ವಾಷಿಂಗ್ಟನ್: ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುವ ಫೋಟೊಗಳು, ವಿಡಿಯೊಗಳು ಪ್ರಾದೇಶಿಕವಾಗಿ ಮಾತ್ರವಲ್ಲ ಜಾಗತಿಕವಾಗಿ ವೈರಲ್ ಆಗುತ್ತವೆ. ವಿಶ್ವದ ಗಣ್ಯರೂ ಅವುಗಳಿಗೆ ಪ್ರತಿಕ್ರಿಯಿಸುತ್ತಾರೆ. ಕಾಲೆಳೆದು, ತಮಾಷೆ ಮಾಡಿ ಮತ್ತೊಬ್ಬರ ನಗುವಿಗೆ ಕಾರಣರಾಗುತ್ತಾರೆ. ಇದಕ್ಕೆ ನಿದರ್ಶನ ಎಂಬಂತೆ, ಅಮೆರಿಕದ ಮ್ಯೂಸಿಯಂ ಒಂದರಲ್ಲಿ ಪ್ರತಿಷ್ಠಾಪಿಸಿರುವ ಬಾಲಯೇಸು ಮೂರ್ತಿಯು ಮೆಟಾ (ಫೇಸ್‌ಬುಕ್) ಸಿಇಒ ಮಾರ್ಕ್ ಜುಕರ್‌ಬರ್ಗ್ (Mark Zuckerberg) ಅವರಂತೆ ಹೋಲುತ್ತಿದೆ ಎಂಬ ಕುರಿತು ಜಾಲತಾಣಗಳಲ್ಲಿ ಭಾರಿ ಚರ್ಚೆಯಾಗುತ್ತಿದೆ.
ಸಾಮಾನ್ಯ ಜನ ಮಾತ್ರವಲ್ಲ ಟ್ವಿಟರ್ ಮಾಜಿ ಸಿಇಒ ಜಾಕ್ ಡಾರ್ಸಿ ಅವರು ಸಹ ಮೇರಿ ಮಾತೆ ಕೈಯಲ್ಲಿರುವ ಬಾಲಯೇಸು ಮೂರ್ತಿಯು ಜುಕರ್‌ಬರ್ಗ್ ಅವರಂತೆ ಹೋಲುತ್ತಿದೆ ಎಂದು ಹೇಳಿದ್ದಾರೆ. ವ್ಯಕ್ತಿಯೊಬ್ಬರು ಟ್ವಿಟರ್‌ನಲ್ಲಿ ಫೋಟೊ ಅಪ್‌ಲೋಡ್ ಮಾಡಿದ್ದು, ಮೆಟಾ ಸಿಇಒ ರೀತಿ ಬಾಲಯೇಸು ಇದ್ದಾರೆ ಎಂದು ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಡಾರ್ಸಿ, “ಮೆಟಾ” ಎಂದು ಬರೆದುಕೊಂಡಿದ್ದಾರೆ.
ಲಾಸ್ ಏಂಜಲೀಸ್‌ನಲ್ಲಿರುವ ಮ್ಯೂಸಿಯಂ ಆಫ್ ಆರ್ಟ್‌ನಲ್ಲಿ ಮೇರಿಮಾತೆ ಮೂರ್ತಿ ಪ್ರತಿಷ್ಠಾಪಿಸಿದ್ದು, ಅವರ ಕೈಯಲ್ಲಿ ಬಾಲಯೇಸು ಮೂರ್ತಿ ಇದ್ದಾರೆ. ಆದಾಗ್ಯೂ, ಬಾಲಯೇಸುವನ್ನು ಮಾರ್ಕ್ ಜುಕರ್‌ಬರ್ಗ್ ಅವರಿಗೆ ಹೋಲಿಸಿದ್ದಕ್ಕೆ ಒಂದಷ್ಟು ಜನ ಟೀಕಿಸಿದ್ದಾರೆ. ಬಾಲಯೇಸು ವಿಚಾರದಲ್ಲಿ ಹೀಗೆ ತಮಾಷೆ ಮಾಡುವ ಅವಶ್ಯಕತೆ ಇರಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ | ಫೇಸ್‌ಬುಕ್ ಸ್ಥಾಪಕ ಜುಕರ್‌ಬರ್ಗ್ ಮನೆ 245 ಕೋಟಿ ರೂ.ಗೆ ಮಾರಾಟ