ವಾಷಿಂಗ್ಟನ್: 13 ವರ್ಷದ ಹುಡುಗನೊಂದಿಗೆ ಲೈಂಗಿಕ ಸಂಪರ್ಕ ಬೆಳೆಸಿ, ಆತನ ಮಗುವಿಗೆ ತಾಯಿಯಾಗಿದ್ದ 31 ವರ್ಷದ ಮಹಿಳೆ ಜೈಲು ಶಿಕ್ಷೆಯಿಂದ ಪಾರಾಗಿದ್ದಾಳೆ. ಯುಎಸ್ನ ಕೊಲೊರಾಡೋ ಎಂಬ ರಾಜ್ಯದಲ್ಲಿ ಆಂಡ್ರಿಯಾ ಸೆರಾನೊ ಎಂಬ ಮಹಿಳೆ ವಿರುದ್ಧ ಲೈಂಗಿಕ ದೌರ್ಜನ್ಯದ ವಿರುದ್ಧ ಕೇಸ್ ದಾಖಲಾಗಿತ್ತು. ಅಷ್ಟೇ ಅಲ್ಲ ಕಳೆದ ವರ್ಷ ಅವರು ಅರೆಸ್ಟ್ ಕೂಡ ಆಗಿದ್ದರು. ತಾನು 13 ವರ್ಷ ಹುಡುಗನೊಂದಿಗೆ ಲೈಂಗಿಕ ಸಂಪರ್ಕ ಇಟ್ಟುಕೊಂಡು, ಗರ್ಭಿಣಿಯಾಗಿದ್ದಾಗಿ ಒಪ್ಪಿಕೊಂಡಿದ್ದ ಅವರು ಬಳಿಕ ಮಗುವಿಗೂ ಜನ್ಮ ನೀಡಿದ್ದಾರೆ. ಫೌಂಟೇನ್ ಠಾಣೆ ಪೊಲೀಸ್ ಕಸ್ಟಡಿಯಲ್ಲಿ ಇದ್ದ ಮಹಿಳೆ ಕಾರಾಗೃಹಕ್ಕೆ ಹೋಗುವ ಅಗತ್ಯವಿಲ್ಲ ಎಂದು ಕೋರ್ಟ್ ಹೇಳಿದೆ.
ಆಂಡ್ರಿಯಾ ಸೆರಾನೊ ವಿರುದ್ಧ ದಾಖಲಾಗಿದ್ದ ಲೈಂಗಿಕ ದೌರ್ಜನ್ಯದ ಕೇಸ್ನ್ನು ತೆಗೆದು ಹಾಕಿ, ಆಕೆಯನ್ನು ಲೈಂಗಿಕ ಅಪರಾಧಿ ಎಂದಷ್ಟೇ ಪರಿಗಣಿಸುವಂತೆ ಮಾಡುವಲ್ಲಿ ಆಕೆಯ ಪರ ವಕೀಲರು ಯಶಸ್ವಿಯಾಗಿದ್ದಾರೆ. ಪ್ರಾಸಿಕ್ಯೂಟರ್ಗಳೊಂದಿಗೆ ಈ ಬಗ್ಗೆ ಒಪ್ಪಂದಕೂಡ ಮಾಡಿಕೊಳ್ಳಲಾಗಿದ್ದು, ತನ್ನನ್ನು ಲೈಂಗಿಕ ಅಪರಾಧಿ ಎಂದು ಪರಿಗಣಿಸಲು ಆಂಡ್ರಿಯಾ ಸೆರಾನೊ ಒಪ್ಪಿಕೊಂಡಿದ್ದಾರೆ. ಹೀಗಾಗಿ ಆಕೆ ಜೈಲಿಗೆ ಹೋಗುವ ಅಗತ್ಯವಿಲ್ಲ ಎಂದು ಹೇಳಲಾಗಿದೆ. ಆದರೆ ಆಂಡ್ರಿಯಾ ಸೆರಾನೊ ಜೈಲು ಶಿಕ್ಷೆಯಿಂದ ಪಾರಾಗಿದ್ದು, ಆ 13 ವರ್ಷದ ಹುಡುಗನ ತಾಯಿಗೆ ಅಸಮಾಧಾನ ತಂದಿದೆ. ಆಕೆ ನನ್ನ ಮಗನನ್ನು ಲೈಂಗಿಕವಾಗಿ ಬಳಸಿಕೊಂಡಳು. ಇದರಿಂದಾಗಿ ಅವನ ಬಾಲ್ಯ ಹಾಳಾಗಿ ಹೋಯಿತು. ಅವನು ಈಗಲೇ ತಂದೆಯಾಗಿಬಿಟ್ಟ. ನಿಜಕ್ಕೂ ನನ್ನ ಮಗ ಸಂತ್ರಸ್ತ. ಇಡೀ ಜೀವನವೆಲ್ಲ ಅವನು ಇದೇ ಕೊರಗಲ್ಲೇ ಕಳೆಯಬೇಕು’ ಎಂದು ನೊಂದುಕೊಂಡಿದ್ದಾರೆ.
ಇದನ್ನೂ ಓದಿ: Food Tips: ಅಡುಗೆಮನೆಯ ಒಗ್ಗರಣೆ ಡಬ್ಬಿ ನಿಮ್ಮ ಲೈಂಗಿಕ ಜೀವನಕ್ಕೂ ಒಗ್ಗರಣೆಯೇ!