ಟರ್ಕಿ: ಟರ್ಕಿ ಮತ್ತು ಸಿರಿಯಾ ಭಾಗದಲ್ಲಿ ಭೂಕಂಪನವಾಗಿ (Turkey Syria Earthquake) 12 ದಿನಗಳಾಗಿವೆ. ಈಗಲೂ ನಾಪತ್ತೆಯಾವದರಿಗಾಗಿ ಹುಡುಕಾಟ ಮುಂದುವರಿದಿದ್ದು, ಎರಡೂ ದೇಶಗಳಲ್ಲಿ ಸಾವನ್ನಪ್ಪಿದ್ದವರ ಸಂಖ್ಯೆ 45,000ಕ್ಕೆ ಏರಿಕೆಯಾಗಿದೆ. ಇನ್ನೂ ಸಾವಿರಾರು ಮಂದಿ ಕಟ್ಟಡಗಳ ಅವಶೇಷಗಳಡಿ ಸಿಲುಕಿರುವ ಸಾಧ್ಯತೆಯಿದೆ.
ಇದನ್ನೂ ಓದಿ: Turkey Earthquake: ಟರ್ಕಿ ಕಳಿಸಿದ್ದನ್ನೇ ಬಾಕ್ಸ್ ಬದಲಿಸಿ ವಾಪಸ್ ಕೊಟ್ಟ ಪಾಕಿಸ್ತಾನ; ಪತ್ರಕರ್ತನೇ ಬಾಯ್ಬಿಟ್ಟ ಮುಜುಗರದ ಸಂಗತಿ
ಶನಿವಾರದಂದು ಒಂದು ಮಗು ಸೇರಿದಂತೆ ಒಟ್ಟು ಮೂವರನ್ನು ರಕ್ಷಿಸಲಾಗಿದೆ ಎಂದು ವರdiಯಾಗಿದೆ. ಅದರಲ್ಲಿ ತಂದೆ ಮಾಧ್ಯಮದವರೊಂದಿಗೆ ಮಾತನಾಡಿದ್ದು, “ನನ್ನ ಮಗ ಬದುಕಿರುವುದಕ್ಕೆ ಸಾಧ್ಯವೇ ಇಲ್ಲ ಎಂದು ನಾವೆಂದುಕೊಂಡಿದ್ದೆವು. ಆದರೆ ಪವಾಡವೆನ್ನುವಂತೆ ಇಷ್ಟು ದಿನವಾದ ಮೇಲೂ ನನ್ನ ಮಗ ಜೀವಂತವಾಗಿಯೇ ಸಿಕ್ಕಿದ್ದಾನೆ. ಎಲ್ಲವೂ ದೇವರ ಕೃಪೆ” ಎಂದು ಹೇಳಿದ್ದಾರೆ.
ಟರ್ಕಿ ಭೂ ಪ್ರದೇಶದಲ್ಲಿ 39,672 ಮಂದಿ ಸಾವನ್ನಪ್ಪಿರುವುದಾಗಿ ವರದಿಯಾಗಿದೆ. ಹಾಗೆಯೇ ಸಿರಿಯಾ ಪ್ರದೇಶದಲ್ಲಿ 5,800 ಮಂದಿಯ ಸಾವಿನ ವರದಿಯಿದೆ. ಹಲವು ದಿನಗಳಿಂದ ಸಿರಿಯಾ ವರದಿ ಅಷ್ಟರಲ್ಲೇ ಇದ್ದು, ಒಮ್ಮೆಲೆ ಏರಿಕೆಯಾಗುವ ಸಾಧ್ಯತೆಯಿದೆ. ಭೂಕಂಪನವಾದ ಸ್ಥಳಕ್ಕೆ ರಕ್ಷಣೆಗೆಂದು ತೆರಳಿದ್ದ ಅಂತಾರಾಷ್ಟ್ರೀಯ ರಕ್ಷಣಾ ತಂಡಗಳು ಈಗಾಗಲೇ ವಾಪಸು ತೆರಳಿವೆ. ಸದ್ಯ ಸ್ಥಳೀಯ ಸರ್ಕಾರದ ರಕ್ಷಣಾ ತಂಡಗಳು ಕಟ್ಟಡದ ಅವಶೇಷಗಳಡಿ ಸಿಲುಕಿರುವವರಿಗಾಗಿ ಹುಡುಕಾಟ ನಡೆಸುತ್ತಿವೆ. ಅವುಗಳೊಂದಿಗೆ ಸಾರ್ವಜನಿಕರೂ ಕೂಡ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದಾರೆ.