ನವದೆಹಲಿ: ಕೆನಡಾದ ಮಿಸ್ಸಿಸೌಗಾದಲ್ಲಿರುವ ರಾಮಮಂದಿರವನ್ನು (Canada Ram Mandir) ಭಾರತ ವಿರೋಧಿ ಗೀಚುಬರಹದಿಂದ ವಿರೂಪಗೊಳಿಸಲಾಗಿದೆ. ಭಾರತ ವಿರೋಧಿ ಈ ಕೃತ್ಯವನ್ನು ಟೊರೊಂಟೊದಲ್ಲಿರುವ ಭಾರತದ ಕಾನ್ಸುಲೇಟ್ ಜನರಲ್ ಅವರು ತೀವ್ರವಾಗಿ ಖಂಡಿಸಿದ್ದು, ಕೂಡಲೇ ಕ್ರಮಕ್ಕೆ ಆಗ್ರಹಿಸಿದ್ದಾರೆ.
ಭಾರತ ವಿರೋಧಿ ಬರಹಗಳಿಂದ ರಾಮ ಮಂದಿರವನ್ನು ವಿರೂಪಗೊಳಿಸಿದ ಕೃತ್ಯವನ್ನು ಖಂಡಿಸುತ್ತೇವೆ. ಈ ಘಟನೆಯ ಕುರಿತು ತನಿಖೆ ನಡೆಸುವಂತೆ ನಾವು ಕೆನಡಾದ ಅಧಿಕಾರಿಗಳಿಗೆ ವಿನಂತಿಸಿಕೊಳ್ಳುತ್ತೇವೆ ಮತ್ತು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಭಾರತದ ಕಾನ್ಸುಲೇಟ್ ಟ್ವೀಟ್ ಮಾಡಿದೆ.
ಭಿಂದ್ರನ್‌ವಾಲಾನನ್ನು ಹೊಗಳಿಗ, ಭಾರತ ಹಾಗೂ ಪ್ರಧಾನಿ ಮೋದಿ ಅವರ ವಿರುದ್ಧ ಬರಹವನ್ನು ದೇವಸ್ಥಾನದ ಗೋಡೆಗಳ ಮೇಲೆ ಗೀಚಲಾಗಿದೆ. ಬ್ರಾಂಪ್ಟನ್ ಮೇಯರ್ ಪ್ಯಾಟ್ರಿಕ್ ಬ್ರೌನ್ ಅವರು, ಇದೊಂದು ದ್ವೇಷದ ಅಪರಾಧವಾಗಿರಬಹುದು ಮತ್ತು ಈ ಕೃತ್ಯವನ್ನು ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿದ್ದಾರೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: Temple Defaced : ಕೆನಡಾದ ದೇಗುಲವನ್ನು ವಿರೂಪಗೊಳಿಸಿದ ಖಲಿಸ್ತಾನಿ ಉಗ್ರರು
ಕೆನಡಾದಲ್ಲಿ ಹಿಂದೂ ದೇವಾಲಯಗಳನ್ನು ಗುರಿಯಾಗಿಸಿಕೊಳ್ಳುತ್ತಿರುವುದು ಇದೇ ಮೊದಲ್ಲ. ಈ ಹಿಂದೆಯೂ ಅನೇಕ ಈ ರೀತಿಯ ಘಟನೆಗಳು ನಡೆದಿವೆ. ಭಾರತ ವಿರೋಧಿ ಹೇಳಿಕೆಗಳೊಂದಿಗೆ ದೇವಾಲಯಗಳನ್ನು ವಿರೂಪಗೊಳಿಸುವ ಕೃತ್ಯಗಳು ನಡೆದಿವೆ. ಬಹುಶಃ ಖಲಿಸ್ತಾನಿ ಬಂಡುಕೋರರು ಈ ಘಟನೆಗಳ ಹಿಂದೆ ಇದ್ದಾರೆ ಎಂದು ಹೇಳಲಾಗುತ್ತಿದೆ.