ಟರ್ಕಿ-ಸಿರಿಯಾದ ಭಯಂಕರ ಭೂಕಂಪನಕ್ಕೆ 4 ಸಾವಿರಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಕುಸಿದು ಬಿದ್ದ ಕಟ್ಟಡಗಳು/ ಮನೆಗಳಡಿ ಸಿಲುಕಿರುವವರನ್ನು ಹೊರ ತೆಗೆದು ರಕ್ಷಿಸುವುದೇ ಸವಾಲಾಗಿದೆ. ಅದೆಷ್ಟೋ ಜನರಂತೂ ಅವಶೇಷಗಳಡಿಯೇ ಹೆಣವಾಗಿ ಹೋಗಿದ್ದಾರೆ. ಇದೆಲ್ಲದರ ಮಧ್ಯೆ ಸಿರಿಯಾದಲ್ಲಿ (syria earthquake) ನವಜಾತ ಶಿಶುವೊಂದು ಪವಾಡ ಸದೃಶ್ಯವಾಗಿ ಬದುಕುಳಿದಿದೆ. ಆಗಷ್ಟೇ ಹುಟ್ಟಿದ ಶಿಶುವದು. ಭದ್ರತಾ ಸಿಬ್ಬಂದಿಯೊಬ್ಬರು ಅದನ್ನು ಎತ್ತಿಕೊಂಡು ಬಂದು ರಕ್ಷಣೆ ಮಾಡಿದ ವಿಡಿಯೊ ವೈರಲ್ ಆಗಿದೆ.
ಈ ವಿಡಿಯೊವನ್ನು ಪತ್ರಕರ್ತ ಹೋಶಂಗ್ ಹಸ್ಸನ್ ಅವರು ಶೇರ್ ಮಾಡಿಕೊಂಡಿದ್ದಾರೆ. ‘ಸಿರಿಯಾ ಭೂಕಂಪದಲ್ಲಿ ಸಂತ್ರಸ್ತೆಯಾಗಿದ್ದ ಗರ್ಭಿಣಿಯೊಬ್ಬರನ್ನು ರಕ್ಷಿಸುವ ಕಾರ್ಯಾಚರಣೆ ನಡೆಯುತ್ತಿದ್ದಾಗಲೇ ಮಗು ಜನನವಾಯಿತು. ಆ ನವಜಾತ ಶಿಶುವನ್ನು ರಕ್ಷಿಸಲಾಗಿದೆ’ ಎಂದು ಕ್ಯಾಪ್ಷನ್ ಬರೆದುಕೊಂಡಿದ್ದಾರೆ. ಸಿರಿಯಾದ ಆಫ್ರಿನ್ ಎಂಬಲ್ಲಿ ಈ ಘಟನೆ ನಡೆದಿದ್ದು, ಅವಳ ತಾಯಿ ಅಕ್ಷರಶಃ ಅವಶೇಷಗಳಡಿಯಲ್ಲೇ ಆಗಿ ಹೋಗಿದ್ದರು. ಮಗು ಬದುಕಿದ್ದೇ ಪವಾಡ ಎಂದು ಹೇಳಲಾಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೊ ನೋಡಿದ ನೆಟ್ಟಿಗರು ಭಾವನಾತ್ಮಕ ಕಮೆಂಟ್ಗಳನ್ನು ಮಾಡುತ್ತಿದ್ದಾರೆ.
ಇದನ್ನೂ ಓದಿ: Viral Video: ಟರ್ಕಿ ಭೂಕಂಪನದ ಭಯಾನಕ ದೃಶ್ಯಗಳು; ಕುಸಿದು ಬಿದ್ದ ಅಪಾರ್ಟ್ಮೆಂಟ್