Site icon Vistara News

ಲೈಂಗಿಕ ಸುಖವನ್ನು ವಿವರಿಸಿ, ಶಾಲಾ ಮಕ್ಕಳ ಪರೀಕ್ಷೆಯ 10 ಅಂಕಗಳ ಪ್ರಶ್ನೆ ಫುಲ್​ ವೈರಲ್​!

childern

#image_title

ವಾಷಿಂಗ್ಟನ್​: ಲೈಂಗಿಕ ಸುಖ ಹೇಗಿರುತ್ತದೆ ಎಂದು ಕಲ್ಪಿಸಿಕೊಂಡು ಬರೆಯಿರಿ. ಸರಿಯಾದ ಉತ್ತರಕ್ಕೆ 10 ಅಂಕಗಳು. ಪರೀಕ್ಷೆಯೊಂದರಲ್ಲಿ ಶಾಲಾ ಮಕ್ಕಳಿಗೆ ಕೇಳಿದ ಪ್ರಶ್ನೆಗೆ ಪೋಷಕರು ಹೌಹಾರಿ ಹೋಗಿದ್ದಾರೆ. ಎಲ್ಲರೂ ಶಾಲೆಯ ಹೆಡ್​ಮಾಸ್ಟರ್​ ಕಚೇರಿಗೆ ದೌಡಾಯಿಸಿ ಅವರನ್ನು ಚೆನ್ನಾಗಿ ದಬಾಯಿಸಿದ್ದಾರೆ. ಆದರೆ, ಶಾಲೆಯ ಆಡಳಿತ ಮಂಡಳಿ ಅದನ್ನು ಸಮರ್ಥಿಸಿಕೊಂಡಿದೆ. ಇದುವೇ ಲೈಂಗಿಕ ಶಿಕ್ಷಣ ಎಂದು ಸಮಜಾಯಿಷಿ ಕೊಟ್ಟಿದೆ. ಆದರೆ, ಮಕ್ಕಳಿಗೆ ಕೊಟ್ಟಿರುವ ಪ್ರಶ್ನೆ ಸೋಶಿಯಲ್​ ಮೀಡಿಯಾಗಳಲ್ಲಿ ಸಂಪೂರ್ಣ ವೈರಲ್​ ಆಗಿದೆ. ದೊಡ್ಡವರು ಕೂಡ ಉತ್ತರ ಕೊಡಲು ಸಾಧ್ಯವೇ ಎಂದು ಪರೀಕ್ಷಿಸಿ ನೋಡಿದ್ದಾರೆ!

ಇಷ್ಟೆಲ್ಲ ದೊಡ್ಡ ಅವಾಂತರ ನಡೆದಿದ್ದು ನಮ್ಮ ದೇಶದಲ್ಲಿ ಅಲ್ಲ. ಘಟನೆ ನಡೆದಿರುವುದು ಅಮೆರಿಕದಲ್ಲಿ. ಒರೆಗಾನ್​ನ ಶಾಲೆಯೊಂದರಲ್ಲಿ. ಆದರೂ ವಿಲಕ್ಷಣ ಪ್ರಶ್ನೆ ಅಲ್ಲಿನ ಮಕ್ಕಳ ಪೋಷಕರನ್ನೂ ಬೆಚ್ಚಿ ಬೀಳಿಸಿದೆ. ಸೆಕ್ಸ್​ ಟಾಯ್ಸ್​ಗಳ ಬಗ್ಗೆಯೂ ಉತ್ತರದಲ್ಲಿ ವಿವರಣೆ ಕೊಡಬೇಕು ಎಂಬದಾಗಿ ಪ್ರಶ್ನೆಯಲ್ಲಿ ಹೇಳಲಾಗಿತ್ತು. ಅಲ್ಲದೇ ದೈಹಿಕ ಸಂಬಂಧವೇ ಇಲ್ಲದೆ ಪ್ರೀತಿಯನ್ನು ತೋರಿಸುವುದು ಹೇಗೆ ಎಂಬುದನ್ನೂ ವಿವರಿಸುವಂತೆ ಹೇಳಲಾಗಿದೆ.

ಇದನ್ನೂ ಓದಿ : Public Exam : 5, 8ನೇ ತರಗತಿ ಪಬ್ಲಿಕ್‌ ಪರೀಕ್ಷೆಗೆ ಕೋರ್ಟ್‌ ಗ್ರೀನ್‌ ಸಿಗ್ನಲ್, ಮಾರ್ಚ್‌ 27ರಿಂದ ಎಕ್ಸಾಂ ನಡೆಸಲು ಸೂಚನೆ

ಪ್ರಶ್ನೆ ಪತ್ರಿಕೆಯು ಟ್ವೀಟ್​ನಲ್ಲಿ ವೈರಲ್​ ಆಗಿತ್ತು. ಸುಮಾರು 54 ಲಕ್ಷ ಮಂದಿ ಅದನ್ನು ವೀಕ್ಷಿಸಿದ್ದಾರೆ. ನೆಟ್ಟಿಗರು ಇಂಥ ಪ್ರಶ್ನೆಗಳನ್ನು ಕೇಳಿದ ಶಿಕ್ಷಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಆದರೆ, ಆರೋಗ್ಯದ ವಿಚಾರವಾಗಿ ಈ ಪ್ರಶ್ನೆಯನ್ನು ಕೇಳಲಾಗಿದೆ ಎಂದು ಮುಖ್ಯ ಶಿಕ್ಷಕಿ ಸಮರ್ಥನೆ ಮಾಡಿಕೊಂಡಿದ್ದಾರೆ.

Exit mobile version