Site icon Vistara News

Pavel Durov Arrest: ಟೆಲಿಗ್ರಾಂ ಸಿಇಒ ಪಾವೆಲ್‌‌ ಫ್ರಾನ್ಸ್‌‌ನಲ್ಲಿ ಬಂಧನ; ಕಾರಣ ಏನು?

Pavel Durov Arrest

Pavel Durov Arrest: Telegram CEO Pavel Durov arrested at French airport: Here’s why

ಪ್ಯಾರಿಸ್​: ವಾಟ್ಸ್‌ಆ್ಯಪ್‌ ರೀತಿಯ ಮೆಸೆಂಜರ್‌ ಆ್ಯಪ್‌ ಆಗಿರುವ ಟೆಲಿಗ್ರಾಂ(Telegram) ಸಿಇಒ ಪಾವೆಲ್‌ ದುರೋವ್‌ (Pavel Durov) ಅವರನ್ನು ಪ್ಯಾರಿಸ್‌ ವಿಮಾನ ನಿಲ್ದಾಣದಲ್ಲಿ ಫ್ರೆಂಚ್(Pavel Durov Arrest) ಅಧಿಕಾರಿಗಳು ಬಂಧಿಸಿದ್ದಾರೆ. 39 ವರ್ಷದ ಟೆಕ್ ಉದ್ಯಮಿ ತನ್ನ ಖಾಸಗಿ ಜೆಟ್‌ನಲ್ಲಿ ಬಂದ ನಂತರ ಬಂಧಿಸಲಾಯಿತು ಎಂದು ಫ್ರೆಂಚ್ ಮಾಧ್ಯಮ ವರದಿ ಮಾಡಿದೆ. ಟೆಲಿಗ್ರಾಮ್ ಪ್ಲಾಟ್‌ಫಾರ್ಮ್‌ಗೆ ಸಂಬಂಧಿಸಿದ ಅಪರಾಧಗಳಿಗೆ ಸಂಬಂಧಿಸಿದ ವಾರಂಟ್ ಅಡಿಯಲ್ಲಿ ಡುರೊವ್ ಅವರನ್ನು ಬಂಧನವನ್ನು ಮಾಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ದುರೋವ್‌ ಅವರ ಬಂಧನದ ಸುದ್ದಿ ಕೇಳಿ ಕೆಲವು ರಷ್ಯಾದ ರಾಜಕಾರಣಿಗಳು ಮತ್ತು ರಾಜತಾಂತ್ರಿಕರು ಫ್ರಾನ್ಸ್‌ನ ಕ್ರಮಗಳನ್ನು ಟೀಕಿಸಿದ್ದಾರೆ. ವಿಶ್ವಾದ್ಯಂತ ಫ್ರೆಂಚ್ ರಾಯಭಾರ ಕಚೇರಿಗಳಲ್ಲಿ ಪ್ರತಿಭಟನೆಗೆ ಕರೆಗಳು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾಗಿವೆ. ಸುಮಾರು 900 ಮಿಲಿಯನ್ ಸಕ್ರಿಯ ಬಳಕೆದಾರರನ್ನು ಹೊಂದಿರುವ ಟೆಲಿಗ್ರಾಮ್, ಜಾಗತಿಕ ಸಂವಹನಗಳಲ್ಲಿ, ವಿಶೇಷವಾಗಿ ರಷ್ಯಾ, ಉಕ್ರೇನ್ ಮತ್ತು ಹಿಂದಿನ ಸೋವಿಯತ್ ಗಣರಾಜ್ಯಗಳಲ್ಲಿ ಗಮನಾರ್ಹವಾಗಿ ಮಾರ್ಪಟ್ಟಿದೆ. ಉಕ್ರೇನ್‌ನಲ್ಲಿ ನಡೆಯುತ್ತಿರುವ ಸಂಘರ್ಷದ ಬಗ್ಗೆ ಶೋಧಿಸದ ಮಾಹಿತಿಯ ಮೂಲವಾಗಿ ಟೆಲಿಗ್ರಾಮ್ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಸರ್ಕಾರಿ ಅಧಿಕಾರಿಗಳು ಮತ್ತು ನಾಗರಿಕರು ಇಲ್ಲಿ ಹೆಚ್ಚಾಗಿ ಈ ಆ್ಯಪ್​ ಬಳಸುತ್ತಾರೆ.

ರಷ್ಯಾ ಮೂಲದ ಪಾವೆಲ್‌ ದುರೋವ್‌, ದುಬೈನಲ್ಲಿ ನೆಲೆಸಿದ್ದಾರೆ. ಹಿಂದೊಮ್ಮೆ ಅವರು ಕೆಲವು ಸರ್ಕಾರಗಳು ತನ್ನ ಮೇಲೆ ಒತ್ತಡ ಹೇರಿದ್ದರೂ, ಟೆಲಿಗ್ರಾಮ್ “ತಟಸ್ಥ ವೇದಿಕೆ”ಯಾಗಿ ಉಳಿಯಬೇಕು ಎಂದು ಹೇಳಿದ್ದರು.

