Site icon Vistara News

ಹೆಚ್ಚೆಂದರೆ 3 ವರ್ಷ ಬದುಕಲಿದ್ದಾರೆ ರಷ್ಯಾ ಅಧ್ಯಕ್ಷ ಪುಟಿನ್‌, ದೃಷ್ಟಿಯೂ ಹೋಗಿದೆ: ಗುಪ್ತಚರ ದಳದ ವರದಿ

Russia suspends participation nuclear treaty with U.S

ಮಾಸ್ಕೋ: ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ (Russian President Vladimir Putin) ಎಲ್ಲಿ ಹೋದರು? ಅವರ ಆರೋಗ್ಯಕ್ಕೇನಾಯಿತು?- ಇದೊಂದು ಚರ್ಚೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚಾಲ್ತಿಯಲ್ಲಿದೆ. ಒಂದೆಡೆ ಉಕ್ರೇನ್‌ ಮೇಲೆ ರಷ್ಯಾ ಯುದ್ಧ ಮುಂದುವರಿದಿದೆ, ಇನ್ನೊಂದೆಡೆ ರಷ್ಯಾ ಅಧ್ಯಕ್ಷ ಪುಟಿನ್‌ ನಿಗೂಢವಾಗುತ್ತಿದ್ದಾರೆ. ಕೆಲವು ದಿನಗಳ ಹಿಂದೆ ಪುಟಿನ್‌ರ ವಿಡಿಯೋಗಳು ವೈರಲ್‌ ಆಗಿದ್ದವು. ಅವರು ಕಾರ್ಯಕ್ರಮವೊಂದರಲ್ಲಿ ನಡುಗುತ್ತ ನಿಂತಿದ್ದು, ಕುಳಿತುಕೊಂಡಾಗಲೂ ಎದುರಿನ ಟೇಬಲ್‌ನ್ನು ಗಟ್ಟಿಯಾಗಿ ಹಿಡಿದುಕೊಂಡು ಉಗುಳು ನುಂಗುತ್ತಿರುವುದು, ಆಗಾಗ ಕೆಮ್ಮುತ್ತಿರುವ ದೃಶ್ಯಗಳು ಕಂಡುಬಂದಿದ್ದವು. ಅದರ ಬೆನ್ನಲ್ಲೇ ಅವರ ಆರೋಗ್ಯದ ಬಗ್ಗೆ ಹಲವು ಸುದ್ದಿಗಳು ಹಬ್ಬಿದ್ದವು.

ವ್ಲಾದಿಮಿರ್‌ ಪುಟಿನ್‌ ಪಾರ್ಕಿನ್‌ಸನ್‌ ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂದು ಒಂದು ವರದಿ ಹೇಳಿದ್ದರೆ, ಇನ್ನೊಂದು ಮೂಲಗಳು, ಪುಟಿನ್‌ಗೆ ಹೊಟ್ಟೆಯ ಕ್ಯಾನ್ಸರ್‌ ಆಗಿದೆ. ಶೀಘ್ರವೇ ಸರ್ಜರಿಗೆ ಒಳಗಾಗಲಿದ್ದಾರೆ ಎಂದು ಹೇಳಿದ್ದವು. ಇದೆಲ್ಲದರ ಮಧ್ಯೆ ಅವರು ಬ್ಲಡ್‌ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆಂಬ ವದಂತಿಯೂ ಹರಡಿತ್ತು. ಆದರೆ ರಷ್ಯಾ ಸರ್ಕಾರ ಕ್ರೆಮ್ಲಿನ್‌ ಪದೇಪದೇ ಇವೆಲ್ಲವನ್ನೂ ನಿರಾಕರಿಸುತ್ತಲೇ ಬಂದಿದೆ. ಪುಟಿನ್‌ ಆರೋಗ್ಯವಾಗಿದ್ದಾರೆ. ಯಾವುದೇ ಗಾಳಿಸುದ್ದಿಗಳನ್ನೂ ನಂಬಬೇಡಿ ಎಂದು ಹೇಳುತ್ತಲೇ ಬಂದಿದೆ.

ಇದನ್ನೂ ಓದಿ: ಪುಟಿನ್‌ಗೆ ಕ್ಯಾನ್ಸರ್:‌ ಬರಲಿದ್ದಾನೆ ಅವನಿಗಿಂತಲೂ ದೊಡ್ಡ ರಾಕ್ಷಸ!

