Site icon Vistara News

North Korea : ಭಾರತದಂತಲ್ಲ ಉತ್ತರ ಕೊರಿಯಾ; ಈ ದೇಶದ ಬಗ್ಗೆ ನಿಮಗೆ ಗೊತ್ತಿರದ ಇಂಟರೆಸ್ಟಿಂಗ್ ಮಾಹಿತಿಗಳು ಇಲ್ಲಿವೆ… ಓದಿ

#image_title

ಬೆಂಗಳೂರು: ಭಾರತದಲ್ಲಿ ಎಲ್ಲದಕ್ಕೂ ಸ್ವಾತಂತ್ರ್ಯವಿದೆ. ಆದರೆ ನಮ್ಮಲ್ಲಿನಷ್ಟು ಸ್ವತಂತ್ರವಾಗಿ ಎಲ್ಲಾ ರಾಷ್ಟ್ರಗಳೂ ಇಲ್ಲ. ಉತ್ತರ ಕೊರಿಯಾದಂತಹ (North Korea) ರಾಷ್ಟ್ರಗಳಲ್ಲಿ ಇಂದಿಗೂ ಮನುಷ್ಯರಿಗೆ ಜೀವಿಸುವುದಕ್ಕೆ ಹಲವಾರು ನಿರ್ಬಂಧಗಳಿವೆ. ಸರ್ವಾಧಿಕಾರವಿರುವ ಈ ರಾಷ್ಟ್ರದ ಬಗ್ಗೆ ನಿಮಗೆ ತಿಳಿದಿರದ ವಿಶೇಷ ಮಾಹಿತಿಗಳಿವು.

ಇದನ್ನೂ ಓದಿ: Global Investors Summit: ಉತ್ತರ ಪ್ರದೇಶದ ದೃಷ್ಟಿಕೋನ ಬದಲಾಗಿದೆ, ಹೂಡಿಕೆದಾರರಿಗೆ ಸ್ವಾಗತ ಎಂದ ಪ್ರಧಾನಿ ಮೋದಿ

ಸರ್ವಾಧಿಕಾರದ ಆಡಳಿತ

ಉತ್ತರ ಕೊರಿಯಾವನ್ನು 70 ವರ್ಷಗಳಿಂದ ಕಿಮ್ ಕುಟುಂಬ ಆಳುತ್ತಿದೆ. ಪ್ರಸ್ತುತ ಸರ್ವಾಧಿಕಾರಿಯಾಗಿರುವ ಕಿಮ್ ಜಾಂಗ್-ಉನ್ 2011ರಲ್ಲಿ ಅಧಿಕಾರ ವಹಿಸಿಕೊಂಡರು.

ಅಂತರ್ಜಾಲಕ್ಕೆ ನಿರ್ಬಂಧ

ನಮ್ಮಲ್ಲಿಯಂತೆ ಉತ್ತರ ಕೊರಿಯಾದಲ್ಲಿ ಹೇಗೆಂದರೆ ಹಾಗೆ ಅಂತರ್ಜಾಲವನ್ನು ಬಳಸುವಂತಿಲ್ಲ. ಅಲ್ಲಿನ ಬಹುತೇಕ ಜನರಿಗೆ ಇಂಟರ್ನೆಟ್ ಬಳಕೆಗೆ ಅವಕಾಶವೇ ಇಲ್ಲ. ಕೆಲವು ಸೀಮಿತ ವರ್ಗದವರಿಗೆ ಮಾತ್ರ ಸರ್ಕಾರಿ ನಿಯಂತ್ರಿತ ವೆಬ್ಸೈಟ್ ತೆರೆಯುವುದಕ್ಕೆ ಅವಕಾಶವಿರುತ್ತದೆ.

ಪ್ರತ್ಯೇಕ ದೇಶ

ಭಾರತವು ಬೇರೆ ರಾಷ್ಟ್ರಗಳೊಂದಿಗೆ ಒಪ್ಪಂದ ಮಾಡಿಕೊಳ್ಳುವುದನ್ನು ಹಾಗೂ ವ್ಯಾಪಾರ ವಹಿವಾಟು ನಡೆಸುವುದನ್ನು ನೀವು ಕಂಡಿರುತ್ತೀರಿ. ಆದರೆ ಉತ್ತರ ಕೊರಿಯಾದಲ್ಲಿ ಹಾಗಿಲ್ಲ. ಈ ದೇಶವು ಇತರ ದೇಶಗಳೊಂದಿಗೆ ಸೀಮಿತ ವ್ಯಾಪಾರ ಮತ್ತು ರಾಜತಾಂತ್ರಿಕ ಸಂಬಂಧಗಳನ್ನು ಹೊಂದಿದೆ ಮತ್ತು ಬೇರೆ ದೇಶಗಳಿಗೆ ನಾಗರಿಕರ ಚಲನವಲನಗಳನ್ನು ಬಿಗಿಯಾಗಿ ನಿಯಂತ್ರಿಸುತ್ತದೆ.

