Site icon Vistara News

Taliban | ಅಫಘಾನಿಸ್ತಾನದಲ್ಲಿ ಹೆಣ್ಣು ಮಕ್ಕಳಿಗೆ ಆಸ್ಪತ್ರೆಯ ಚಿಕಿತ್ಸೆಯೂ ದೂರ! ತಾಲಿಬಾನ್‌ ಹೊಸ ನಿಯಮಕ್ಕೆ ತತ್ತರಿಸಿದ ದೇಶ

ಕಾಬೂಲ್:‌ ಅಫಘಾನಿಸ್ತಾನವನ್ನು ತಾಲಿಬಾನಿಯರು (Taliban) ಆಕ್ರಮಿಸಿಕೊಂಡಾಗಿನಿಂದ ಅಲ್ಲಿನ ಜನರ ಜೀವನ ಸಂಪೂರ್ಣವಾಗಿ ಅಸ್ತವ್ಯಸ್ತವಾಗಿದೆ. ಮೊದಲಿಗೆ ಹೆಣ್ಣು ಮಕ್ಕಳಿಗೆ ಹಕ್ಕುಗಳನ್ನು ಕೊಡುವುದಾಗಿ ಹೇಳಿದ್ದ ತಾಲಿಬಾನ್‌ ಸರ್ಕಾರ ಇದೀಗ ಹೊಸ ನಿಯಮಗಳನ್ನು ಮಾಡಿದ್ದು, ಹೆಣ್ಣು ಮಕ್ಕಳಿಗಿದ್ದ ಎಲ್ಲ ಹಕ್ಕುಗಳನ್ನು ಕಿತ್ತುಕೊಂಡಿದೆ. ಶಿಕ್ಷಣದ ಹಕ್ಕಿನ ಜತೆಯಲ್ಲಿ ಚಿಕಿತ್ಸೆಯ ಹಕ್ಕನ್ನೂ ಕಿತ್ತುಕೊಂಡಿದ್ದು, ಅಲ್ಲಿನ ಹೆಣ್ಣು ಮಕ್ಕಳು ಕಣ್ಣೀರು ಸುರಿಸಲಾರಂಭಿಸಿದ್ದಾರೆ.

ಇದನ್ನೂ ಓದಿ: Taliban | ಅಫಘಾನಿಸ್ತಾನದಲ್ಲಿ 1ರಿಂದ 6ನೇ ತರಗತಿಯವರೆಗೆ ಮಾತ್ರವೇ ಹೆಣ್ಣುಮಕ್ಕಳಿಗೆ ಶಾಲೆ: ತಾಲಿಬಾನ್‌ ಕಟ್ಟಪ್ಪಣೆ

ತಾಲಿಬಾನ್‌ ಸರ್ಕಾರವು ಹೆಣ್ಣು ಮಕ್ಕಳಿಗೆ ಸ್ತ್ರೀ ವೈದ್ಯರ ಬಳಿ ಮಾತ್ರವೇ ತಪಾಸಣೆ ಮತ್ತು ಚಿಕಿತ್ಸೆ ಪಡೆಯುವುದಕ್ಕೆ ಅವಕಾಶ ಕೊಟ್ಟಿದೆ. ಪುರುಷ ವೈದ್ಯರ ಬಳಿ ಚಿಕಿತ್ಸೆ ಮಾಡದಂತೆ ಆದೇಶಿಸಿದೆ. ಆದರೆ ವಿಚಿತ್ರವೆಂದರೆ ಅಲ್ಲಿ ಹೆಣ್ಣು ಮಕ್ಕಳಿಗೆ ವೃತ್ತಿಯಲ್ಲಿ ಮುಂದುವರಿಯುವ ಅವಕಾಶವನ್ನು ಅದೇ ಸರ್ಕಾರ ಕಿತ್ತುಕೊಂಡಿದೆ. ಅದರಿಂದಾಗಿ ಯಾವುದೇ ಸ್ತ್ರೀ ವೈದ್ಯರು ಆಸ್ಪತ್ರೆಗೆ ಬಂದು ಕೆಲಸ ಮಾಡುವುದು ತಾಲಿಬಾನ್‌ ಸರ್ಕಾರದ ಪ್ರಕಾರ ನಿಷಿದ್ಧ. ಹೀಗಿರುವಾಗ ಅನಾರೋಗ್ಯದಿಂದ ಬಳಲುವ ಹೆಣ್ಣು ಮಕ್ಕಳಿಗೆ ಚಿಕಿತ್ಸೆ ದೂರದ ಮಾತಾಗಿದೆ.‌

ಇದನ್ನೂ ಓದಿ: Taliban shames Pakistan | 71ರ ಯುದ್ಧದಲ್ಲಿ ಭಾರತಕ್ಕೆ ಶರಣಾದ ಚಿತ್ರ ತೋರಿಸಿ ಪಾಕಿಸ್ತಾನವನ್ನು ಅಣಕಿಸಿದ ತಾಲಿಬಾನ್‌!

ವೈದ್ಯ ಪದವಿ ಪಡೆದಿರುವ ಡಾ.ಸೋನಾ ಅವರಿಗೆ ಕಳೆದ ಡಿಸೆಂಬರ್‌ನಲ್ಲಿ ಕಾಬೂಲ್‌ನ ಕ್ಲಿನಿಕ್‌ ಒಂದರಲ್ಲಿ ನೇಮಕಾತಿಯಾಗಿತ್ತು. ಆದರೆ ತಾಲಿಬಾನಿಯರ ಈ ಹೊಸ ನಿಯಮದಿಂದಾಗಿ ಅವರು ಆಸ್ಪತ್ರೆಗೆ ತೆರಳಲು ಸಾಧ್ಯವಿಲ್ಲ. ಇದರಿಂದಾಗಿ ಮಾನಸಿಕ ಖಿನ್ನತೆಗೆ ಒಳಗಾಗಿರುವುದಾಗಿ ಅವರು ಹೇಳಿಕೊಂಡಿದ್ದಾರೆ. ಹಾಗೆಯೇ ಕಾಬೂಲ್‌ನ ಬಹಿಶ್ತ್‌(21) ಬಾಲ್ಯದಿಂದಲೂ ವೈದ್ಯೆಯಾಗುವ ಕನಸು ಕಂಡಿದ್ದರು. ಅದರಂತೆ ಕಾಬೂಲ್‌ ವೈದ್ಯಕೀಯ ವಿಶ್ವವಿದ್ಯಾಲಯದಲ್ಲಿ ಪದವಿ ಆರಂಭಿಸಿದ್ದರು. ಆದರೆ ತಾಲಿಬಾನ್‌ ಸರ್ಕಾರ ಹೆಣ್ಣು ಮಕ್ಕಳಿಗೆ ಕಾಲೇಜುಗಳ ಬಾಗಿಲನ್ನೂ ಮುಚ್ಚಿದ್ದು, ಸಾವಿರಾರು ಹೆಣ್ಣು ಮಕ್ಕಳ ಕನಸು ನುಚ್ಚು ನೂರಾಗಿದೆ. ತಾಲಿಬಾನಿಯರ ಈ ನಿಯಮಗಳನ್ನು ವಿಶ್ವದ ಹಲವು ರಾಷ್ಟ್ರಗಳು ಖಂಡಿಸಿವೆ. ವಿಶ್ವಸಂಸ್ಥೆ ಹಾಗೂ ಜಿ7 ಶೃಂಗ ಕೂಡ ಇದರ ಬಗ್ಗೆ ವಿರೋಧ ಹೊರಹಾಕಿದೆ.

Exit mobile version