ಕಿಯೇವ್: ರಷ್ಯಾದ ಇಬ್ಬರು ಸೈನಿಕರು ನಾಲ್ಕು ವರ್ಷದ ಬಾಲಕಿಯೊಬ್ಬಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸುವ ಜತೆಗೆ ಆಕೆಯ ಕಣ್ಣ ಮುಂದೆಯೇ ತಾಯಿಯನ್ನು ಅತ್ಯಾಚಾರ ಮಾಡಿದ್ದಾರೆ. ತಂದೆಯ ಹಣೆಮೇಲೆ ಗನ್ ಇಟ್ಟು ಕೃತ್ಯ ಎಸೆಗಿದ್ದಾರೆ ಎಂಬುದಾಗಿ ಉಕ್ರೇನ್ನ ಆರೋಪಿಸಿದೆ. ಕಿಯೇವ್ ನಗರಕ್ಕೆ ಸಮೀಪದ ಬ್ರೊವರಿ ಜಿಲ್ಲೆಯಲ್ಲಿ 2022ರ ಮಾರ್ಚ್ನಲ್ಲಿ ಘಟನೆ ನಡೆದಿದೆ ಎಂದು ಹೇಳಿದೆ.
ಕಿಯೇವ್ ನಗರಕ್ಕೆ ದಾಳಿ ಮಾಡಿದ ರಷ್ಯಾದ 15 ಸೆಪರೇಟ್ ಮೋಟರೈಸ್ಡ್ ರೈಫೆಲ್ ಬ್ರಿಗೇಡ್ನ ಸೈನಿಕರು ಬ್ರೊವರಿಯಲ್ಲಿ ಮನೆಗಳಿಗೆ ನುಗ್ಗಿ ಅಲ್ಲಿನ ಮಹಿಳೆಯರ ಮೇಲೆ ಅತ್ಯಾಚಾರ ಮಾಡಿದ್ದಾರೆ. ಅಂತೆಯೇ ಕುಟುಂಬದ ಮುಖ್ಯಸ್ಥರೊಬ್ಬರ ಹಣೆಗೆ ಗನ್ ಇಟ್ಟು ಆತನ ಪತ್ನಿಯ ಮೇಲೆ ಅತ್ಯಾಚಾರ ಮಾಡಿದ್ದಾರೆ. ಅವರ ನಾಲ್ಕು ವರ್ಷದ ಮಗಳ ಮೇಲೆಯೂ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಬಾಲಕಿಯ ಬಳಿ ನಿನ್ನನ್ನು ಕೂಡ ಮಹಿಳೆಯನ್ನಾಗಿ ಮಾಡುತ್ತೇನೆ ಎಂದು ಹೇಳಿ ಕಿರುಕುಳ ಕೊಟ್ಟಿದ್ದಾರೆ ಎಂದು ಆರೋಪಿಸಲಾಗಿದೆ. ಉಕ್ರೇನ್ನ ನ್ಯಾಯಾಂಗ ವಿಭಾಗವು ರಾಯಿಟರ್ಸ್ಗೆ ಈ ಮಾಹಿತಿಯನ್ನು ಹೇಳಿದೆ.
ಇದನ್ನೂ ಓದಿ : ಕುಡುಕರಿಂದ ಜಪ್ತಿ ಮಾಡಿದ ಕಾರುಗಳನ್ನು ಉಕ್ರೇನ್‌ಗೆ ಕೊಟ್ಟ ಲ್ಯಾಟ್ವಿಯಾ, ಮಾನವೀಯತೆಗೆ ಮೆಚ್ಚುಗೆ
ರಷ್ಯಾದ ಸೇನಾ ಮುಖ್ಯಸ್ಥರು ಈ ಕುರಿತು ಯಾವುದೇ ಪ್ರತಿಕ್ರಿಯೆ ಕೊಟ್ಟಿಲ್ಲ. ಇಂಥದ್ದೊಂದು ಪ್ರಕರಣ ನಡೆದಿರುವ ಯಾವುದೇ ಸುಳಿವು ಇಲ್ಲ ಎಂಬುದಾಗಿ ಪ್ರತಿಕ್ರಿಯೆ ಕೊಟ್ಟಿದೆ.