ಕೆಲವು ದಿನಗಳ ಹಿಂದೆ ಪಾವೆಲ್‌ ದುರೋವ್‌ ಅವರು ಸ್ಫೋಟಕ ವಿಷಯವೊಂದನ್ನು ಬಹಿರಂಗಪಡಿದ್ದರು. ನಾನು ಮದುವೆಯನ್ನೇ ಆಗದೆ 100 ಮಕ್ಕಳ ತಂದೆಯಾಗಿದ್ದೇನೆ” ಎಂದು ಟೆಲಿಗ್ರಾಂ ಆ್ಯಪ್‌ನಲ್ಲಿಯೇ (Telegram App) ಹಂಚಿಕೊಂಡಿದ್ದಾರೆ. ವೀರ್ಯ ದಾನದ ಮೂಲಕ 100 ಮಕ್ಕಳ ಜನನಕ್ಕೆ ಕಾರಣರಾಗಿದ್ದೇನೆ ಎಂದು ಹೇಳಿದ್ದರು.

“ನಾನು 100 ಮಕ್ಕಳ ತಂದೆ ಎಂಬುದಾಗಿ ತಿಳಿಸಿದ್ದಾರೆ. ಒಮ್ಮೆಯೂ ಮದುವೆಯಾಗದ, ಏಕಾಂಗಿಯಾಗಿಯೇ ಬದುಕಲು ಇಚ್ಛಿಸಿರುವ ನನಗೆ ಇದು ಹೇಗೆ ಸಾಧ್ಯ” ಎಂದು ಅವರು ಪ್ರಶ್ನೆ ಹಾಕಿದ್ದಾರೆ. ಬಳಿಕ ಇದು ಹೇಗೆ ಸಾಧ್ಯ ಎಂಬುದನ್ನು ವಿವರಿಸಿದ್ದಾರೆ. “15 ವರ್ಷದ ಹಿಂದೆ ನನ್ನ ಗೆಳೆಯನೊಬ್ಬ ವಿಚಿತ್ರ ಮನವಿಯೊಂದಿಗೆ ನನ್ನ ಬಳಿ ಬಂದ. ಫಲವತ್ತತೆ (Fertility) ಸಮಸ್ಯೆಯಿಂದ ಬಳಲುತ್ತಿದ್ದು, ನಾನು ನನ್ನ ಹೆಂಡತಿ ಮಕ್ಕಳನ್ನು ಹೊಂದಲು ನೀನು ವೀರ್ಯ ದಾನ ಮಾಡಬೇಕು” ಎಂದ. “ಇದೆಲ್ಲ ತಮಾಷೆ ಎಂಬುದಾಗಿ ನಾನು ನಕ್ಕೆ. ಆದರೆ, ಆತ ಸೀರಿಯಸ್‌ ಆಗಿದ್ದ” ಎಂಬುದಾಗಿ ಪಾವೆಲ್‌ ದುರೋವ್‌ ತಿಳಿಸಿದ್ದರು.

ಇದನ್ನೂ ಓದಿ Pavel Durov: ಮದುವೆಯಾಗದೆ 100 ಮಕ್ಕಳಿಗೆ ತಂದೆಯಾದ ಟೆಲಿಗ್ರಾಂ ಸಿಇಒ ಪಾವೆಲ್‌ ದುರೋವ್! ಈತ ರಿಯಲ್‌ ಲೈಫ್‌ ‘ವಿಕ್ಕಿ ಡೋನರ್’

“ಮಕ್ಕಳ ಜನನಕ್ಕೆ ಕಾರಣವಾಗುವ ಸಾಮರ್ಥ್ಯ ಇರುವ ವ್ಯಕ್ತಿಯಿಂದ ವೀರ್ಯ ಪಡೆಯಬೇಕು ಎಂಬುದಾಗಿ ವೈದ್ಯರು ಹೇಳಿದ್ದಾರೆ” ಎಂದು ಗೆಳೆಯ ಮನವರಿಕೆ ಮಾಡಿದ. “ವೈದ್ಯರು ಕೂಡ ವೀರ್ಯ ದಾನ ಮಾಡುವುದು ನಾಗರಿಕ ಕರ್ತವ್ಯವಾಗಿದೆ” ಎಂಬುದಾಗಿ ನನ್ನನ್ನು ಒಪ್ಪಿಸಿದರು. “ವೈದ್ಯರು ಮನವರಿಕೆ ಮಾಡಿದ ಬಳಿಕ ನಾನು ವೀರ್ಯ ದಾನ ಮಾಡುತ್ತಲೇ ಬಂದೆ. ಈಗ ನಾನು 100 ಮಕ್ಕಳ ಜನನಕ್ಕೆ ಕಾರಣನಾಗಿದ್ದೇನೆ” ಎಂಬುದಾಗಿ ಟೆಲಿಗ್ರಾಂನಲ್ಲಿ ಪಾವೆಲ್‌ ದುರೋವ್‌ ಹೆಮ್ಮೆಯಿಂದ ಹೇಳಿಕೊಂಡಿದ್ದರು.

Exit mobile version