Site icon Vistara News

Khalistan Terror: ಖಲಿಸ್ತಾನಿ ಪರ ಘೋಷಣೆ ಕೂಗದಿದ್ದರೆ ಶಿವರಾತ್ರಿ ಆಚರಣೆ ಧ್ವಂಸ; ಆಸ್ಟ್ರೇಲಿಯಾದ ದೇಗುಲಕ್ಕೆ ಬೆದರಿಕೆ

#image_title

ಮೆಲ್ಬೋರ್ನ್‌: “ಫೆಬ್ರವರಿ 18ರಂದು ಮಹಾ ಶಿವರಾತ್ರಿಯನ್ನು ಶಾಂತಿಯುತವಾಗಿ ಆಚರಿಸಲು ಬಯಸುವುದಾದರೆ ದೇಗುಲದಲ್ಲಿ ಖಲಿಸ್ತಾನಿ ಪರ ಘೋಷಣೆಗಳನ್ನು ಕೂಗಬೇಕು” ಹೀಗೆಂದು ಆಸ್ಟ್ರೇಲಿಯಾದ ದೇವಸ್ಥಾನಕ್ಕೆ ಖಲಿಸ್ತಾನ್‌ ದಾಳಿಕೋರರಿಂದ (Khalistan Terror) ಬೆದರಿಕೆ ಕರೆಗಳು ಬಂದಿರುವುದಾಗಿ ವರದಿಯಾಗಿದೆ.

ಇದನ್ನೂ ಓದಿ: Khalistani Sleeper Cells: ದೆಹಲಿಯಲ್ಲಿ ಖಲಿಸ್ತಾನಿ ಉಗ್ರರ ಸ್ಲೀಪರ್​ ಸೆಲ್​; ದೊಡ್ಡ ದಾಳಿಗೆ ಸಂಚು ನಡೆಯುತ್ತಿರುವ ಶಂಕೆ!
ಬ್ರಿಸ್ಬೇನ್‌ನಲ್ಲಿರುವ ಗಾಯತ್ರಿ ಮಂದಿರದ ಆಡಳಿತ ವರ್ಗಕ್ಕೆ ಈ ರೀತಿಯ ಬೆದರಿಕೆ ಕರೆ ಬಂದಿದೆ. ಆಸ್ಟ್ರೇಲಿಯಾದ ವಿಕ್ಟೋರಿಯಾ ರಾಜ್ಯದಲ್ಲಿರುವ ಮೂರು ದೇವಾಲಯಗಳನ್ನು ವಿರೂಪಗೊಳಿಸಿದ ಬೆನ್ನಲ್ಲೇ ಇಂಥದ್ದೊಂದು ಬೆದರಿಕೆ ಬಂದಿದೆ. ಗಾಯತ್ರಿ ಮಂದಿರದ ಅಧ್ಯಕ್ಷ ಜೈ ರಾಮ್ ಮತ್ತು ಉಪಾಧ್ಯಕ್ಷ ಧರ್ಮೇಶ್ ಪ್ರಸಾದ್ ಅವರಿಗೆ ಶುಕ್ರವಾರ ಪ್ರತ್ಯೇಕ ಕರೆಗಳು ಬಂದಿದ್ದು, ಕರೆ ಮಾಡಿದಾತ ತನ್ನನ್ನು ಪಾಕಿಸ್ತಾನದ ನಂಕಾನಾ ಸಾಹಿಬ್‌ ಪ್ರದೇಶದ ನಿವಾಸಿ ಗುರುವಾದೇಶ್ ಸಿಂಗ್ ಎಂದು ಪರಿಚಯಿಸಿಕೊಂಡಿದ್ದಾನೆ. ಹಾಗೆಯೇ ದೇಗುಲದ ಆಡಳಿತವು ಖಲಿಸ್ತಾನಿಗಳಿಗೆ ಬೆಂಬಲಿಸಬೇಕೆಂದು ಹೇಳಿದ್ದಾನೆ.

“ಖಾಲಿಸ್ತಾನಕ್ಕೆ ಸಂಬಂಧಿಸಿದಂತೆ ನನ್ನ ಬಳಿ ಒಂದು ಸಂದೇಶವಿದೆ. ನೀವು ಮಹಾ ಶಿವರಾತ್ರಿಯನ್ನು ಆಚರಿಸಲು ಬಯಸುತ್ತಿದ್ದರೆ, ಖಾಲಿಸ್ತಾನವನ್ನು ಬೆಂಬಲಿಸಬೇಕು. ಶಿವರಾತ್ರಿಯ ಕಾರ್ಯಕ್ರಮದಲ್ಲಿ ‘ಖಲಿಸ್ತಾನ್ ಜಿಂದಾಬಾದ್’ ಎಂದು ಐದು ಬಾರಿ ಘೋಷಣೆ ಕೂಗುವುದಕ್ಕೆ ನಿಮ್ಮ ಪುರೋಹಿತರಿಗೆ ಹೇಳಿ” ಎಂದು ದೇವಸ್ಥಾನದ ಅಧ್ಯಕ್ಷರಿಗೆ ಕರೆ ಮಾಡಿದಾತ ಎಚ್ಚರಿಕೆ ಸಂದೇಶವನ್ನು ನೀಡಿರುವುದಾಗಿ ವರದಿಯಲ್ಲಿ ಹೇಳಲಾಗಿದೆ.

ಇದನ್ನೂ ಓದಿ: Temple Defaced : ಕೆನಡಾದ ದೇಗುಲವನ್ನು ವಿರೂಪಗೊಳಿಸಿದ ಖಲಿಸ್ತಾನಿ ಉಗ್ರರು

ಈ ಹಿಂದೆ, ಮೆಲ್ಬೋರ್ನ್‌ನ ಕ್ರೇಗಿಬರ್ನ್‌ನಲ್ಲಿರುವ ಕಾಳಿ ಮಾತಾ ಮಂದಿರಕ್ಕೆ ಭಜನೆ ಮತ್ತು ಪೂಜೆ ಕಾರ್ಯಕ್ರಮವನ್ನು ರದ್ದುಗೊಳಿಸಿ ಇಲ್ಲವೇ ಬೇರೆ ರೀತಿಯ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಕರೆ ಬಂದಿರುವುದು ವರದಿಯಾಗಿತ್ತು.

Exit mobile version