Site icon Vistara News

Viral video: ಟೋಕಿಯೋ ನಿಲ್ದಾಣದಲ್ಲಿ ಎರಡು ವಿಮಾನ ಡಿಕ್ಕಿ, ಹೊತ್ತಿ ಉರಿದ ವಿಮಾನ, ವಿಡಿಯೋ ಇಲ್ಲಿದೆ

flight in flames

ಟೋಕಿಯೋ: ಹೊಸ ವರ್ಷದ ಮುನ್ನಾದಿನ ಭಾರಿ ಭೂಕಂಪಕ್ಕೆ (Japan Earthquake) ತುತ್ತಾದ ಜಪಾನ್‌ನಲ್ಲಿ ಇನ್ನೊಂದು ದುರಂತ ಸಂಭವಿಸಿದ್ದು, ಟೋಕಿಯೋ ವಿಮಾನ ನಿಲ್ದಾಣದಲ್ಲಿ (Tokyo international Airport) ಇಳಿಯುತ್ತಿದ್ದ ವಿಮಾನ ನಿಂತಿದ್ದ ಇನ್ನೊಂದು ವಿಮಾನಕ್ಕೆ ಡಿಕ್ಕಿಯಾದ ಬಳಿಕ ಹೊತ್ತಿ (flight in flames) ಉರಿದಿದೆ. ತಕ್ಷಣ ಪ್ರಯಾಣಿಕರನ್ನು ಇಳಿಸಿ ಪಾರು ಮಾಡಲಾಗಿದೆ. ವಿಮಾನ ಉರಿಯುತ್ತಿರುವ ವಿಡಿಯೋ ವೈರಲ್‌ (Viral video) ಆಗಿದೆ.

ಟೋಕಿಯೋ ಹನೇದಾ ಏರ್‌ಪೋರ್ಟ್‌ನಲ್ಲಿ ಈ ಘಟನೆ ನಡೆದಿದೆ. ಜಪಾನ್‌ ಏರ್‌ಲೈನ್ಸ್‌ (Japan Airlines) ಪ್ಯಾಸೆಂಜರ್‌ ಏರ್‌ಬಸ್-‌ 350 ವಿಮಾನ ಇಳಿದು ರನ್‌ವೇನಲ್ಲಿ ಓಡುತ್ತಿದ್ದಾಗ ಜಪಾನ್‌ ಕೋಸ್ಟ್‌ಗಾರ್ಡ್‌ ಏರ್‌ಕ್ರಾಫ್ಟ್‌ಗೆ ಡಿಕ್ಕಿಯಾಯಿತು. ಕೂಡಲೇ ಬೆಂಕಿ ಹೊತ್ತಿಕೊಂಡಿತು.

ಸದ್ಯದ ವರದಿಗಳ ಪ್ರಕಾರ ಯಾವುದೇ ಪ್ರಾಣಾಪಾಯ ಆಗಿಲ್ಲ. ಪ್ರಯಾಣಿಕರನ್ನು ಕೂಡಲೇ ಇಳಿಸಿ ಮಾರು ಮಾಡಲಾಗಿದೆ. ಸುದ್ದಿಸಂಸ್ಥೆಗಳು ತೋರಿಸಿದ ಕೆಲವು ವಿಡಿಯೋಗಳಲ್ಲಿ, ಬೆಂಕಿ ಹೊತ್ತಿ ಉರಿಯುತ್ತಾ ಓಡುತ್ತಿರುವ ವಿಮಾನವನ್ನು ತೋರಿಸಲಾಗಿದೆ.

ವಿಮಾನದಲ್ಲಿ 367 ಪ್ರಯಾಣಿಕರಿದ್ದರು. ಪ್ರಾಥಮಿಕ ವರದಿಗಳ ಪ್ರಕಾರ ಅಷ್ಟೂ ಮಂದಿ ಪಾರಾಗಿದ್ದಾರೆ. ಇನ್ನಷ್ಟು ವಿವರಗಳು ತಿಳಿಯಬೇಕಿವೆ.

ನಿನ್ನೆ ಜಪಾನ್‌ನ ಕೆಲವು ಭಾಗಗಳಲ್ಲಿ 7.6 ರಿಕ್ಟರ್‌ ಮಾಪನದ ಭಾರಿ ಭೂಕಂಪ ಸಂಭವಿಸಿತ್ತು. ಪರಿಣಾಮ 24 ಮಂದಿ ಸತ್ತಿದ್ದರು. ನೂರಾರು ಮಂದಿ ಗಾಯಗೊಂಡಿದ್ದರು. ಹಲವು ಕಟ್ಟಡಗಳು ಧ್ವಂಸವಾಗಿವೆ. ಸಾರ್ವಜನಿಕ ಆಸ್ತಿಪಾಸ್ತಿ ಹಾನಿಯಾಗಿದೆ. ಸಣ್ಣ ಪ್ರಮಾಣದ ಸುನಾಮಿ ಕೂಡ ಕಾಣಿಸಿಕೊಂಡು ಸಮುದ್ರ ತೀರದಲ್ಲಿ ಹಾನಿ ಎಸಗಿದೆ.

ಇದನ್ನೂ ಓದಿ: Japan Earthquake: ಜಪಾನ್‌ನಲ್ಲಿ ಒಂದೇ ದಿನ 155 ಕಂಪನ, ಸಾವಿನ ಸಂಖ್ಯೆ 24ಕ್ಕೆ

Exit mobile version