Site icon Vistara News

Poison Gas Attack: ಇರಾನ್‌ನಲ್ಲಿ ನಿಗೂಢ ವಿಷಾನಿಲ ದಾಳಿ: 300ಕ್ಕೂ ಅಧಿಕ ವಿದ್ಯಾರ್ಥಿನಿಯರು ಅಸ್ವಸ್ಥ

iran

ಟೆಹರಾನ್:‌ ಇರಾನ್‌ನ ವಿವಿಧ ನಗರಗಳಲ್ಲಿ ನಡೆದ ಸಂಭಾವ್ಯ ವಿಷಾನಿಲ ದಾಳಿಯಿಂದ ಸುಮಾರು 300ಕ್ಕೂ ಅಧಿಕ ವಿದ್ಯಾರ್ಥಿನಿಯರು ಅಸ್ವಸ್ಥಗೊಂಡಿದ್ದಾರೆ.

ವಿಚಿತ್ರ ಹಾಗೂ ನಿಗೂಢ ಸಂಗತಿಯೆಂದರೆ ಈ ದಾಳಿಗಳು ವಿದ್ಯಾರ್ಥಿನಿಯರ ಶಾಲೆ ಹಾಗೂ ಹಾಸ್ಟೆಲ್‌ಗಳಲ್ಲಿ ನಡೆಯುತ್ತಿವೆ. ಟೆಹರಾನ್‌, ಎಸ್ಲಾಮ್‌ಶಹರ್‌, ಶಹ್ರಿಯಾರ್‌, ರೋಬತ್‌ ಕರೀಮ್‌ ನಗರಗಳಲ್ಲಿ ಈ ದಾಳಿಗಳು ನಡೆದಿವೆ. ಇವುಗಳ ಮೂಲ ಪತ್ತೆಯಾಗಿಲ್ಲ.

ಇದರಿಂದ ಅಸ್ವಸ್ಥಗೊಂಡಿರುವ ನೂರಾರು ವಿದ್ಯಾರ್ಥಿನಿಯರನ್ನು ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಇದು ವಿಷಾನಿಲ ದಾಳಿಯ ಪರಿಣಾಮ ಎಂದು ಶಂಕಿಸಲಾಗಿದೆ. ಈ ದಾಳಿಗಳು ಕಳೆದ ನವೆಂಬರ್‌ನಿಂದ ನಡೆಯುತ್ತಿವೆ. ಇದುವರೆಗೂ 300ಕ್ಕೂ ಅಧಿಕ ಮಕ್ಕಳು ಅಸ್ವಸ್ಥಗೊಂಡಿದ್ದಾರೆ. ಆದರೆ ಇದುವರೆಗೂ ಜೀವಹಾನಿಯಾಗಿಲ್ಲ. ‌ ಅಸ್ವಸ್ಥಗೊಂಡವರಲ್ಲಿ ವಾಕರಿಕೆ, ಸುಸ್ತು, ಮಂಪರು ಇತ್ಯಾದಿ ಲಕ್ಷಣಗಳಿವೆ.

ಸಂಭಾವ್ಯ ವಿಷಾನಿಲ ದಾಳಿಯ ಬಗ್ಗೆ ಇರಾನ್‌ ಸರ್ಕಾರ ಹೇಳಿದ್ದು, ಯಾರನ್ನೂ ಬಂಧಿಸಿಲ್ಲ. ಹಲವು ನಗರಗಳಲ್ಲಿ ಈ ಬಗ್ಗೆ ಆತಂಕ ಮೂಡಿದ್ದು, ಪ್ರತಿಭಟನೆಗಳು ನಡೆಯುತ್ತಿವೆ.

ಇದನ್ನೂ ಓದಿ: Iran Missile: ಟ್ರಂಪ್‌ರನ್ನು ಕೊಲ್ಲುವುದೇ ಗುರಿ: 1650 ಕಿ.ಮೀ ವ್ಯಾಪ್ತಿಯ ಕ್ಷಿಪಣಿ ಪರೀಕ್ಷಿಸಿದ ಇರಾನ್

Exit mobile version