ಅಫ್ಘಾನಿಸ್ತಾನದಲ್ಲಿ (Afghanistan) ತಾಲಿಬಾನ್ ಹೊಸ ಕಾನೂನುಗಳನ್ನು (Taliban New Law) ಪರಿಚಯಿಸಿದ್ದು, ಅದು ಮಹಿಳೆಯರು ತಮ್ಮ ಮುಖವನ್ನು ತೋರಿಸುವುದನ್ನು ಅಥವಾ ಸಾರ್ವಜನಿಕವಾಗಿ ಅವರ ಧ್ವನಿಯನ್ನು ಕೇಳುವುದನ್ನು ನಿಷೇಧಿಸಿದೆ. ತಾಲಿಬಾನ್ ನಾಯಕ (Taliban leader) ಹಿಬತುಲ್ಲಾ ಅಖುಂಡ್ಜಾದಾ (Hibatullah Akhundzada) ಅವರು ಈ ಕಾನೂನನ್ನು ಅನುಮೋದಿಸಿದ ಬಳಿಕ ಇದನ್ನು ಸಾರ್ವಜನಿಕವಾಗಿ ಪ್ರಕಟಿಸಲಾಗಿದೆ.
2021ರಲ್ಲಿ ತಾಲಿಬಾನ್ ಅಧಿಕಾರ ವಹಿಸಿಕೊಂಡ ಅನಂತರ ಮಹಿಳೆಯರ ಮೇಲೆ ಕೆಲವು ಕಠಿಣ ಕ್ರಮಗಳನ್ನು ಹೇರಲಾಗಿದೆ. ಹೊಸ ಕಾನೂನುಗಳು ಸದ್ಗುಣಗಳ ಪ್ರಚಾರ ಮತ್ತು ವೈಸ್ ತಡೆಗಟ್ಟುವಿಕೆಗಾಗಿ ತಾಲಿಬಾನ್ ಸಚಿವಾಲಯವು ಬಿಡುಗಡೆ ಮಾಡಿದ 114 ಪುಟಗಳ ದಾಖಲೆಯ ಭಾಗವಾಗಿದೆ. ಇಸ್ಲಾಮಿಕ್ ನಿಯಮಗಳ ಕಟ್ಟುನಿಟ್ಟಾದ ವ್ಯಾಖ್ಯಾನವನ್ನು ಜಾರಿಗೊಳಿಸಲು ತಾಲಿಬಾನ್‌ನಿಂದ ಈ ಸಚಿವಾಲಯವನ್ನು ಸ್ಥಾಪಿಸಲಾಯಿತು.
ಮುಖ್ಯ ನಿಯಮಗಳಲ್ಲಿ ಒಂದಾದ ಆರ್ಟಿಕಲ್ 13ರಲ್ಲಿ ಮಹಿಳೆಯರು ತಮ್ಮ ಮುಖಗಳನ್ನು ಒಳಗೊಂಡಂತೆ ತಮ್ಮ ಸಂಪೂರ್ಣ ದೇಹವನ್ನು ಸಾರ್ವಜನಿಕವಾಗಿ ಮುಚ್ಚಿಕೊಳ್ಳಬೇಕು. ಮಹಿಳೆಯರು ಸಾರ್ವಜನಿಕವಾಗಿ ಮಾತನಾಡುವುದು, ಹಾಡುವುದನ್ನು ಸಹ ನಿಷೇಧಿಸಲಾಗಿದೆ. ಮಹಿಳೆಯ ಧ್ವನಿಯನ್ನು ಖಾಸಗಿ ಎಂದು ಪರಿಗಣಿಸಲಾಗಿದ್ದು, ಇತರರಿಗೆ ಕೇಳಬಾರದು ಎಂದು ಕಾನೂನು ಹೇಳುತ್ತದೆ.
ಮಹಿಳೆಯರು ತಮ್ಮ ಸಂಬಂಧಿಕರಲ್ಲದ ಪುರುಷರನ್ನು ನೋಡುವುದನ್ನು ಸಹ ಕಾನೂನಿನಲ್ಲಿ ನಿಷೇಧಿಸಲಾಗಿದೆ. ಡಾಕ್ಯುಮೆಂಟ್‌ನಲ್ಲಿನ ಮಹಿಳೆಯರ ಚಿತ್ರಗಳ ಪ್ರಕಟಣೆಯನ್ನು ನಿಷೇಧಿಸಲಾಗಿದೆ.
ಇದನ್ನೂ ಓದಿ: Cheapest Currency: ವಿಶ್ವದಲ್ಲೇ ಅಗ್ಗದ ಕರೆನ್ಸಿ ಹೊಂದಿರುವ ದೇಶಗಳಲ್ಲಿ ಭಾರತದ 1 ರೂ.ನ ಮೌಲ್ಯ ಎಷ್ಟಾಗುತ್ತೆ ನೋಡಿ!
ಒಂಟಿಯಾಗಿ ಪ್ರಯಾಣಿಸುವ ಮಹಿಳೆಯರು ಅಥವಾ ಪುರುಷರು ಮತ್ತು ಮಹಿಳೆಯರು ಸಂಬಂಧವಿಲ್ಲದಿದ್ದರೆ ಸಾರ್ವಜನಿಕವಾಗಿ ಬೆರೆಯುವುದರ ಜೊತೆಗೆ ಸಂಗೀತವನ್ನು ಸಹ ನಿಷೇಧಿಸಲಾಗಿದೆ. ನಿಯಮಗಳ ಪ್ರಕಾರ ಪ್ರಯಾಣಿಕರು ಮತ್ತು ಚಾಲಕರು ನಿಗದಿತ ಸಮಯದಲ್ಲಿ ಪ್ರಾರ್ಥನೆಗಾಗಿ ನಿಲ್ಲಲೇಬೇಕು ಎಂಬುದಿದೆ.
ಈ ನಿಯಮಗಳ ಬಗ್ಗೆ ವಿಶ್ವಸಂಸ್ಥೆಯು ಕಳವಳ ವ್ಯಕ್ತಪಡಿಸಿದೆ. ಈ ನಿರ್ಬಂಧಗಳು ಅಫ್ಘಾನಿಸ್ತಾನದ ಜನರಿಗೆ ವಿಶೇಷವಾಗಿ ಮಹಿಳೆಯರು ಮತ್ತು ಹುಡುಗಿಯರ ಜೀವನವನ್ನು ಇನ್ನಷ್ಟು ಕಷ್ಟಕರವಾಗಿಸಬಹುದು ಎಂದು ಹೇಳಿದೆ.