ಲಂಡನ್: ಬ್ರಿಟನ್ ಪ್ರಧಾನಿ ರಿಷಿ ಸುನಕ್ (Rishi Sunak) ಅವರು ಒಂದು ರೀತಿಯಲ್ಲಿ ಭಾರತಕ್ಕೂ ಹೆಮ್ಮೆ ತಂದುಕೊಟ್ಟವರು. ಅವರು ಭಾರತ ಮೂಲದವರು ಎನ್ನುವುದು ಒಂದು ಸಂತಸವಾದರೆ, ಅವರ ಪತ್ನಿ ನಮ್ಮ ಕರ್ನಾಟಕದ ಹೆಮ್ಮೆಯ ಇನ್ಫೋಸಿಸ್‌ನ ಸಂಸ್ಥಾಪಕರಾದ ಸುಧಾ ಮೂರ್ತಿ ಮತ್ತು ನಾರಾಯಣ ಮೂರ್ತಿ ಅವರ ಪುತ್ರಿ ಎನ್ನುವುದು ಮತ್ತೊಂದು ಸಂಭ್ರಮ. ಇದೀಗ ಇದೇ ರಿಷಿ ಅವರು ತಮ್ಮ ಬಾಲ್ಯವನ್ನು ನೆನಪಿಸುವ ಫೋಟೋವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
ರಿಷಿ ಸುನಾಕ್ ಅವರು ಸೌತ್‌ಆಪ್ಟನ್‌ನಲ್ಲಿರುವ ತಮ್ಮ ಸುನಕ್ ಫಾರ್ಮಸಿಯ ಫೋಟೋವನ್ನು ಬುಧವಾರ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅದರೊಂದಿಗೆ ದೊಡ್ಡ ಕ್ಯಾಪ್ಶನ್ ಬರೆದಿರುವ ಅವರು, “ನಾನು ರಾಷ್ಟ್ರೀಯ ಆರೋಗ್ಯ ವ್ಯವಸ್ಥೆಯ ಬಗ್ಗೆ ಮಾತನಾಡಿದಾಗ ಅದು ನನ್ನ ಕುಟುಂಬದ ನಿಲುವೂ ಆಗಿರುತ್ತದೆ. ಏಕೆಂದರೆ ನನ್ನ ತಂದೆ ವೈದ್ಯರಾಗಿ ಕೆಲಸ ಮಾಡಿದವರು. ನನ್ನ ತಾಯಿ ಇದೇ ಫಾರ್ಮಸಿಯಲ್ಲಿ ಕೆಲಸ ಮಾಡಿದವರು” ಎಂದು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: Rishi Sunak : ಬ್ರಿಟನ್ ಪ್ರಧಾನಿ ರಿಷಿ ಸುನಕ್ ರಾಯರ ಭಕ್ತ, ಪ್ರತಿ ಗುರುವಾರ ಉಪವಾಸ ಮಾಡ್ತಾರೆ
ಹಾಗೆಯೇ ರಿಷಿ ಅವರು ಬಾಲ್ಯದಲ್ಲಿ ತಾವು ತಮ್ಮ ತಾಯಿ ಅವರೊಂದಿಗೆ ಅದೇ ಫಾರ್ಮಸಿಯಲ್ಲಿ ಕೆಲಸ ಮಾಡಿಕೊಂಡಿದ್ದಾಗಿಯೂ ಕ್ಯಾಪ್ಶನ್ ಮೂಲಕ ತಿಳಿಸಿದ್ದಾರೆ.
ರಿಷಿ ಅವರ ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡಿದೆ. ಅನೇಕರು ರಿಷಿ ಅವರ ರೀತಿಯಲ್ಲೇ ತಮ್ಮ ಬಾಲ್ಯದ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ 32 ಸಾವಿರಕ್ಕೂ ಅಧಿಕ ಮಂದಿ ಈ ಪೋಸ್ಟ್‌ಗೆ ಲೈಕ್ ಮಾಡಿದ್ದಾರೆ. ಅನೇಕ ಭಾರತೀಯರು ಕೂಡ ಪೋಸ್ಟ್‌ಗೆ ಕಾಮೆಂಟ್‌ಗಳನ್ನು ಮಾಡಿದ್ದಾರೆ.