ಮಿಲಿಟರೀಕರಣ


ಭಾರತದಲ್ಲಿ ಸೇನೆಗೆ ಸೇರುವುದು ಭಾರತೀಯರ ಆಯ್ಕೆ. ಆದರೆ ಅಲ್ಲಿ ಹಾಗಿಲ್ಲ. ಇಂತಿಷ್ಟು ವರ್ಷ ಸೇನೆಯಲ್ಲಿ ಕೆಲಸ ಮಾಡಲೇಬೇಕೆಂಬ ನಿಯಮವಿದೆ. ಹಾಗಾಗಿ ಉತ್ತರ ಕೊರಿಯಾವು ವಿಶ್ವದ ಅತಿದೊಡ್ಡ ಸ್ಥಾಯಿ ಸೈನ್ಯಗಳಲ್ಲಿ ಒಂದನ್ನು ಹೊಂದಿದೆ. ಸರಿಸುಮಾರು 1.2 ಮಿಲಿಯನ್ ಸಕ್ರಿಯ ಮಿಲಿಟರಿ ಸಿಬ್ಬಂದಿ ಆ ಸೇನೆಯಲ್ಲಿದ್ದಾರೆ.

ಮಾಧ್ಯಮ ನಿಯಂತ್ರಣ

ಉತ್ತರ ಕೊರಿಯಾದ ಸರ್ಕಾರವು ದೇಶದ ಎಲ್ಲಾ ಮಾಧ್ಯಮಗಳ ಮೇಲೆ ನಿಯಂತ್ರಣ ಹೊಂದಿದೆ. ಹಾಗೆಯೇ ನಾಗರಿಕರಿಗೆ ವಿದೇಶಿ ಸುದ್ದಿ ಮೂಲಗಳನ್ನು ಸಿಗದಂತೆ ನೋಡಿಕೊಳ್ಳಲಾಗುತ್ತಿದೆ.

ಮಾನವ ಹಕ್ಕುಗಳ ಉಲ್ಲಂಘನೆ

ಮಾನವ ಹಕ್ಕುಗಳ ಉಲ್ಲಂಘನೆಗೆ ಉತ್ತರ ಕೊರಿಯಾ ಮೊದಲು. ಜೈಲು ಶಿಬಿರಗಳು, ಬಲವಂತದ ಕೆಲಸ, ಚಿತ್ರಹಿಂಸೆ ಮತ್ತು ವಾಕ್ ಮತ್ತು ಧರ್ಮದ ಸ್ವಾತಂತ್ರ್ಯದ ಮೇಲಿನ ನಿರ್ಬಂಧಗಳನ್ನು ಒಳಗೊಂಡಂತೆ ಹಲವಾರು ರೀತಿಯ ವಿಚಿತ್ರ ನಿಯಮಗಳು ಇಲ್ಲಿವೆ.

ಅತ್ಯಂತ ಬಡ ದೇಶ

ಉತ್ತರ ಕೊರಿಯಾ ಕೇಂದ್ರೀಯವಾಗಿ ಯೋಜಿತ ಆರ್ಥಿಕತೆ ಮತ್ತು ಸೀಮಿತ ವ್ಯಾಪಾರವನ್ನು ಹೊಂದಿದೆ. ಇದರ ಪರಿಣಾಮವಾಗಿ ಅತ್ಯಂತ ಕಡಿಮೆ ಜಿಡಿಪಿ ಮತ್ತು ವ್ಯಾಪಕ ಬಡತನ ಇಲ್ಲಿದೆ.

ವಿದೇಶಿ ಪ್ರಯಾಣಕ್ಕೆ ನಿರ್ಬಂಧ

ಉತ್ತರ ಕೊರಿಯನ್ನರು ಸರ್ಕಾರದ ಅನುಮೋದನೆಯಿಲ್ಲದೆ ವಿದೇಶಕ್ಕೆ ಪ್ರಯಾಣಿಸುವಂತಿಲ್ಲ. ಹಾಗೆಯೇ ಅಲ್ಲಿಗೆ ಹೋಗುವ ವಿದೇಶಿ ಪ್ರವಾಸಿಗರ ಚಲನವಲನಗಳ ಮೇಲೆ ಸರ್ಕಾರ ಹೆಚ್ಚು ನಿಗಾ ವಹಿಸುತ್ತದೆ.

ಪರಮಾಣು ಶಸ್ತ್ರಾಸ್ತ್ರ

ಉತ್ತರ ಕೊರಿಯಾ ಹಲವಾರು ಪರಮಾಣು ಶಸ್ತ್ರಾಸ್ತ್ರಗಳ ಪರೀಕ್ಷೆಗಳನ್ನು ನಡೆಸಿದೆ ಮತ್ತು ಇದರ ಪರಿಣಾಮವಾಗಿ ಅಂತಾರಾಷ್ಟ್ರೀಯ ನಿರ್ಬಂಧಗಳಿಗೆ ಒಳಪಟ್ಟಿದೆ.

ವಿದೇಶಿ ನೆರವು

ಉತ್ತರ ಕೊರಿಯಾ ತನ್ನ ಜನಸಂಖ್ಯೆಯನ್ನು ಪೋಷಿಸಲು ವಿದೇಶಿ ನೆರವನ್ನು ಹೆಚ್ಚು ಅವಲಂಬಿಸಿದೆ. ಇಲ್ಲಿನ ಲಕ್ಷಾಂತರ ಜನರು ಅಪೌಷ್ಟಿಕತೆ ಮತ್ತು ಇತರ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ.

Exit mobile version