Site icon Vistara News

Pilot Threat | ಕದ್ದಿದ್ದ ವಿಮಾನ ಸುರಕ್ಷಿತವಾಗಿ ಲ್ಯಾಂಡ್‌, ಕ್ರ್ಯಾಶ್‌ ಮಾಡುತ್ತೇನೆ ಎಂದು ಹೆದರಿಸಿದ್ದ ಪೈಲಟ್‌ ಸೆರೆ!

Flight

ವಾಷಿಂಗ್ಟನ್‌: ಅಮೆರಿಕದಲ್ಲಿ ವಿಮಾನವನ್ನೇ ಕದ್ದ ವ್ಯಕ್ತಿಯೊಬ್ಬ ವಾಲ್‌ಮಾರ್ಟ್‌ ಮಳಿಗೆಗೆ ನುಗ್ಗಿಸುತ್ತೇನೆ ಎಂದು ಬೆದರಿಕೆ ಹಾಕಿದ್ದು (Pilot Threat) ತೀವ್ರ ಆತಂಕ ಮೂಡಿಸಿತ್ತು. ಆದರೆ, ವಿಮಾನವೀಗ ಸುರಕ್ಷಿತವಾಗಿ ಲ್ಯಾಂಡ್‌ ಆಗಿದ್ದು, ಉದ್ಧಟತನ ಮೆರೆದು, ಜನರಲ್ಲಿ ಆತಂಕ ಮೂಡಿಸಿದ್ದ ಪೈಲಟ್‌ನನ್ನು ಪೊಲೀಸರು ಬಂಧಿಸಿದ್ದಾರೆ.

ಟುಪೇಲೋದಲ್ಲಿರುವ ವಿಮಾನ ನಿಲ್ದಾಣದಿಂದ ಬೀಚ್‌ಕ್ರಾಫ್ಟ್‌ ಕಿಂಗ್‌ ಏರ್‌ 90 ಎಂಬ ಸಣ್ಣ ವಿಮಾನವನ್ನು ಕದ್ದಿದ್ದ ಪೈಲಟ್‌, ಟುಪೇಲೊದಲ್ಲಿರುವ ವಾಲ್‌ಮಾರ್ಟ್‌ ಸೂಪರ್‌ಮಾರ್ಕೆಟ್‌ಗೆ ನುಗ್ಗಿಸುತ್ತೇನೆ ಎಂದು ಬೆದರಿಕೆ ಹಾಕಿದ್ದ. ಇದರಿಂದ ಜನರಲ್ಲಿ ಆತಂಕ ಉಂಟಾಗಿದ್ದಲ್ಲದೆ, ಅಲ್ಲಿನ ನಾಗರಿಕರನ್ನು ಪೊಲೀಸರು ಸ್ಥಳಾಂತರ ಮಾಡಿದ್ದರು.

ಬೀಚ್‌ಕ್ರಾಫ್ಟ್‌, ಒಂಬತ್ತು ಆಸನ ಹೊಂದಿರುವ ಹಾಗೂ ಎರಡು ಎಂಜಿನ್‌ಗಳಿರುವ ವಿಮಾನವಾಗಿದೆ. ಇದು ಐದು ತಾಸು ಆಗಸದಲ್ಲಿಯೇ ಹಾರಾಡುವ ಸಾಮರ್ಥ್ಯ ಹೊಂದಿದೆ. ಇದನ್ನು ಉದ್ದೇಶಪೂರ್ವಕವಾಗಿಯೇ ಕ್ರ್ಯಾಶ್‌ ಮಾಡಿಸುತ್ತೇನೆ ಎಂದು ಹೇಳಿದ ಕಾರಣ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಅದೃಷ್ಟವಶಾತ್‌, ವಿಮಾನವು ಸುರಕ್ಷಿತವಾಗಿ ಲ್ಯಾಂಡ್‌ ಆದ ಕಾರಣ ಯಾರಿಗೂ ತೊಂದರೆಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಂಧಿತ ಪೈಲಟ್‌ ಕುರಿತು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ.

ಇದನ್ನೂ ಓದಿ | Kolkata Airport | 90 ನಿಮಿಷ, 11 ವಿಮಾನ ಲ್ಯಾಂಡ್‌ ಮಾಡಲು ಪೈಲಟ್‌ಗಳು ಯತ್ನಿಸಿದರೂ ಆಗಲಿಲ್ಲವೇಕೆ?

Exit mobile version