Site icon Vistara News

Vijay Mallya: ದಿವಾಳಿಯೆಂದು ಪರಾರಿಯಾಗಿದ್ದ ವಿಜಯ್ ಮಲ್ಯಗೆ ಲಂಡನ್‌ನಲ್ಲಿದೆ 117 ಕೋಟಿಯ ಬಂಗಲೆ!

Vijay Mallya

ಸಾಲ ಮಾಡಿ ಭಾರತದಿಂದ (india) ಓಡಿ ಹೋಗಿರುವ ಉದ್ಯಮಿ (businessman) ವಿಜಯ ಮಲ್ಯ (Vijay Mallya) ಅವರ ಪುತ್ರ ಸಿದ್ದಾರ್ಥ್ ಮಲ್ಯ (Siddharth Mallya ) ಮತ್ತು ಜಾಸ್ಮಿನ್ (Jasmine) ವಿವಾಹ ಕ್ರಿಶ್ಚಿಯನ್ ಸಂಪ್ರದಾಯದಂತೆ ಇತ್ತೀಚೆಗೆ ಲಂಡನ್ ನಲ್ಲಿರುವ (london) ವಿಜಯ ಮಲ್ಯ ಅವರ 14 ಮಿಲಿಯನ್ ಡಾಲರ್ ಅಂದರೆ ಸರಿಸುಮಾರು 117 ಕೋಟಿ ಬೆಲೆ ಬಾಳುವ ಭವನದಲ್ಲಿ ಅದ್ಧೂರಿಯಾಗಿ ನೆರವೇರಿದೆ. ವಿವಾಹಕ್ಕಿಂತ ಹೆಚ್ಚಾಗಿ ಮಲ್ಯ ಅವರ ಎಸ್ಟೇಟ್ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆ ಪ್ರಾರಂಭವಾಗಿದೆ.

ಹರ್ಟ್‌ಫೋರ್ಡ್‌ಶೈರ್‌ನ (Hertfordshire) ಟೆವಿನ್‌ನ ಸ್ಲೀಪಿ ಹಳ್ಳಿಯ ಲೇಡಿವಾಕ್ ಸಿದ್ಧಾರ್ಥ ಮಲ್ಯ ಮತ್ತು ಜಾಸ್ಮಿನ್‌ ಅವರ ವಿವಾಹಕ್ಕೆ ಸಾಕ್ಷಿಯಾಯಿತು. ವಿಸ್ತಾರವಾದ ಲೇಡಿವಾಕ್ ಎಸ್ಟೇಟ್ ಅನ್ನು ವಿಜಯ್ ಮಲ್ಯ ಅವರು ಭಾರತದಿಂದ ಯುಕೆಗೆ ಪಲಾಯನ ಮಾಡುವ ಕೆಲವೇ ತಿಂಗಳುಗಳ ಮೊದಲು 2015ರಲ್ಲಿ ಖರೀದಿಸಿದ್ದರು.

68 ವರ್ಷದ ಮಲ್ಟಿ ಮಿಲಿಯನೇರ್ ವಿಜಯ್‌ ಮಲ್ಯ ಪ್ರಸ್ತುತ ಯುಕೆಯಲ್ಲಿದ್ದಾರೆ. 900 ಕೋಟಿಗೂ ಹೆಚ್ಚು ಸಾಲ ವಂಚನೆ ಪ್ರಕರಣದಲ್ಲಿ ಅವರು ಆರೋಪಿಯಾಗಿದ್ದಾರೆ. ಇಡಿ ಮತ್ತು ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ ಈ ಬಗ್ಗೆ ತನಿಖೆ ನಡೆಸುತ್ತಿದೆ.


ವಿಜಯ್ ಮಲ್ಯ ಅವರು ಎಫ್1 ಚಾಂಪಿಯನ್ ಲೂಯಿಸ್ ಹ್ಯಾಮಿಲ್ಟನ್ ಅವರ ತಂದೆ ಆಂಥೋನಿ ಹ್ಯಾಮಿಲ್ಟನ್ ಅವರಿಂದ ಹರ್ಟ್‌ಫೋರ್ಡ್‌ಶೈರ್‌ನಲ್ಲಿರುವ ಲೇಡಿವಾಕ್ ಎಸ್ಟೇಟ್ ಅನ್ನು ಖರೀದಿಸಿದ್ದರು. 2021ರ ರೆಡಿಫ್ ವರದಿಯ ಪ್ರಕಾರ ಸ್ವ-ಘೋಷಿತ ‘ಕಿಂಗ್ ಆಫ್ ಗುಡ್ ಟೈಮ್ಸ್’ ಒಡೆತನದ ಎಲ್ಲಾ ಲಕ್ಷಣಗಳನ್ನು ಈ ಆಸ್ತಿ ಹೊಂದಿದೆ.