ಪುಟಿನ್‌ ಬದುಕಿಲ್ಲ !
ಇಷ್ಟೆಲ್ಲ ಬೆಳವಣಿಗೆಗಳ ಮಧ್ಯೆ ಬ್ರಿಟಿಷ್‌ ಗುಪ್ತಚರ ಸಂಸ್ಥೆಯಾದ MI6 ಒಂದು ಆತಂಕಕಾರಿ ವಿಚಾರವನ್ನು ತಿಳಿಸಿದ್ದಾಗಿ ದಿ ಡೇಲಿ ಸ್ಟಾರ್‌ ಎಂಬ ಟ್ಯಾಬ್ಲಾಯ್ಡ್‌ ಮಾಧ್ಯಮ ವರದಿ ಮಾಡಿದೆ. ʼಪುಟಿನ್‌ ಈಗಾಗಲೇ ಮೃತಪಟ್ಟಿರಬಹುದು. ಆದರೆ ಒಮ್ಮೆಲೇ ಅದನ್ನು ಬಹಿರಂಗಪಡಿಸುವುದಿಲ್ಲ. ಒಂದೆರಡು ವಾರ ಅದನ್ನು ಗುಟ್ಟಾಗಿಯೇ ಇಡಬಹುದು. ಹಿಂದೊಮ್ಮೆ ಪುಟಿನ್‌ ಅನಾರೋಗ್ಯಕ್ಕೀಡಾದಾಗ ಅದನ್ನು ಮುಚ್ಚಿಡಲು ಕ್ರೆಮ್ಲಿನ್‌ ಅವರ ಡ್ಯೂಪ್‌ನ್ನು ಬಳಸಿತ್ತು. ಈ ಬಾರಿಯೂ ಅದನ್ನೇ ಮಾಡಬಹುದು ಎಂದು ಹೇಳಿದೆ.

ರಷ್ಯಾ ಗುಪ್ತಚರ ಸಂಸ್ಥೆ ಹೇಳೋದೇನು?
ವ್ಲಾದಿಮಿರ್‌ ಪುಟಿನ್‌ ಬಗ್ಗೆ ರಷ್ಯಾ ಗುಪ್ತಚರ ಸಂಸ್ಥೆ ಇನ್ನೊಂದು ವಿಷಯ ತಿಳಿಸಿದೆ. ಪುಟಿನ್‌ರಿಗೆ ಕಣ್ಣು ಕಾಣಿಸುತ್ತಿಲ್ಲ. ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಹೆಚ್ಚೆಂದರೆ ಮೂರು ವರ್ಷಗಳಷ್ಟೇ ಬದುಕಬಹುದು ಎಂದು ತಿಳಿಸಿದ್ದಾರೆ ದಿ ಸಂಡೇ ಮಿರರ್‌ ಎಂಬ ಮಾಧ್ಯಮ ವರದಿ ಮಾಡಿದೆ. ರಷ್ಯಾ ಅಧ್ಯಕ್ಷರು ಗಂಭೀರ ಸ್ವರೂಪದ ಕ್ಯಾನ್ಸರ್‌ನಿಂದ ಬಳಲುತ್ತಿದ್ದು, ಇದೇ ಕಾರಣಕ್ಕೇ ಅವರ ದೃಷ್ಟಿಯೂ ಹೋಗಿದೆ. ಇದರೊಂದಿಗೆ ವಿಪರೀತ ತಲೆ ನೋವು ಅವರನ್ನು ಕಾಡುತ್ತಿದೆ. ಕೈಕಾಲುಗಳೆಲ್ಲ ನಿಯಂತ್ರಣಕ್ಕೆ ಸಿಗದಷ್ಟು ನಡುಗುತ್ತಿವೆ ಎಂದೂ ರಷ್ಯನ್‌ ಸ್ಪೈ ಮೂಲಗಳಿಂದ ಗೊತ್ತಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಇದನ್ನೂ ಓದಿ: ಬೇಹುಗಾರಿಕೆಗೆ ಡಾಲ್ಫಿನ್‌ ಬಳಸುತ್ತಿರುವ ರಷ್ಯಾ!

Exit mobile version