Site icon Vistara News

ಎಲಾನ್‌ ಮಸ್ಕ್‌ನ Starlink ಉಪಗ್ರಹಗಳ ಮೇಲೆ ಚೀನಾ ಮಿಲಿಟರಿ ಕಣ್ಣು

ಬೀಜಿಂಗ್: ಚೀನಾದ ಮಿಲಿಟರಿ ಸಂಶೋಧಕರು ಎಲಾನ್ ಮಸ್ಕ್‌ನ ಸ್ಟಾರ್‌ಲಿಂಕ್ ಉಪಗ್ರಹಗಳು ರಾಷ್ಟ್ರೀಯ ಭದ್ರತೆಗೆ ಬೆದರಿಕೆಯೊಡ್ಡಿದರೆ ಅದನ್ನು ನಿಷ್ಕ್ರಿಯಗೊಳಿಸಬಹುದಾದ ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸಲು ಅಧ್ಯಯನ ನಡೆಸಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ಪ್ರಕಾರ, ಪ್ರತಿ ಸ್ಟಾರ್‌ಲಿಂಕ್ ಉಪಗ್ರಹವನ್ನು ಪತ್ತೆಹಚ್ಚಲು ಮತ್ತು ನಿಗಾ ಇಡಲು ಅಭೂತಪೂರ್ವ ಪ್ರಮಾಣದಲ್ಲಿ ಮತ್ತು ಅತಿ ಸೂಕ್ಷ್ಮ ಕಣ್ಗಾವಲು ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವ ಅಗತ್ಯವನ್ನು ವಿಜ್ಞಾನಿಗಳು ಒತ್ತಿಹೇಳಿದ್ದಾರೆ.

ಬೀಜಿಂಗ್ ಇನ್‌ಸ್ಟಿಟ್ಯೂಟ್ ಆಫ್ ಟ್ರ್ಯಾಕಿಂಗ್ ಮತ್ತು ಟೆಲಿಕಮ್ಯುನಿಕೇಶನ್‌ನ ಸಂಶೋಧಕ ರೆನ್ ಯುವಾನ್‌ಜೆನ್ ಅವರು ಈ ಅಧ್ಯಯನವನ್ನು ನಡೆಸಿದ್ದಾರೆ. ಇದು “ಮೃದು ಮತ್ತು ಕಠಿಣವಾದ ನಾಶಕ ವಿಧಾನಗಳ ಸಂಯೋಜನೆಯನ್ನು” ಅಳವಡಿಸಿಕೊಳ್ಳಲು ಕರೆ ನೀಡುತ್ತದೆ.

“ಕೆಲವು ಸ್ಟಾರ್‌ಲಿಂಕ್ ಉಪಗ್ರಹಗಳು ತಮ್ಮ ಕಾರ್ಯಗಳನ್ನು ಕಳೆದುಕೊಳ್ಳುವಂತೆ ಮಾಡಲು ಮತ್ತು ಅವುಗಳ ಆಪರೇಟಿಂಗ್ ಸಿಸ್ಟಮ್ ಅನ್ನು ನಾಶ ಮಾಡಲು ಸಾಫ್ಟ್‌ ಮತ್ತು ಹಾರ್ಡ್‌ ಕಿಲ್‌ ಮೆಥಡ್ಸ್‌’ ಗಳ ಸಂಯೋಜನೆಯನ್ನು ಅಳವಡಿಸಿಕೊಳ್ಳಬೇಕು” ಎಂದು ದೇಶೀಯ ಜರ್ನಲ್ ‘ಮಾಡರ್ನ್ ಡಿಫೆನ್ಸ್ ಟೆಕ್ನಾಲಜಿ’ಯಲ್ಲಿ ಪ್ರಕಟವಾದ ಲೇಖನ ತಿಳಿಸಿದೆ.

ಸ್ಟಾರ್‌ಲಿಂಕ್ ಸಂಪರ್ಕವು ಅಮೆರಿಕದ ಡ್ರೋನ್‌ಗಳು ಮತ್ತು ಸ್ಟೆಲ್ತ್ ಫೈಟರ್ ಜೆಟ್‌ಗಳ ಡೇಟಾ ಟ್ರಾನ್ಸ್‌ಮಿಷನ್ ವೇಗವನ್ನು 100 ಪಟ್ಟು ಹೆಚ್ಚಿಸುತ್ತದೆ ಎಂಬ ಅಂದಾಜಿನ ಮೇರೆಗೆ ಚೀನಾದ ಮಿಲಿಟರಿ ಸಂಶೋಧಕರು ಈ ಅಧ್ಯಯನವನ್ನು ಕೈಗೊಂಡಿದ್ದಾರೆ ಎಂದು ವರದಿ ತಿಳಿಸಿದೆ.

