Site icon Vistara News

Pervez Musharraf Death : ಪಾಕ್ ಸೇನಾ ಮುಖ್ಯಸ್ಥ, ಅಧ್ಯಕ್ಷ ಆದ ಬಳಿಕ ದೇಶಭ್ರಷ್ಟರಾದ ಮುಷರಫ್

Pervez Musharraf Death, Pervez went into exile after president

ಇಸ್ಲಾಮಾಬಾದ್: ಹೆಚ್ಚು ಕಡಿಮೆ ಹತ್ತು ವರ್ಷಗಳ ಕಾಲ ಪಾಕಿಸ್ತಾನದ ಆಡಳಿತ ನಡೆಸಿದ್ದ ಜನರಲ್ ಪರ್ವೇಜ್ ಮುಷರಫ್ ಅವರ ಅಧಃಪತನ 2008ರಿಂದ ಶುರುವಾಯಿತು. ತಮ್ಮ ಹುದ್ದೆಗೆ ರಾಜೀನಾಮೆ ನೀಡುತ್ತಿದ್ದಂತೆ ಅವರ ವಿರುದ್ಧ ಪಾಕಿಸ್ತಾನದ ನ್ಯಾಯಾಲಯಗಳಲ್ಲಿ ಹಲವು ಕೇಸುಗಳು ದಾಖಲಾದವು. ಸಂವಿಧಾನ ಪಲ್ಲಟ, ನ್ಯಾಯಾಧೀಶರ ಬಂಧನ, ಬೆನಜೀರ್ ಭುಟ್ಟೋ ಹತ್ಯೆ, ಭ್ರಷ್ಟಾಚಾರ ಪ್ರಕರಣಗಳು ಸೇರಿದಂತೆ ಹಲವು ಕೇಸುಗಳಲ್ಲಿ ಅವರು ಆರೋಪಿಯಾದರು. ಆ ಬಳಿಕ ಅವರು ಮತ್ತೆ ಪಾಕಿಸ್ತಾನದ ರಾಜಕೀಯದಲ್ಲಿ ತಮ್ಮ ವೈಭವದ ದಿನಗಳನ್ನು ಮೆರೆಯಲು ಸಾಧ್ಯವಾಗಲಿಲ್ಲ. ಜನರಲ್ ಪರ್ವೇಜ್ ಮುಷರಫ್ ಅವರು ಭಾನುವಾರ ದುಬೈನಲ್ಲಿ ನಿಧನರಾದರು(Pervez Musharraf Death).

ಸ್ವ ಗಡೀಪಾರು

ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ ಬಳಿಕ ಮುಷರಫ್ ವಿರುದ್ಧ ಹಲವು ಕೇಸುಗಳು ದಾಖಲಾದವು. ಹಾಗಾಗಿ, ಅವರು 2008ರಲ್ಲಿ ಸ್ವ ಗಡೀಪಾರಿಗೆ ತೀರ್ಮಾನಿಸಿ, ಲಂಡನ್‌ಗೆ ಪಲಾಯನಗೈದರು. ತಮ್ಮ 9 ವರ್ಷಗಳ ಆಡಳಿತವನ್ನು ಸಮರ್ಥಿಸಿಕೊಂಡು ದೂರದರ್ಶನದಲ್ಲಿ ಕೊನೆಯ ಭಾಷಣ ಮಾಡಿ, ದೇಶ ಬಿಟ್ಟು ಹೋದರು. ಅಂದಿನ ಸಮಯದಲ್ಲಿ ಪಾಕಿಸ್ತಾನದ ಒಟ್ಟು ಜನಾಭಿಪ್ರಾಯ ಕೂಡ ಮುಷರಫ್ ವಿರುದ್ಧವೇ ಇತ್ತು. ಮುಷರಫ್ ಅವರು ಅಧ್ಯಕ್ಷ ಹುದ್ದೆಯನ್ನು ತೊರೆದಿದ್ದನ್ನು ಶೇ.63 ಪಾಕಿಸ್ತಾನಿಯರು ಬೆಂಬಲಿಸಿದ್ದರು. 2008 ನವೆಂಬರ್ 23ರಂದು ಪಾಕಿಸ್ತಾನ ತೊರೆದು, ಲಂಡನ್‌ಗೆ ತೆರಳಿದರು.

