯಲಿದೆ.
ಅಲೆನ್ ಹಾಗೂ ಬಿಲ್ ಗೇಟ್ಸ್ ಸೇರಿಕೊಂಡು ಮೈಕ್ರೋಸಾಫ್ಟ್ ಕಂಪನಿಯನ್ನು ಸ್ಥಾಪಿಸಿದ್ದರು. ಆದರೆ, ೧೯೮೩ರಲ್ಲಿ ಅಲೆನ್ ಕಂಪನಿ ತೊರೆದಿದ್ದರು. ಆ ಬಳಿಕ ಅವರು ತಂತ್ರಜ್ಞಾನ, ಮಾಧ್ಯಮ ಹಾಗೂ ಬಾಹ್ಯಾಕಾಶ ವಿಜ್ಞಾನದ ಕಂಪನಿಗಳಲ್ಲಿ ಹೂಡಿಕೆಗಳನ್ನು ಮುಂದುವರಿಸಿದ್ದರು. ೨೦೧೮ರಲ್ಲಿ ತಮ್ಮ ೬೫ನೇ ವರ್ಷದಲ್ಲಿ ಅಲೆನ್ ಮೃತಪಟ್ಟಿದ್ದರು.
ಇದನ್ನೂ ಓದಿ | Iti Acharya | ನ್ಯೂಯಾರ್ಕ್ ಟೈಮ್ಸ್ ಸ್ಕ್ವೇರ್ ಬಿಲ್ ಬೋರ್ಡ್‌ನಲ್ಲಿ ಮಿಂಚಿದ ಕನ್ನಡತಿ ಇತಿ ಆಚಾರ್ಯ