ಇಲ್ಲಿರುವ ದೊಡ್ಡ ನಿವಾಸವು 30 ಎಕರೆ ಭೂಮಿಯಲ್ಲಿದೆ. ಮೂರು-ಮನೆಗಳ ಎಸ್ಟೇಟ್ ಅನೇಕ ಔಟ್‌ಹೌಸ್‌ಗಳು, ಈಜುಕೊಳಗಳು, ಕಾರಂಜಿಗಳು ಮತ್ತು ಟೆನ್ನಿಸ್ ಕೋರ್ಟ್‌ಗಳನ್ನು ಹೊಂದಿದೆ. ಜೊತೆಗೆ ಮಲ್ಯ ಅವರ ದುಬಾರಿ ಕಾರುಗಳ ದೊಡ್ಡ ಫ್ಲೀಟ್ ಅನ್ನು ನಿರ್ವಹಿಸಲು ಸಮರ್ಥವಾಗಿರುವ ಗ್ಯಾರೇಜ್ ಅನ್ನು ಒಳಗೊಂಡಿದೆ.


ಸಿದ್ಧಾರ್ಥ ಮಲ್ಯ ಮತ್ತು ಜಾಸ್ಮಿನ್ ಅವರ ವಿವಾಹದಲ್ಲಿ ಅತಿಥಿಯೊಬ್ಬರು ಪೋಸ್ಟ್ ಮಾಡಿದ ದೃಶ್ಯಗಳು ಮದುವೆಗೆ ಅತಿಥಿಗಳಿಂದ ತುಂಬಿರುವ ಹರ್ಟ್‌ಫೋರ್ಡ್‌ಶೈರ್ ಭವನವನ್ನು ತೋರಿಸುತ್ತವೆ. ಇದರಲ್ಲಿ ಅಂದಗೊಳಿಸಲಾದ ಹುಲ್ಲುಹಾಸು ಮತ್ತು ಸಸ್ಯಾಲಂಕಾರವನ್ನು ಈ ಬೃಹತ್ ನಿವಾಸವು ಒಳಗೊಂಡಿದೆ.


ಹರ್ಟ್‌ಫೋರ್ಡ್‌ಶೈರ್‌ನಲ್ಲಿ ಲೇಡಿವಾಕ್

ವಿಜಯ್ ಮಲ್ಯ ಲೇಡಿವಾಕ್ ಎಸ್ಟೇಟ್ ಅನ್ನು 11.5 ಮಿಲಿಯನ್ ಪೌಂಡ್ ಗೆ ಖರೀದಿಸಿದ್ದಾರೆ. ಎರಡು ವರ್ಷಗಳಲ್ಲಿ ಭಾರೀ ಭದ್ರತೆಯ ಲೇಡಿವಾಕ್ ಎಸ್ಟೇಟ್‌ನಲ್ಲಿ ವ್ಯಾಪಕವಾದ ನವೀಕರಣಗಳನ್ನು ಕೈಗೊಳ್ಳಲಾಯಿತು.

ಇದನ್ನೂ ಓದಿ: T20 world Cup 2024 : ವೆಸ್ಟ್​ ಇಂಡೀಸ್​​ನಲ್ಲೂ ಮನೆಯೂಟ ಮಾಡುತ್ತಿರುವ ಸೂರ್ಯಕುಮಾರ್​, ಹಾರ್ದಿಕ್ ಪಾಂಡ್ಯ!

ಮಲ್ಯ ಆಸ್ತಿಯನ್ನು ಸ್ವಾಧೀನಪಡಿಸಿಕೊಂಡ ಅನಂತರ ಬಿಲ್ಡರ್‌ಗಳು, ವಾಸ್ತುಶಿಲ್ಪಿಗಳು, ಡೆಕೋರೇಟರ್‌ಗಳು ಮತ್ತು ಲ್ಯಾಂಡ್‌ಸ್ಕೇಪ್ ಕಲಾವಿದರ ನಿರಂತರ ಇಲ್ಲಿಗೆ ಭೇಟಿ ನೀಡುತ್ತಿದ್ದಾರೆ. ಇವರ ಈ ಎಸ್ಟೇಟ್ ಹಲವು ಸಿಸಿಟಿವಿ ಕೆಮರಾಗಳು, ಕಬ್ಬಿಣದ ಗೇಟ್‌ ಮತ್ತು ಬಹು ಭದ್ರತಾ ಸಿಬ್ಬಂದಿಗಳೊಂದಿಗೆ ಹೆಚ್ಚು ಕಾವಲುಗಾರರನ್ನು ನೇಮಿಸಲಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ಹೇಳಿವೆ. ಮಲ್ಯ ಕುಟುಂಬ ಇಲ್ಲಿಗೆ ಬರುವಾಗ ತಮ್ಮೊಂದಿಗೆ ಹೆಚ್ಚಿನ ಸಂಖ್ಯೆಯ ಕಾರುಗಳು ಮತ್ತು ಸಿಬ್ಬಂದಿಯನ್ನು ಕರೆತಂದಿದೆ ಎಂದು ಗ್ರಾಮಸ್ಥರು ಹೇಳಿದ್ದಾರೆ.

Exit mobile version