2013ರಲ್ಲಿ ಪಾಕಿಸ್ತಾನಕ್ಕೆ ಮರಳಿದರು

2011ರಿಂದಲೇ ಮುಷರಫ್ ಪಾಕಿಸ್ತಾನಕ್ಕೆ ಮರಳಿಲಿದ್ದಾರೆಂದು ಸುದ್ದಿಯಾಯಿತು. ಆದರೆ, ಪಾಕಿಸ್ತಾನದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದ ಸ್ಥಳೀಯ ತಾಲಿಬಾನ್, ಮುಷರಫ್ ಅವರನ್ನು ಕೊಲ್ಲುವ ಬೆದರಿಕೆ ಹಾಕಿತು. ಇಷ್ಟಾಗಿಯೂ ಅವರು 2013 ಮಾರ್ಚ್‌ ತಿಂಗಳಲ್ಲಿ ಪಾಕಿಸ್ತಾನಕ್ಕೆ ಮರಳಿದರು. ಇಷ್ಟಾದ ಮೇಲೆ, ಅವರ ವಿರುದ್ಧ ಹಲವು ಪ್ರಕರಣಗಳ ವಿಚಾರಣೆ ಆರಂಭವಾದವು. ಅಂತಿಮವಾಗಿ ಇತ್ತೀಚಿನ ಕೆಲವು ವರ್ಷಗಳಿಂದ ಪಾಕಿಸ್ತಾನ ತೊರೆದು ದುಬೈನಲ್ಲಿ ವಾಸವಾಗಿದ್ದರು.

ಮುಷರಫ್ ವಿರುದ್ಧ ಪ್ರಕರಣಗಳು

ಗೃಹ ಬಂಧನ

2007ರಲ್ಲಿ ನ್ಯಾಯಾಧೀಶರ ಬಂಧನಕ್ಕೆ ಪ್ರಕರಣಕ್ಕೆ ಸಂಬಂಧಿಸಿದಂತೆ 2013ರಲ್ಲಿ ಇಸ್ಲಾಮಾಬಾದ್ ಹೈಕೋರ್ಟ್ ಮುಷರಫ್ ಅವರ ಬಂಧನಕ್ಕೆ ಆದೇಶ ಹೊರಡಿಸಿತ್ತು. ಸ್ವ ಗಡೀಪಾರಿನಿಂದ ವಾಪಸ್ ಪಾಕಿಸ್ತಾನಕ್ಕೆ ಬಂದಿದ್ದ ಮುಷರಫ್ ತಾಂತ್ರಿಕವಾಗಿ ಬೇಲ್ ಮೇಲೆ ಹೊರಗಿದ್ದರು. ಬಳಿಕ ನ್ಯಾಯಾಲಯ ಬೇಲ್ ತೆಗೆದು ಹಾಕಿತ್ತು. ಹಾಗಾಗಿ, ಮುಷರಫ್ ಅವರನ್ನು ಗೃಹ ಬಂಧನದಲ್ಲಿಡಲಾಯಿತು. ಬಳಿಕ ಅವರನ್ನು ಇಸ್ಲಾಮಾಬಾದ್ ಪೊಲೀಸ ಮುಖ್ಯ ಕಚೇರಿಗೆ ಸ್ಥಳಾಂತರಿಸಲಾಯಿಗಿತ್ತು.

ಇದನ್ನೂ ಓದಿ: Pervez Musharraf Death: ಪರ್ವೇಜ್ ಮುಷರಫ್ ಹುಟ್ಟೂರು ದಿಲ್ಲಿ; ವಿಸ್ಕಿ, ಸಿಗಾರ್ ಪ್ರಿಯ

ಬೆನಜೀರ್ ಭುಟ್ಟೋ ಹತ್ಯೆ ಕೇಸ್

ಬೆನಜೀರ್ ಭುಟ್ಟೋ ಹತ್ಯೆಯ ಆರೋಪವು ಮುಷರಫ್ ವಿರುದ್ಧ ಇದೆ. 2013ರಲ್ಲಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಷರಫ್ ಅವರಿಗೆ ಜಾಮೀನು ನೀಡಿತ್ತು. 2014 ಜೂನ್ 12ರಂದು, ಸಿಂಧ್ ಹೈಕೋರ್ಟ್ ವೈದ್ಯಕೀಯ ಚಿಕಿತ್ಸೆಗಾಗಿ ವಿದೇಶಕ್ಕೆ ತೆರಳಲು ಅವಕಾಶ ನೀಡಿತು.

Exit mobile version