ಸ್ಟಾರ್‌ಲಿಂಕ್ ಎಂಬುದು ಮಸ್ಕ್ ಅವರ ಅತ್ಯಂತ ಮಹತ್ವಾಕಾಂಕ್ಷೆಯ ಯೋಜನೆಯಾಗಿದೆ. ಅದರ ಅಡಿಯಲ್ಲಿ, ಅವರ ಕಂಪನಿ ಸ್ಪೇಸ್‌ಎಕ್ಸ್‌ ಸಣ್ಣ ಉಪಗ್ರಹಗಳನ್ನು ಕೆಳ-ಭೂ ಕಕ್ಷೆಯಲ್ಲಿ ಉಡಾವಣೆ ಮಾಡುವ ಮೂಲಕ ಉಪಗ್ರಹ ಇಂಟರ್ನೆಟ್ ನೆಟ್ವರ್ಕ್ ಅನ್ನು ಅಭಿವೃದ್ಧಿಪಡಿಸಲು ಯೋಜಿಸಿದೆ. ಈ ಉಪಗ್ರಹಗಳು ಪ್ರಪಂಚದಾದ್ಯಂತ ಲೋ ಲ್ಯಾಟೆನ್ಸಿ ಬ್ರಾಡ್‌ಬ್ಯಾಂಡ್ ಇಂಟರ್ನೆಟ್ ಸೇವೆಗಳನ್ನು ಒದಗಿಸುತ್ತವೆ. ಪ್ರಾದೇಶಿಕ ಇಂಟರ್ನೆಟ್ ಮೂಲಸೌಕರ್ಯವು ತಲುಪದ ದುರ್ಗಮ ಪ್ರದೇಶಗಳ ಮೇಲೆ ನಿರ್ದಿಷ್ಟ ಗಮನವನ್ನು ಈ ಜಾಲವು ಹರಿಸುತ್ತದೆ.

ಸ್ಟಾರ್‌ಲಿಂಕ್ ಸಾವಿರಾರು ಸಣ್ಣ ಉಪಗ್ರಹಗಳಿಂದ ಕೂಡಿದೆ ಮತ್ತು ಅವೆಲ್ಲವನ್ನೂ ನಾಶಪಡಿಸುವುದು ಚೀನಾದ ಯೋಜನೆಯಾಗಿದೆ. ಕ್ಷಿಪಣಿಗಳನ್ನು ಬಳಸಿ ಈ ಉಪಗ್ರಹಗಳನ್ನು ನಾಶಪಡಿಸುವುದು ದುಬಾರಿ ಆಗುವುದರಿಂದ ಚೀನಾದ ಹಿತಾಸಕ್ತಿಗಳನ್ನು ರಕ್ಷಿಸಿಕೊಳ್ಳಲು ಲೇಸರ್‌ಗಳು, ಮೈಕ್ರೋವೇವ್ ತಂತ್ರಜ್ಞಾನ ಅಥವಾ ಸಣ್ಣ ಉಪಗ್ರಹಗಳನ್ನು ಬಳಸುವಂತೆ ಸಂಶೋಧಕರು ಸಲಹೆ ನೀಡಿದ್ದಾರೆ.

ಈ ತಿಂಗಳ ಆರಂಭದಲ್ಲಿ, ಮಿಲಿಟರಿ ಸಂವಹನಕ್ಕೆ ಸಹಾಯ ಮಾಡಲು ಉಕ್ರೇನ್‌ಗೆ ಸ್ಟಾರ್‌ಲಿಂಕ್ ತಂತ್ರಜ್ಞಾನವನ್ನು ಸರಬರಾಜು ಮಾಡಿದ ನಂತರ, ರಷ್ಯಾದ ರೋಸ್ಕೋಸ್ಮಾಸ್ ಬಾಹ್ಯಾಕಾಶ ಸಂಸ್ಥೆಯ ಮುಖ್ಯಸ್ಥ ಡಿಮಿಟ್ರಿ ರೊಗೊಜಿನ್ ಅವರು ಮಸ್ಕ್‌ಗೆ ಎಚ್ಚರಿಕೆ ನೀಡಿ, ಸಂಭವನೀಯ ಪರಿಣಾಮಗಳ ಬಗ್ಗೆ ಬೆದರಿಕೆ ಒಡ್ಡಿದರು.

ಸ್ಟಾರ್‌ಲಿಂಕ್ ಉಪಗ್ರಹವನ್ನು ಪೆಂಟಗನ್ ವಿತರಿಸಿದೆ; ಇದಕ್ಕಾಗಿ ಎಲಾನ್ ಮಸ್ಕ್‌ ಜವಾಬ್ದಾರನಾಗಬೇಕಾಗುತ್ತದೆ ಮತ್ತು ತಕ್ಕ ಬೆಲೆಯನ್ನು ತೆರಬೇಕಾಗುತ್ತದೆ ಎಂದು ರೊಗೊಜಿನ್ ತಮ್ಮ ಟೆಲಿಗ್ರಾಮ್ ಚಾನೆಲ್‌ನಲ್ಲಿ ಹೇಳಿದ್ದರು.ಿ= ಇದನ್ನೂ ಓದಿ Explainer: ಎಲಾನ್‌ ಮಸ್ಕ್‌ ಟ್ವಿಟ್ಟರ್‌ ಕೊಳ್ಳೋದು ಅಂತಿಮ, ಮುಂದೇನಾಗುತ್ತೆ?

Exit mobile version